ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಪ್ರೀತಿಯ ಅನುಭೂತಿ ಪಡೆಯದ ಗಂಡಸರು!ಬೆಂಗಳೂರಿನ ಮೊದಲ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಯಾರು?: 1996ರ ಬ್ಯಾಚ್‌ನ ಅಧಿಕಾರಿಗೆ ಹೊಸ ವ್ಯವಸ್ಥೆಯ ಹೊಣೆ!ರೈಲ್ವೆ ಕಾಮಗಾರಿ ಪ್ರಕ್ರಿಯೆ: ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಟಿಕೆಟ್‌ ಇಲ್ಲದೆ ವಂದೇ ಭಾರತ್ ಪ್ರಯಾಣ – 36 ಸಾವಿರ ದಂಡ ನೆಟ್ಟಿಗರ ಆಕ್ರೋಶಅಮೆರಿಕ–ಚೀನಾ–ರಷ್ಯಾ ಮಹಾಶಕ್ತಿಗಳ ಮುಖಾಮುಖಿ: ಶೆನ್‌ಜೆನ್‌ನಲ್ಲಿ ಟ್ರಂಪ್, ಕ್ಸಿ ಮತ್ತು ಪುಟಿನ್ ಭೇಟಿ; ಭಾರತದ ಪಾಲಿಗೆ ಇದು ಎಚ್ಚರಿಕೆಯ ಸಮಯವೇ?ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರದಿಂದ ಪರಿಹಾರ ಪಡೆಯಲು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ – ಜಿ. ಪರಮೇಶ್ವರಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ: ಮಸೀದಿಯಲ್ಲಿ ಆಶ್ರಯ; ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಕಾರ್ಯಾಚರಣೆಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ, ಉತ್ಪಾದನಾ ವಲಯದ ಬೆನ್ನೆಲುಬು ಮುರಿದಿದೆ: ರಾಹುಲ್‌ ಗಾಂಧಿಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರಿಗೆ ಮತ್ತೊಂದು ಅವಕಾಶ: ಚುನಾವಣಾ ಆಯೋಗದ ಹೊಸ ಗಡುವುಆರ್‌ಎಫ್‌ಒ ಹೇಮಂತ್‌ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ – ಆದಾಯಕ್ಕಿಂತ ಅಧಿಕ ಆಸ್ತಿ ತೀವ್ರ ಶೋಧಆಗುಂಬೆ ಕಾಳಿಂಗ ಪ್ರಕರಣ: ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪರಿಸರ ಸಂಘಟನೆಗಳ ತೀವ್ರ ಒತ್ತಾಯ5,000 ಮಾಸಿಕ ಗೌರವ ಧನಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ‌ – ಬೃಹತ್ ಪ್ರತಿಭಟನೆಜಾವೇದ್ ಅಖ್ತರ್‌ಗೆ ಮೌಲ್ವಿ ಟಾಂಗ್: ‘ಹೆಸರು ಬದಲಿಸಿಕೊಂಡು ರಾಮ್ ಪಾಲ್ ಆಗಿ’ ಎಂದು ವ್ಯಂಗ್ಯಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ – ಹೆಚ್​​​​​ಡಿಕೆ ಗರಂಮಸೀದಿಯೊಳಗೆ ಅಡಗಿದ್ದ ಉಗ್ರನ ವಿರುದ್ಧ ಕಾರ್ಯಾಚರಣೆ ; ಕುಲ್ಗಾಮ್‌ನಲ್ಲಿ ಲಷ್ಕರ್ ಉಗ್ರ ಲತೀಫ್ ಭಟ್ ಹತKPSC ನೇಮಕಾತಿ ಹಗರಣ: ಸರ್ಕಾರಿ ಉದ್ಯೋಗದ ಕನಸಿಗೂ ಬೆಲೆ ನಿಗದಿ! ಆಯೋಗದ ಸದಸ್ಯೆಯೇ ಎಸ್‌ಐಟಿ ಬಲೆಗೆಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ: ಆಂಧ್ರ ಕರಾವಳಿಗೆ ಅಪ್ಪಳಿಸಲು ಸಿದ್ಧತೆ; ಕರ್ನಾಟಕದಲ್ಲೂ ಮಳೆಯ ಮುನ್ಸೂಚನೆ

5,000 ಮಾಸಿಕ ಗೌರವ ಧನಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ‌ – ಬೃಹತ್ ಪ್ರತಿಭಟನೆ

5,000 ಮಾಸಿಕ ಗೌರವ ಧನಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ‌ – ಬೃಹತ್ ಪ್ರತಿಭಟನೆ

ಬೆಂಗಳೂರು: ತಮ್ಮ ಮಾಸಿಕ ಗೌರವಧನವನ್ನು 15,000 ರೂಗಳಿಗೆ ನಿಗದಿಪಡಿಸಬೇಕೆಂದು ಒತ್ತಾಯಿಸಿ ಸಹಸ್ರಾರು ಆಶಾ ಕಾರ್ಯಕರ್ತೆಯರು ಮಂಗಳವಾರ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಅನಿರ್ದಿಷ್ಟಾವಧಿ ಹಗಲು-ರಾತ್ರಿ ಪ್ರತಿಭಟನೆಯನ್ನು ಆರಂಭಿಸಿದ್ದಾರೆ. ಸದ್ಯ ಇವರಿಗೆ ತಿಂಗಳಿಗೆ 5,000 ರೂಪಾಯಿ ಗೌರವಧನ ನೀಡಲಾಗುತ್ತಿದೆ.’ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ’ ಈ ಪ್ರತಿಭಟನೆಯನ್ನು ಆಯೋಜಿಸಿದೆ.

ಸಂಘದ ರಾಜ್ಯಾಧ್ಯಕ್ಷ ಕೆ. ಸೋಮಶೇಖರ್ ಯಾದಗಿರಿ ಮಾತನಾಡಿ, ಸರ್ಕಾರವು ವೇತನ ಹೆಚ್ಚಿಸುವ ಬದಲು ಆಶಾ ಕಾರ್ಯಕರ್ತೆಯರನ್ನು “ಮನೆಗೆ ಕಳುಹಿಸಲು” (ಕೆಲಸದಿಂದ ತೆಗೆದುಹಾಕಲು) ಪ್ರಯತ್ನಿಸುತ್ತಿದೆ ಎಂದು ಆರೋಪಿಸಿದರು.

ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ರಾಜ್ಯದಲ್ಲಿರುವ ಕಾಂಗ್ರೆಸ್ ಸರ್ಕಾರ ಈ ವಿಷಯದಲ್ಲಿ ಒಂದೇ ರೀತಿಯಾಗಿವೆ. ಕೇಂದ್ರ ಸರ್ಕಾರ ಘೋಷಿಸಿದ್ದ 1,500 ರೂಪಾಯಿ ಹೆಚ್ಚಳವನ್ನೂ ಇನ್ನೂ ಜಾರಿಗೊಳಿಸಿಲ್ಲ ಎಂದು ತಿಳಿಸಿದರು.

ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ ಮಾತನಾಡಿ, ಸರ್ಕಾರವು ತಿಂಗಳಿಗೆ 10,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ, ಆಶಾ ಕಾರ್ಯಕರ್ತೆಯರು 2025ರ ಜನವರಿಯಲ್ಲಿ ನಡೆಸಲು ಉದ್ದೇಶಿಸಿದ್ದ ಪ್ರತಿಭಟನೆಯನ್ನು ಸದುದ್ದೇಶದಿಂದ ಕೈಬಿಟ್ಟಿದ್ದರು. “ಆದರೆ ಇಂದಿಗೂ ಆ ಭರವಸೆ ಈಡೇರಿಲ್ಲ. ಕೇರಳ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು 10,000 ದಿಂದ 12,000 ರೂಪಾಯಿಗಳವರೆಗೆ ಗೌರವಧನ ನೀಡುತ್ತಿರುವಾಗ, ಕರ್ನಾಟಕಕ್ಕೆ ಯಾಕೆ ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು. ಲೇಖಕ ಹಾಗೂ ಹೋರಾಟಗಾರ ಪ್ರೊ. ಅಲ್ಲಮಪ್ರಭು ಬೆಟ್ಟದೂರು ಮಾತನಾಡಿ, ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 10,000 ರೂಪಾಯಿ ನೀಡುವುದಾಗಿ ಭರವಸೆ ನೀಡಿದ್ದರು. ಆದರೆ ಅದನ್ನು ಈಡೇರಿಸದಿರುವುದು “ನಾಚಿಕೆಗೇಡಿನ ಸಂಗತಿ” ಎಂದು ಟೀಕಿಸಿದರು. ಈ ಭರವಸೆಯನ್ನು ಈಡೇರಿಸುವಂತೆ ಹಾಲಿ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಒತ್ತಾಯಿಸಿದರು.

ನಮ್ಮ ಜಮೀನುಗಳಲ್ಲಿ ಕೆಲಸ ಮಾಡುವ ಕೃಷಿ ಕಾರ್ಮಿಕರಿಗೆ ನಾವು 10,000 ರೂಪಾಯಿ ಕೂಲಿ ನೀಡುತ್ತೇವೆ. ಒಬ್ಬ ವ್ಯಕ್ತಿಯೇ ಇಷ್ಟು ನೀಡಲು ಸಾಧ್ಯವಿರುವಾಗ, ಸರ್ಕಾರ ಯಾಕೆ ನೀಡಲು ಸಾಧ್ಯವಿಲ್ಲ ಎಂದು ಅವರು ಪ್ರಶ್ನಿಸಿದರು.

ನಿವೃತ್ತ ಕನ್ನಡ ಪ್ರಾಧ್ಯಾಪಕಿ ಲತಾ ಮೈಸೂರು ಮಾತನಾಡಿ, ಪ್ರಸ್ತುತ ನೀಡುತ್ತಿರುವ ಗೌರವಧನವು ಸರ್ಕಾರಿ ಅಧಿಕಾರಿಗಳು ಒಂದು ಬಾರಿ ಚಹಾ ಮತ್ತು ಬಿಸ್ಕತ್ತುಗಳಿಗೆ ಖರ್ಚು ಮಾಡುವ ಹಣಕ್ಕಿಂತಲೂ ಕಡಿಮೆ ಇದೆ ಎಂದು ಹೇಳಿದರು.

ಹಂಪಿ ವಿಶ್ವವಿದ್ಯಾಲಯದ ಮಾಜಿ ಕುಲಪತಿ ಎ. ಮುರಿಗೆಪ್ಪ, ಚಿಲ್ಲರೆ ಅಂಗಡಿಗಳಲ್ಲಿ ಕೆಲಸ ಮಾಡುವ ಮಾರಾಟಗಾರರು ಕೂಡ ಆಶಾ ಕಾರ್ಯಕರ್ತೆಯರಿಗಿಂತ ಹೆಚ್ಚು ಗಳಿಸುತ್ತಾರೆ ಎಂದು ತಿಳಿಸಿದರು. ಅಲ್ಲದೆ, ಹಣದುಬ್ಬರಕ್ಕೆ ಅನುಗುಣವಾಗಿ ಪ್ರತಿ ವರ್ಷ ಗೌರವಧನವನ್ನು ಹೆಚ್ಚಿಸಬೇಕೆಂದು ಅವರು ಆಗ್ರಹಿಸಿದರು.

ವಿಷಯಗಳು: #karnataka #news
ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು