ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
81 ಲಕ್ಷಕ್ಕೆ ಗ್ರಾಮ ಪಂಚಾಯಿತಿ ಸದಸ್ಯ ಸ್ಥಾನ ಹರಾಜು!ಡಿಸಿ ಪಿಎ ಚಾಟ್ ಪ್ರಕರಣದಲ್ಲಿ ಸತ್ಯಾ ಹೊರಬರಲಿ – ಎಚ್.ಡಿ. ಕುಮಾರಸ್ವಾಮಿನಿಖಿಲ್‌ಗೆ ದೇವಾಲಯ ಪ್ರವೇಶ ವಿಚಾರ – ಕಾಂಗ್ರೆಸ್‌ಗೆ ಬುದ್ಧಿ ಕಲಿಸಲಿದ್ದಾರೆ ಜನ – ಎಚ್.ಡಿ. ಕುಮಾರಸ್ವಾಮಿಮೀಸಲಾತಿ ಹೆಚ್ಚಳಕ್ಕೆ ಕೇಂದ್ರದ ಮಧ್ಯಪ್ರವೇಶ ಮಾಡಲಿ – ಜಿ. ಪರಮೇಶ್ವರ್ಬಂಗಾಳ ಕೊಲ್ಲಿಯಲ್ಲಿ ಚಂಡಮಾರುತದ ಭೀತಿ: ನವೆಂಬರ್ 16ರ ವೇಳೆಗೆ ಚಂಡಮಾರುತವಾಗಿ ತೀವ್ರಗೊಳ್ಳುವ ಸಾಧ್ಯತೆ; ಮೀನುಗಾರರಿಗೆ ಎಚ್ಚರಿಕೆಅಮೆರಿಕದಲ್ಲಿ ಒಂದೇ ದಿನ ಸರಣಿ ಅವಘಡಗಳು: ವಿಮಾನ ಹಾರಾಟ ಸ್ಥಗಿತ, ಹಡಗು ಅಪಘಾತ, SpaceX ಬೂಸ್ಟರ್ ಸ್ಫೋಟ!ತಮಿಳುನಾಡಿನ ವಿರೋಧಕ್ಕೆ ತಲೆ ಕೆಡಿಸಿಕೊಳ್ಳುವುದಿಲ್ಲ, ಮೇಕೆದಾಟಿಗೆ ಅಣೆಕಟ್ಟು ಕಟ್ಟುವುದು ನಮ್ಮ ಹಕ್ಕು ಸಿ ಎಮ್‌ ಡಿ ಕೆ ಶಿವಕುಮಾರ್ಸೌಜನ್ಯಾ ಕೊಲೆ ಪ್ರಕರಣದ ಮರುತನಿಖೆ ಚುರುಕು: ಐವರು ಪ್ರಮುಖ ಸಾಕ್ಷಿಗಳ ವಿಚಾರಣೆಮಹದೇವ್ ಬೆಟ್ಟಿಂಗ್ ಆಯಪ್ ಜಾಲಕ್ಕೆ ಸಿಬಿಐ ಶಾಕ್; 6 ರಾಜ್ಯಗಳ 33 ಕಡೆ ದಾಳಿಆರ್‌ಎಸ್‌ಎಸ್‌ ನಂಟಿನ ಆರೋಪ: ನಿಗಮ ಮಂಡಳಿ ಹುದ್ದೆಗಳಿಗೆ ರಾಜೀನಾಮೆ ನೀಡಲು ಸೂಚನೆKPS ಶಾಲೆಗಳ ಬಲವರ್ಧನೆ – ಕರಡು ಪ್ರಕಟಿಸಿದ ರಾಜ್ಯ ಸರ್ಕಾರಸೋನಿಯಾ ಗಾಂಧಿ ವಿರುದ್ಧ ಆಕ್ಷೇಪಾರ್ಹ ಪೋಸ್ಟ್; ವಿವಾದಾತ್ಮಕ ನಟಿ ಕಂಗನಾ ರಣಾವತ್ ವಿರುದ್ಧ ಎಫ್‌ಐಆರ್ ದಾಖಲುಮಕ್ಕಳಿಗೆ ಹೆಚ್ಚಿದ ಓದಿನ ಒತ್ತಡ – 1 ರಿಂದ 9ನೇ ತರಗತಿವರೆಗೆ ಟ್ಯೂಷನ್‌ಗೆ ಬ್ರೇಕ್ಮೇಕೆದಾಟು ಯೋಜನೆಗೆ ವಿರೋಧ ರಾಜಕೀಯ ಪ್ರೇರಿತ: ದೆಹಲಿಗೆ ಸರ್ವಪಕ್ಷ ನಿಯೋಗ ಕರೆದೊಯ್ಯಲು ಪ್ರಧಾನಿ ಒಪ್ಪಿಗೆಪ್ರಧಾನಿ ಮೋದಿ ಭೇಟಿ ವೇಳೆ ಮಾಂಸದಂಗಡಿ ಬಂದ್ ಮಾಡುವ ಅವಶ್ಯಕತೆ ಏನಿತ್ತು – ನಿ. ನ್ಯಾ. ನಾಗಮೋಹನ್‌ನಾಳೆಯಿಂದ ತುಂಗಭದ್ರಾ ಕಾಲುವೆ ನಾಳೆಯಿಂದ ಬಂದ್ – ರೈತರಿಂದ ತೀವ್ರ ಆಕ್ರೋಶಇಡಿಯಿಂದ 580 ಪುಟಗಳ ಚಾರ್ಜ್‌ಶೀಟ್, ಕೆಪಿಎಸ್‌ಸಿ ಹಗರಣದಲ್ಲಿ 4 ಜನರ ಪಟ್ಟಿ ಬಿಡುಗಡೆಮಧುಮೇಹ ಪತ್ತೆಯಲ್ಲಿನ ವಿಳಂಬ ಆತಂಕಕಾರಿ; ಆರಂಭಿಕ ತಪಾಸಣೆಗೆ WHO ಕರೆವಿಶ್ವ ಬಾಕ್ಸ್ ಆಫೀಸ್‌ನಲ್ಲಿ ₹1,110 ಕೋಟಿ ಗಳಿಸಿದ ‘ರಾಮಾಯಣ’; ಯಶ್‌ಗೆ ಮತ್ತೊಂದು 1,000 ಕೋಟಿ ದಾಖಲೆ!ಋತುಬಂಧದ ಮಹಿಳೆಯರ ಆರೋಗ್ಯ ರಕ್ಷಣೆಗೆ ‘ಋತುತಾರೆ’ ಯೋಜನೆ ಜಾರಿ; ನಟಿ, ಮಾಜಿ ಸಂಸದೆ ರಮ್ಯಾ ರಾಯಭಾರಿ

ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ – ಹೈಕೋರ್ಟ್ ಗರಂ

ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ –  ಹೈಕೋರ್ಟ್ ಗರಂ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ಸರ್ಕಾರದ ಉಚಿತ ಯೋಜನೆಗಳು ಹಾಗೂ ದಿನಬಳಕೆ ವಸ್ತುಗಳ ಬೆಲೆ ಏರಿಕೆಯ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಪ್ರಕರಣವೊಂದರ ವಿಚಾರಣೆ ನಡೆಸುವ ಸಂದರ್ಭದಲ್ಲಿ ನ್ಯಾಯಪೀಠವು, “ಸರ್ಕಾರದ ಯೋಜನೆಗಳು ಉಚಿತವಾದರೆ, ಅಗತ್ಯ ವಸ್ತುಗಳ ದರ ಹೆಚ್ಚುವುದು ಸಹ ಖಚಿತ. ಹೀಗೆ ಪ್ರತಿಯೊಂದರ ಬೆಲೆಯನ್ನೂ ಹೆಚ್ಚಿಸುತ್ತಾ ಹೋದರೆ ಸಾಮಾನ್ಯ ಜನ ಜೀವನ ಸಾಗಿಸುವುದಾದರೂ ಹೇಗೆ? ಮನುಷ್ಯ ಎಲ್ಲಿಗೆ ಹೋಗಬೇಕು?” ಎಂದು ಕಳವಳದೊಂದಿಗೆ ತರಾಟೆಗೆ ತೆಗೆದುಕೊಂಡಿದೆ. ಆ ಕುರಿತ ವರದಿ ಇಲ್ಲಿದೆ:

ಏನಿದು ಪ್ರಕರಣ?

ಅನ್ನಭಾಗ್ಯ ಯೋಜನೆಯಡಿ ಮೈಸೂರಿನ ಸರ್ಕಾರಿ ಉಗ್ರಾಣವೊಂದರಲ್ಲಿ ಸಂಗ್ರಹಿಸಿಡಲಾಗಿದ್ದ ಆಹಾರ ಧಾನ್ಯಗಳಲ್ಲಿ ಸುಮಾರು 320 ಕ್ವಿಂಟಲ್ ಅಕ್ಕಿ ಮತ್ತು 85 ಕ್ವಿಂಟಲ್ ಗೋಧಿ ಕೊರತೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ಅಗತ್ಯ ವಸ್ತುಗಳ ನಿಯಂತ್ರಣ ಕಾಯ್ದೆಯಡಿ ತಮ್ಮ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿ ಉಗ್ರಾಣದ ಹಿರಿಯ ವ್ಯವಸ್ಥಾಪಕರೊಬ್ಬರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸುವಾಗ ನ್ಯಾಯಪೀಠವು ಸರ್ಕಾರದ ನೀತಿಗಳ ವಿರುದ್ಧ ಮೌಖಿಕವಾಗಿ ಆಕ್ರೋಶ ಹೊರಹಾಕಿತು.

ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಹೈಕೋರ್ಟ್ ಆಕ್ಷೇಪ

ಜನಸಾಮಾನ್ಯರು ಎದುರಿಸುತ್ತಿರುವ ಆರ್ಥಿಕ ಸಂಕಷ್ಟವನ್ನು ಉದಾಹರಣೆ ಸಹಿತ ವಿವರಿಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರು, “ಕಳೆದ ತಿಂಗಳು ತುಪ್ಪ ತರಲು ಹೋದಾಗ ಪ್ರತಿ ಕೆ.ಜಿ.ಗೆ 650 ರೂಪಾಯಿ ಇತ್ತು. ಆದರೆ ಈಗ ಅದು ಬರೋಬ್ಬರಿ 850 ರೂಪಾಯಿ ಆಗಿದೆ. ಇಷ್ಟೊಂದು ದರ ಹೆಚ್ಚಾದರೆ ದೀಪಾವಳಿಗೆ ತುಪ್ಪದ ದೀಪ ಹಚ್ಚುವುದು ಹೇಗೆ? ಯಮದೀಪ ಹಚ್ಚುವ ಬದಲು ನನ್ನನ್ನೇ ಕರೆದುಕೊಂಡು ಹೋಗು ಎಂದು ಯಮನನ್ನೇ ಕೇಳಬೇಕಷ್ಟೇ!” ಎಂದು ಮಾರ್ಮಿಕವಾಗಿ ನುಡಿದರು.

ದೀಪಾವಳಿ ನಂತರ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ 90 ರೂಪಾಯಿ!

ಇದರೊಂದಿಗೆ, ಮಾರುಕಟ್ಟೆಯಲ್ಲಿ ಸದ್ಯ ಉತ್ತಮ ಅಕ್ಕಿಯ ದರ ಕೆ.ಜಿ.ಗೆ 103 ರೂಪಾಯಿ ತಲುಪಿದೆ. ಇತ್ತ ಸರ್ಕಾರ ಕಬ್ಬಿಗೆ ತಲಾ 3,000 ರೂ.ಗಳಿಗೂ ಅಧಿಕ ಬೆಂಬಲ ಬೆಲೆ ಘೋಷಿಸಿದೆ. ಈ ಹೆಚ್ಚುವರಿ ಹಣವನ್ನು ಸರ್ಕಾರ ತನ್ನ ಜೇಬಿನಿಂದ ಕೊಡಲ್ಲ, ಜನರ ತೆರಿಗೆ ಹಣದಿಂದಲೇ ಕೊಡುತ್ತದೆ. ನೋಡುತ್ತಾ ಇರಿ, ದೀಪಾವಳಿ ಮುಗಿದ ಮೇಲೆ ಸಕ್ಕರೆ ಬೆಲೆ ಪ್ರತಿ ಕೆ.ಜಿ.ಗೆ 90 ರೂಪಾಯಿ ತಲುಪುತ್ತದೆ ಎಂದು ಎಚ್ಚರಿಸಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು