ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬೇಲೂರಿನಲ್ಲಿ ಮತ್ತೊಂದು ಕಾಡಾನೆ ದಾಳಿ – 2 ದಿನಗಳಲ್ಲಿ ಇಬ್ಬರ ದುರ್ಮರಣಬೇಲೂರು 56 ಕಾಡಾನೆಗಳನ್ನು ತಿಂಗಳೊಳಗೆ ಸ್ಥಳಾಂತರ – ಸಚಿವ ಕೆ. ಎಂ. ಶಿವಲಿಂಗೇಗೌಡ ಭರವಸೆಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ: ಬಿಜೆಪಿ ನಾಯಕರ ಮನವೊಲಿಕೆಗೆ ಕುಮಾರಸ್ವಾಮಿ ಯತ್ನಬೆಂಗಳೂರಿನಿಂದ ಮಧುರೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ; ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತಲೋಕ ಸುತ್ತಾಟ : ಪ್ರಕೃತಿ ವಿಸ್ಮಯದ ಪ್ರವಾಸಿ ತಾಣ : ವಿಯೆಟ್ನಾಂ ಬಾ ನಾ ಹಿಲ್ಸ್‌“ಇದು ಯಾರಪ್ಪನ ಭಾರತವಲ್ಲ” – ಹಾಡುಗಳಲ್ಲಿ ರಾಹತ್ ಇಂದೂರಿ ಸಾಲುಗಳ ನಿರ್ಬಂಧಕ್ಕೆ ಸ್ಥಳೀಯ ಆಡಳಿತಕ್ಕೆ ದಿಲ್ಜಿತ್ ದೋಸಾಂಜ್ ತಿರುಗೇಟು!ಫುಕೆಟ್‌ನಲ್ಲಿ ಭೀಕರ ಅಗ್ನಿ ದುರಂತ: 11 ಮಂದಿ ಸಾವು, 16 ಜನರಿಗೆ ಗಾಯಕಸ್ತೂರಿರಂಗನ್ ವರದಿ: ಅರಣ್ಯ ಗಡಿ ಗೊಂದಲಕ್ಕೆ ಶಾಶ್ವತ ಪರಿಹಾರ, ಒಂದು ವರ್ಷದೊಳಗೆ ಜಂಟಿ ಭೌತಿಕ ಸಮೀಕ್ಷೆ : ಸಚಿವ ರಾಮಲಿಂಗಾರೆಡ್ಡಿಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲದ ಅಧಿವೇಶನ: ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಗೆ ಕೇಂದ್ರದ ಸಿದ್ಧತೆಐಸಿಸಿ ಅಧ್ಯಕ್ಷರಾಗಿ ಅಮಿತ್ ಷಾ ಪುತ್ರ ಜಯ್ ಶಾ ಎರಡನೇ ಅವಧಿಗೆ ಅವಿರೋಧ ಆಯ್ಕೆಎನ್‌ವಿಡಿಯಾದಲ್ಲಿ ನಾಯಕತ್ವದ ಪಲ್ಲಟಕ್ಕೆ ಸಿದ್ಧತೆ; ಜೆನ್ಸನ್ ಹುವಾಂಗ್ ಮರುಪ್ರವೇಶಕ್ಕೆ ಮಸ್ಕ್ ಬೆಂಬಲಅಡಿಕೆ, ತೆಂಗಿನ ತೋಟಗಳ ರಕ್ಷಣೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆಹಿರಿಯೂರು ಉಪಚುನಾವಣೆ ಕಣಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಸಕ್ತಿ; ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆನವೆಂಬರ್ 16ರ ಸಹಿಷ್ಣುತೆ ದಿನ ಆಚರಿಸುವ ನೈತಿಕ ಅರ್ಹತೆ ಜಗತ್ತಿಗಿದೆಯೇ?ಬಹ್ರೇನ್‌ನ ಅಮೆರಿಕ ಸೇನಾ ನೆಲೆಗೆ ಇರಾನ್‌ನಿಂದ ಡ್ರೋನ್ ದಾಳಿ ಯತ್ನಬ್ರಿಟನ್ ಪೌರತ್ವ ಪಡೆದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ; 2010ರಿಂದ ಭಾರತದಿಂದ ಹೊರಗೆ ವಾಸ, ದೇಶ ತೊರೆದವರ ಪಟ್ಟಿಗೆ ಮತ್ತೊಂದು ಸೇರ್ಪಡೆಪಶ್ಚಿಮ ಬಂಗಾಳ: ಪೊಲೀಸರ ಗುಂಡಿನ ದಾಳಿಗೆ ಆರೋಪಿ ಸಾವು; ಆರು ತಿಂಗಳಲ್ಲಿ ಐದನೇ ಎನ್‌ಕೌಂಟರ್ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪದೆಹಲಿ ವಾಯುಮಾಲಿನ್ಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಚೇರಿಗೆ ತೆರಳಲು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ನಿರ್ಧಾರ

ಬೇಲೂರು 56 ಕಾಡಾನೆಗಳನ್ನು ತಿಂಗಳೊಳಗೆ ಸ್ಥಳಾಂತರ – ಸಚಿವ ಕೆ. ಎಂ. ಶಿವಲಿಂಗೇಗೌಡ ಭರವಸೆ

ಬೇಲೂರು 56 ಕಾಡಾನೆಗಳನ್ನು ತಿಂಗಳೊಳಗೆ ಸ್ಥಳಾಂತರ – ಸಚಿವ ಕೆ. ಎಂ. ಶಿವಲಿಂಗೇಗೌಡ ಭರವಸೆ

ಹಾಸನ: ಜಿಲ್ಲೆಯ ಬೇಲೂರು ತಾಲೂಕಿನಲ್ಲಿ ಮೂರು ದಿನಗಳ ಅಂತರದಲ್ಲಿ ಕಾಡಾನೆಗಳ ದಾಳಿಗೆ ಇಬ್ಬರು ದುರ್ಮರಣಕ್ಕೀಡಾದ ಹಿನ್ನೆಲೆಯಲ್ಲಿ ಆಕ್ರೋಶಗೊಂಡ ಸಾರ್ವಜನಿಕರು ಮೂಡಿಗೆರೆ–ಬೇಲೂರು ರಸ್ತೆಯಲ್ಲಿ ದಿಢೀರ್ ಪ್ರತಿಭಟನೆ ನಡೆಸಿದರು. ಸ್ಥಳಕ್ಕೆ ಭೇಟಿ ನೀಡಿ ಅಹವಾಲು ಆಲಿಸಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ (KM Shivalingegowda), ಒಂದು ತಿಂಗಳೊಳಗೆ ಎಲ್ಲಾ 56 ಕಾಡಾನೆಗಳನ್ನು ಸೆರೆಹಿಡಿದು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ಸ್ಥಳೀಯರ ಆತಂಕ ಮತ್ತು ಆಕ್ರೋಶಕ್ಕೆ ಸ್ಪಂದಿಸಿದ ಸಚಿವ ಕೆ. ಎಂ. ಶಿವಲಿಂಗೇಗೌಡ ಅವರು, ಬೇಲೂರು ಭಾಗದಲ್ಲಿ ಬೀಡುಬಿಟ್ಟಿರುವ ಪುಂಡಾನೆಗಳು ಸೇರಿದಂತೆ ಒಟ್ಟು 56 ಕಾಡಾನೆಗಳನ್ನು ಸೆರೆಹಿಡಿದು ಭದ್ರಾ ಅಭಯಾರಣ್ಯಕ್ಕೆ ಸ್ಥಳಾಂತರಿಸುವಂತೆ ರಾಜ್ಯ ಸರ್ಕಾರ ಈಗಾಗಲೇ ಆದೇಶ ಹೊರಡಿಸಿದೆ. ಒಂದು ತಿಂಗಳೊಳಗೆ ಈ ಆನೆಗಳನ್ನು ಸ್ಥಳಾಂತರಿಸಲಾಗುವುದು. ತಕ್ಷಣವೇ ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಭರವಸೆ ನೀಡಿದರು.

ಕಾಡಾನೆಗಳ ಹಾವಳಿಯಿಂದ ಜನರು ಅನುಭವಿಸುತ್ತಿರುವ ಸಂಕಷ್ಟದ ಗಂಭೀರತೆಯನ್ನು ಸರ್ಕಾರ ಪರಿಗಣಿಸಿದ್ದು, ಸಾರ್ವಜನಿಕರ ಜೀವ ರಕ್ಷಣೆಗೆ ಆದ್ಯತೆ ನೀಡುವ ನಿಟ್ಟಿನಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂಬುದನ್ನು ಸಚಿವರು ಸ್ಪಷ್ಟಪಡಿಸಿದರು. ಈ ಸಂದರ್ಭ ಹಾಸನ ಸಂಸದರಾದ ಶ್ರೇಯಸ್‌ ಎಂ. ಪಟೇಲ್‌ ಉಪಸ್ಥಿತರಿದ್ದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು