ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಹೈದರಾಬಾದ್‌ಗೆ ಉಗ್ರರ ದಾಳಿ ಬೆದರಿಕೆ: ನವೆಂಬರ್ 26ಕ್ಕೆ ಮುಂಬೈ ದಾಳಿ ಮಾದರಿಯ ಎಚ್ಚರಿಕೆ ಸಂದೇಶ!ಬಿಸ್ಲೆರಿ ಕುಡಿಯುವ ನೀರು ಅಸುರಕ್ಷಿತ: ಕಾನೂನು ಕ್ರಮಕ್ಕೆ ಅನುಮತಿ ನೀಡಿದ ಎಫ್‌ಎಸ್‌ಎಸ್‌ಎಐಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್‌ಎಸ್‌ಎಸ್‌ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರವರ್ತೂರು ಅಕ್ರಮ ವಲಸಿಗರ ವದಂತಿ: ವೈರಲ್ ವಿಡಿಯೋದಲ್ಲಿನ ಆರೋಪಗಳನ್ನು ತಳ್ಳಿಹಾಕಿದ ಪೊಲೀಸರುಸೋನಾ ಮಸೂರಿ ಅಕ್ಕಿ ಬೆಲೆಯಲ್ಲಿ ಭಾರಿ ಇಳಿಕೆ: ಕೆ.ಜಿಗೆ ₹20 ಕಡಿತ, ಗ್ರಾಹಕರಿಗೆ ತುಸು ನಿರಾಳ!ಚಿನ್ನದ ಬೆಲೆ ಇಳಿಕೆಗೆ ತಮ್ಮ ಮನವಿಯೇ ಕಾರಣ ಎಂದ ಪ್ರಧಾನಿ ಮೋದಿಗೆ ಜನಸಾಮಾನ್ಯರ ಕೆಲವು ಪ್ರಶ್ನೆಗಳುಸುಪ್ರೀಂಕೋರ್ಟ್ ನ್ಯಾಯಮೂರ್ತಿಗೆ ನೀಡಬೇಕಿದ್ದ ಗೌರವ ವಂದನೆ ಓವೈಸಿಗೆ ಸಲ್ಲಿಕೆ; ಉತ್ತರ ಪ್ರದೇಶ ಪೊಲೀಸರಿಂದ ತನಿಖೆಗೆ ಆದೇಶಸರ್ಕಾರಕ್ಕೆ ಶಾಕ್: ಮೂವರು ಕಾಂಗ್ರೆಸ್ ಶಾಸಕರಿಂದ ರಾಜೀನಾಮೆ ಎಚ್ಚರಿಕೆ!ಚರಿತ್ರೆಯ ಮೌನ ಸಾಕ್ಷಿಗಳು: ಭಾಷೆಗಳ ಗಡಿ ದಾಟಿದ ರೂಮಿ; ಪರ್ಷಿಯನ್‌ನಿಂದ ವಿಶ್ವದ ಹೃದಯಗಳವರೆಗೆ ಒಂದು ಪ್ರೇಮಯಾನಕಾರ್ಯದರ್ಶಿ ಹುದ್ದೆ | ಸಿಎಂ ಕಚೇರಿಯಿಂದ ಕರೆ ಬಂದ ನಂತರ ನಿರ್ಧರಿಸುವೆ: ತನ್ವೀರ್‌ ಸೇಠ್ದೀಪಾವಳಿ ವೇಳೆ ಪಟಾಕಿ ಸಿಡಿಸಿದ ಪ್ರಕರಣ: ಪೊಲೀಸರ ವಿರುದ್ಧ MIT ವಿದ್ಯಾರ್ಥಿಗಳಿಂದ ಸಿಎಂಗೆ ದೂರುರವಿ ಹಂಜ್ ಬಂಧನ ಸ್ವಾಗತಾರ್ಹ; ಆತನ ಪುಸ್ತಕ ಮುಟ್ಟುಗೋಲು ಹಾಕಿಕೊಳ್ಳಿ: ಟಿ.ಎ. ನಾರಾಯಣ ಗೌಡ ಆಗ್ರಹಡಾರ್ಕ್ ವೆಬ್‌ನಲ್ಲಿ ಅಗ್ನಿವೀರ್ ದತ್ತಾಂಶ ಮಾರಾಟಕ್ಕೆ ಯತ್ನ: 14 ವರ್ಷದ ಬಾಲಕನನ್ನು ವಶಕ್ಕೆ ಪಡೆದ ದೆಹಲಿ ಪೊಲೀಸರುಬಸವ ಮಂಟಪ ಕೃತಿ ವಿವಾದ: ಲೇಖಕ ರವಿ ಹಂಜ್ ಕೊಚ್ಚಿ ವಿಮಾನ ನಿಲ್ದಾಣದಲ್ಲಿ ವಶಕ್ಕೆಲಕ್ಷ ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಡಿಆರ್‌ಎಫ್ ಅಧಿಕಾರಿ –  ಅರಣ್ಯಾಧಿಕಾರಿ ವಿಶ್ವನಾಥ್ ಲೋಕಾ ಬಲೆಗೆಕಿವೀಸ್‌ ವಿರುದ್ಧ ಕನ್ನಡಿಗ ಕೆ.ಎಲ್‌ ರಾಹುಲ್‌ ಅಬ್ಬರ, ಅಮೋಘ ಶತಕ – ಐತಿಹಾಸಿಕ ದಾಖಲೆಇ-ಕೆವೈಸಿ ಯಶಸ್ವಿಯಾದರೂ ‘ನಿಧನ’ ಎಂದು ತೋರಿಸಿದ ತಂತ್ರಾಂಶ – ಗೃಹಲಕ್ಷ್ಮಿ ಯೋಜನೆಯ ಮಹಾಲೋಪಡಿ.1ರೊಳಗೆ ರೈತರ ಖಾತೆಗೆ 5,000 ರೂ. ಬರ ಪರಿಹಾರ – ಡಾ. ಜಿ. ಪರಮೇಶ್ವರ್ಹೈದರಾಬಾದ್‌ ಕಾಂಗ್ರೆಸ್ ಖಾತೆ ನಿರ್ಬಂಧ ಮೆಟಾ ಕಚೇರಿ – ಧ್ವಂಸಗೊಳಿಸಿದ ಕಾರ್ಯಕರ್ತರುಹೊಸ ಪಾಸ್‌ಪೋರ್ಟ್‌ಗಾಗಿ ಶೇಖ್‌ ಹಸೀನಾ ಮತ್ತೊಮ್ಮೆ ಮನವಿ; ಬಾಂಗ್ಲಾದೇಶ ಸರ್ಕಾರಕ್ಕೆ ತುರ್ತು ಪತ್ರ

ಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್‌ಎಸ್‌ಎಸ್‌ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರ

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್‌ಎಸ್‌ಎಸ್‌ನಲ್ಲಿ ಮಾತ್ರ: ಬಿ.ವೈ. ವಿಜಯೇಂದ್ರ

ಬೆಂಗಳೂರು: ‘ಬಸವ ಮಂಟಪ’ ಕೃತಿಯ ವಿವಾದಕ್ಕೆ ಸಂಬಂಧಿಸಿದಂತೆ ಬರಹಗಾರ ರವಿ ಹಂಜ್ ಅವರ ವ್ಯಕ್ತಿತ್ವದೊಂದಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (RSS) ತಳುಕು ಹಾಕಲು ಹೊರಟಿರುವವರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಬಸವೇಶ್ವರರು ಪ್ರತಿಪಾದಿಸಿದ ಜಾತಿರಹಿತ ಸಮಾಜದ ನೆಲೆ ಇರುವುದು ಆರ್‌ಎಸ್‌ಎಸ್‌ನಲ್ಲಿ ಮಾತ್ರ ಎಂದು ಅವರು ಪ್ರತಿಪಾದಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಿಜಯೇಂದ್ರ, ‘ಬಸವ ಮಂಟಪ’ ಕೃತಿಯ ಮೂಲಕ ತನ್ನ ವಿಕೃತಿ ಮೆರೆಯಲು ಹೋಗಿ ಬಸವ ವಿರೋಧಿ ಮನಸ್ಥಿತಿಯನ್ನು ಅನಾವರಣಗೊಳಿಸಿಕೊಂಡಿರುವ ರವಿ ಹಂಜ್ ಅವರೊಂದಿಗೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳು ಆರ್‌ಎಸ್‌ಎಸ್ ಅನ್ನು ತಳುಕು ಹಾಕುತ್ತಿರುವುದು ಸಮಯಸಾಧಕತನ ಹಾಗೂ ಅವರ ಹೀನ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಕಿಡಿಕಾರಿದ್ದಾರೆ.

ಜಾತಿ, ಪ್ರಾಂತೀಯತೆ ಹಾಗೂ ಭಾಷೆಗಳ ಎಲ್ಲೆಯನ್ನು ಮೀರಿ, ಜಾತಿ ವ್ಯವಸ್ಥೆಯನ್ನು ಎಂದಿಗೂ ಬೆಂಬಲಿಸದೆ, ಜಾತಿಯ ಸಂಕೇತಗಳು ತನ್ನಲ್ಲಿ ಬೇರುಬಿಡಲು ಅವಕಾಶವನ್ನೇ ನೀಡದೆ ತನ್ನ ಸಿದ್ಧಾಂತದೊಂದಿಗೆ ಬಸವ ತತ್ವವನ್ನು ಅಳವಡಿಸಿಕೊಂಡಿರುವ ಸಂಘಟನೆ ಯಾವುದಾದರೂ ಇದ್ದರೆ ಅದು ರಾಷ್ಟ್ರಭಕ್ತಿಯೊಂದನ್ನೇ ಏಕೈಕ ಆದ್ಯತೆಯನ್ನಾಗಿಸಿಕೊಂಡಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘ ಮಾತ್ರ ಎಂದು ಅವರು ಹೇಳಿದ್ದಾರೆ.

‘ಇವನಾರವ, ಇವನಾರವ’ ಎನ್ನದೆ, ‘ಇವ ನಮ್ಮವ, ಇವ ನಮ್ಮವ’ ಎಂದು ಭಾರತೀಯತೆಯನ್ನು ಪೂಜಿಸುವವರನ್ನು ಅಪ್ಪಿಕೊಂಡಿರುವ ಏಕೈಕ ಸಂಘಟನೆ ಆರ್‌ಎಸ್‌ಎಸ್ ಎಂಬುದನ್ನು ಕುಚೋದ್ಯದ ಹಾಗೂ ತಿಳಿಗೇಡಿ ಹೇಳಿಕೆಗಳನ್ನು ನೀಡುವವರು ಮನಗಾಣಲಿ ಎಂದು ವಿಜಯೇಂದ್ರ ತಿರುಗೇಟು ನೀಡಿದ್ದಾರೆ.

ಅವಕಾಶ ಸಿಕ್ಕಾಗಲೆಲ್ಲ ಆರ್‌ಎಸ್‌ಎಸ್ ವಿರುದ್ಧ ವಿಷಕಾರುವುದೇ ಕೆಲವರಿಗೆ ತೆವಲಾಗಿದ್ದು, ಬೆಂದ ಮನೆಯಲ್ಲಿ ಗಳ ಇರಿದುಕೊಳ್ಳುವ ಬುದ್ಧಿ ಹೊಂದಿರುವ ಇಂಥವರಿಗೆ ರವಿ ಹಂಜ್ ಅವರ ಪುಸ್ತಕ ಈಗ ಸರಕಾಗಿದೆ ಎಂದು ವಿಜಯೇಂದ್ರ ಟೀಕಿಸಿದ್ದಾರೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು