ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬೇಲೂರಿನಲ್ಲಿ ಮತ್ತೊಂದು ಕಾಡಾನೆ ದಾಳಿ – 2 ದಿನಗಳಲ್ಲಿ ಇಬ್ಬರ ದುರ್ಮರಣಬೇಲೂರು 56 ಕಾಡಾನೆಗಳನ್ನು ತಿಂಗಳೊಳಗೆ ಸ್ಥಳಾಂತರ – ಸಚಿವ ಕೆ. ಎಂ. ಶಿವಲಿಂಗೇಗೌಡ ಭರವಸೆಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ: ಬಿಜೆಪಿ ನಾಯಕರ ಮನವೊಲಿಕೆಗೆ ಕುಮಾರಸ್ವಾಮಿ ಯತ್ನಬೆಂಗಳೂರಿನಿಂದ ಮಧುರೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ; ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತಲೋಕ ಸುತ್ತಾಟ : ಪ್ರಕೃತಿ ವಿಸ್ಮಯದ ಪ್ರವಾಸಿ ತಾಣ : ವಿಯೆಟ್ನಾಂ ಬಾ ನಾ ಹಿಲ್ಸ್‌“ಇದು ಯಾರಪ್ಪನ ಭಾರತವಲ್ಲ” – ಹಾಡುಗಳಲ್ಲಿ ರಾಹತ್ ಇಂದೂರಿ ಸಾಲುಗಳ ನಿರ್ಬಂಧಕ್ಕೆ ಸ್ಥಳೀಯ ಆಡಳಿತಕ್ಕೆ ದಿಲ್ಜಿತ್ ದೋಸಾಂಜ್ ತಿರುಗೇಟು!ಫುಕೆಟ್‌ನಲ್ಲಿ ಭೀಕರ ಅಗ್ನಿ ದುರಂತ: 11 ಮಂದಿ ಸಾವು, 16 ಜನರಿಗೆ ಗಾಯಕಸ್ತೂರಿರಂಗನ್ ವರದಿ: ಅರಣ್ಯ ಗಡಿ ಗೊಂದಲಕ್ಕೆ ಶಾಶ್ವತ ಪರಿಹಾರ, ಒಂದು ವರ್ಷದೊಳಗೆ ಜಂಟಿ ಭೌತಿಕ ಸಮೀಕ್ಷೆ : ಸಚಿವ ರಾಮಲಿಂಗಾರೆಡ್ಡಿಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲದ ಅಧಿವೇಶನ: ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಗೆ ಕೇಂದ್ರದ ಸಿದ್ಧತೆಐಸಿಸಿ ಅಧ್ಯಕ್ಷರಾಗಿ ಅಮಿತ್ ಷಾ ಪುತ್ರ ಜಯ್ ಶಾ ಎರಡನೇ ಅವಧಿಗೆ ಅವಿರೋಧ ಆಯ್ಕೆಎನ್‌ವಿಡಿಯಾದಲ್ಲಿ ನಾಯಕತ್ವದ ಪಲ್ಲಟಕ್ಕೆ ಸಿದ್ಧತೆ; ಜೆನ್ಸನ್ ಹುವಾಂಗ್ ಮರುಪ್ರವೇಶಕ್ಕೆ ಮಸ್ಕ್ ಬೆಂಬಲಅಡಿಕೆ, ತೆಂಗಿನ ತೋಟಗಳ ರಕ್ಷಣೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆಹಿರಿಯೂರು ಉಪಚುನಾವಣೆ ಕಣಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಸಕ್ತಿ; ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆನವೆಂಬರ್ 16ರ ಸಹಿಷ್ಣುತೆ ದಿನ ಆಚರಿಸುವ ನೈತಿಕ ಅರ್ಹತೆ ಜಗತ್ತಿಗಿದೆಯೇ?ಬಹ್ರೇನ್‌ನ ಅಮೆರಿಕ ಸೇನಾ ನೆಲೆಗೆ ಇರಾನ್‌ನಿಂದ ಡ್ರೋನ್ ದಾಳಿ ಯತ್ನಬ್ರಿಟನ್ ಪೌರತ್ವ ಪಡೆದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ; 2010ರಿಂದ ಭಾರತದಿಂದ ಹೊರಗೆ ವಾಸ, ದೇಶ ತೊರೆದವರ ಪಟ್ಟಿಗೆ ಮತ್ತೊಂದು ಸೇರ್ಪಡೆಪಶ್ಚಿಮ ಬಂಗಾಳ: ಪೊಲೀಸರ ಗುಂಡಿನ ದಾಳಿಗೆ ಆರೋಪಿ ಸಾವು; ಆರು ತಿಂಗಳಲ್ಲಿ ಐದನೇ ಎನ್‌ಕೌಂಟರ್ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪದೆಹಲಿ ವಾಯುಮಾಲಿನ್ಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಚೇರಿಗೆ ತೆರಳಲು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ನಿರ್ಧಾರ

ಫುಕೆಟ್‌ನಲ್ಲಿ ಭೀಕರ ಅಗ್ನಿ ದುರಂತ: 11 ಮಂದಿ ಸಾವು, 16 ಜನರಿಗೆ ಗಾಯ

PPeepal Media Desk

Peepal Media Desk ವಿದೇಶ

• 1 ನಿಮಿಷದ ಓದು

ಫುಕೆಟ್‌ನಲ್ಲಿ ಭೀಕರ ಅಗ್ನಿ ದುರಂತ: 11 ಮಂದಿ ಸಾವು, 16 ಜನರಿಗೆ ಗಾಯ

ಫುಕೆಟ್ : ಥೈಲ್ಯಾಂಡ್‌ನ ಪ್ರಮುಖ ಪ್ರವಾಸಿ ತಾಣವಾಗಿರುವ ಫುಕೆಟ್‌ನಲ್ಲಿ ಸೋಮವಾರ ಮುಂಜಾನೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ 11 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ. ವಾಣಿಜ್ಯ ಕಟ್ಟಡವೊಂದರಲ್ಲಿ ಆರಂಭವಾದ ಬೆಂಕಿ ಕ್ಷಣಾರ್ಧದಲ್ಲಿ ಸುತ್ತಮುತ್ತಲಿನ ಕಟ್ಟಡಗಳಿಗೂ ವ್ಯಾಪಿಸಿ ಭಾರಿ ಅನಾಹುತಕ್ಕೆ ಕಾರಣವಾಗಿದೆ.

ಫುಕೆಟ್‌ನ ಪಶ್ಚಿಮ ಕರಾವಳಿಯ ಪಟೋಂಗ್ ಬೀಚ್ ಸಮೀಪದ ವಾಣಿಜ್ಯ ಪ್ರದೇಶದಲ್ಲಿ ಮುಂಜಾನೆ 3.17ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ವಾಹನ ಬಾಡಿಗೆ ವ್ಯವಹಾರ ನಡೆಸುತ್ತಿದ್ದ ಕಟ್ಟಡದಲ್ಲಿ ಆರಂಭವಾದ ಬೆಂಕಿ ತೀವ್ರಗೊಂಡು ಅಕ್ಕಪಕ್ಕದ ಕಟ್ಟಡಗಳಿಗೂ ಹರಡಿದೆ. ಪರಿಣಾಮ ನಾಲ್ಕು ಅಂತಸ್ತಿನ ಐದು ವಾಣಿಜ್ಯ ಘಟಕಗಳು ಬೆಂಕಿಯಿಂದ ಹಾನಿಗೊಳಗಾಗಿವೆ.

ಘಟನೆಯ ಮಾಹಿತಿ ಲಭಿಸುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದಾರೆ. ಬೆಂಕಿಯ ತೀವ್ರತೆ ಹೆಚ್ಚಿದ್ದರಿಂದ ಅದನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತರಲು ಸುಮಾರು ಎರಡು ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಬೇಕಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ಅಗ್ನಿ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದು, 16 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳಲ್ಲಿ 15 ಮಂದಿ ಥಾಯ್ಲೆಂಡ್ ಪ್ರಜೆಗಳಾಗಿದ್ದು, ಒಬ್ಬರು ಮ್ಯಾನ್ಮಾರ್ ಮೂಲದವರಾಗಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರವಾಸಿಗರಿಗೆ ಗಾಯಗಳಾಗಿಲ್ಲ ಎಂದು ಸ್ಥಳೀಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಘಟನೆಗೆ ಕಾರಣವೇನು ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ. ಬೆಂಕಿ ಕಾಣಿಸಿಕೊಂಡ ಸಂದರ್ಭ, ಕಟ್ಟಡದ ಸುರಕ್ಷತಾ ವ್ಯವಸ್ಥೆ ಹಾಗೂ ಅಗ್ನಿ ಅವಘಡಕ್ಕೆ ಕಾರಣವಾದ ಅಂಶಗಳ ಕುರಿತು ಸ್ಥಳೀಯ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಗಾಯಾಳುಗಳಿಗೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.

PPeepal Media Desk

Peepal Media Desk

Peepal Media · ವಿದೇಶ ವಿಭಾಗ

ಸಂಬಂಧಿತ ಸುದ್ದಿಗಳು