ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಪ್ರೀತಿಯ ಅನುಭೂತಿ ಪಡೆಯದ ಗಂಡಸರು!ಬೆಂಗಳೂರಿನ ಮೊದಲ ಮುಖ್ಯ ಪೊಲೀಸ್ ಆಯುಕ್ತ ಆರ್. ಹಿತೇಂದ್ರ ಯಾರು?: 1996ರ ಬ್ಯಾಚ್‌ನ ಅಧಿಕಾರಿಗೆ ಹೊಸ ವ್ಯವಸ್ಥೆಯ ಹೊಣೆ!ರೈಲ್ವೆ ಕಾಮಗಾರಿ ಪ್ರಕ್ರಿಯೆ: ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆಟಿಕೆಟ್‌ ಇಲ್ಲದೆ ವಂದೇ ಭಾರತ್ ಪ್ರಯಾಣ – 36 ಸಾವಿರ ದಂಡ ನೆಟ್ಟಿಗರ ಆಕ್ರೋಶಅಮೆರಿಕ–ಚೀನಾ–ರಷ್ಯಾ ಮಹಾಶಕ್ತಿಗಳ ಮುಖಾಮುಖಿ: ಶೆನ್‌ಜೆನ್‌ನಲ್ಲಿ ಟ್ರಂಪ್, ಕ್ಸಿ ಮತ್ತು ಪುಟಿನ್ ಭೇಟಿ; ಭಾರತದ ಪಾಲಿಗೆ ಇದು ಎಚ್ಚರಿಕೆಯ ಸಮಯವೇ?ರೈತರ ಸಂಕಷ್ಟದ ವಿಚಾರದಲ್ಲಿ ರಾಜಕೀಯ ಬೇಡ: ಕೇಂದ್ರದಿಂದ ಪರಿಹಾರ ಪಡೆಯಲು ಮೂರು ಬಾರಿ ಮನವಿ ಸಲ್ಲಿಸಿದ್ದೇವೆ – ಜಿ. ಪರಮೇಶ್ವರಪೆಟ್ರೋಲ್‌ನಲ್ಲಿ ಎಥನಾಲ್ ಪ್ರಮಾಣದಲ್ಲಿ ವ್ಯತ್ಯಾಸ: ಕೇಂದ್ರಕ್ಕೆ ಕರ್ನಾಟಕ ಸರ್ಕಾರದಿಂದ ಪತ್ರ; ಐದು ಪ್ರಮುಖ ಬೇಡಿಕೆಗಳ ಮಂಡನೆಕಾಶ್ಮೀರದಲ್ಲಿ ಲಷ್ಕರ್ ಕಮಾಂಡರ್ ಲತೀಫ್ ಭಟ್ ಹತ್ಯೆ: ಮಸೀದಿಯಲ್ಲಿ ಆಶ್ರಯ; ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾದ ಕಾರ್ಯಾಚರಣೆಭಾರತದ ಆರ್ಥಿಕತೆ ಸಂಕಷ್ಟದಲ್ಲಿದೆ, ಉತ್ಪಾದನಾ ವಲಯದ ಬೆನ್ನೆಲುಬು ಮುರಿದಿದೆ: ರಾಹುಲ್‌ ಗಾಂಧಿಮತದಾರರ ಪಟ್ಟಿಯಿಂದ ಹೆಸರು ಕಳೆದುಕೊಂಡವರಿಗೆ ಮತ್ತೊಂದು ಅವಕಾಶ: ಚುನಾವಣಾ ಆಯೋಗದ ಹೊಸ ಗಡುವುಆರ್‌ಎಫ್‌ಒ ಹೇಮಂತ್‌ಕುಮಾರ್ ಮನೆ ಮೇಲೆ ಲೋಕಾಯುಕ್ತ ದಾಳಿ – ಆದಾಯಕ್ಕಿಂತ ಅಧಿಕ ಆಸ್ತಿ ತೀವ್ರ ಶೋಧಆಗುಂಬೆ ಕಾಳಿಂಗ ಪ್ರಕರಣ: ನ್ಯಾಯಾಲಯದಲ್ಲಿ ವಿಶೇಷ ಮೇಲ್ಮನವಿ ಸಲ್ಲಿಸಲು ಸರ್ಕಾರಕ್ಕೆ ಪರಿಸರ ಸಂಘಟನೆಗಳ ತೀವ್ರ ಒತ್ತಾಯ5,000 ಮಾಸಿಕ ಗೌರವ ಧನಕ್ಕೆ ಆಗ್ರಹಿಸಿ ರಾಜಧಾನಿಯಲ್ಲಿ ಆಶಾ ಕಾರ್ಯಕರ್ತೆಯರ‌ – ಬೃಹತ್ ಪ್ರತಿಭಟನೆಜಾವೇದ್ ಅಖ್ತರ್‌ಗೆ ಮೌಲ್ವಿ ಟಾಂಗ್: ‘ಹೆಸರು ಬದಲಿಸಿಕೊಂಡು ರಾಮ್ ಪಾಲ್ ಆಗಿ’ ಎಂದು ವ್ಯಂಗ್ಯಸಿದ್ದರಾಮಯ್ಯ ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ: ಎಂಬಿ ಪಾಟೀಲ್ಸರ್ಕಾರದ ಖಜಾನೆ ಸಂಪೂರ್ಣ ಖಾಲಿಯಾಗಿದೆ – ಹೆಚ್​​​​​ಡಿಕೆ ಗರಂಮಸೀದಿಯೊಳಗೆ ಅಡಗಿದ್ದ ಉಗ್ರನ ವಿರುದ್ಧ ಕಾರ್ಯಾಚರಣೆ ; ಕುಲ್ಗಾಮ್‌ನಲ್ಲಿ ಲಷ್ಕರ್ ಉಗ್ರ ಲತೀಫ್ ಭಟ್ ಹತKPSC ನೇಮಕಾತಿ ಹಗರಣ: ಸರ್ಕಾರಿ ಉದ್ಯೋಗದ ಕನಸಿಗೂ ಬೆಲೆ ನಿಗದಿ! ಆಯೋಗದ ಸದಸ್ಯೆಯೇ ಎಸ್‌ಐಟಿ ಬಲೆಗೆಜಾತಿ ಮತ್ತು ಮರ್ಯಾದೆಯ ಸಂಕೋಲೆಯಲ್ಲಿ ಯುವಜನರ ಸ್ವಾತಂತ್ರ್ಯಬಂಗಾಳ ಕೊಲ್ಲಿಯಲ್ಲಿ ಅಕ್ವಾನ್ ಚಂಡಮಾರುತ: ಆಂಧ್ರ ಕರಾವಳಿಗೆ ಅಪ್ಪಳಿಸಲು ಸಿದ್ಧತೆ; ಕರ್ನಾಟಕದಲ್ಲೂ ಮಳೆಯ ಮುನ್ಸೂಚನೆ

ರೈಲ್ವೆ ಕಾಮಗಾರಿ ಪ್ರಕ್ರಿಯೆ: ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ರೈಲ್ವೆ ಕಾಮಗಾರಿ ಪ್ರಕ್ರಿಯೆ: ಹಲವು ಎಕ್ಸ್‌ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ಬದಲಾವಣೆ

ಬೆಂಗಳೂರು: ರೈಲ್ವೆ ಕಾಮಗಾರಿ ಹಿನ್ನೆಲೆಯಲ್ಲಿ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಸಂಚರಿಸುವ ಹಲವು ಪ್ರಮುಖ ಎಕ್ಸ್‌ಪ್ರೆಸ್ ರೈಲುಗಳ ಆಗಮನ ಸಮಯವನ್ನು ಪರಿಷ್ಕರಿಸಲಾಗಿದೆ. ನವೆಂಬರ್ 21ರಿಂದ ಹಂತ ಹಂತವಾಗಿ ನೂತನ ವೇಳಾಪಟ್ಟಿ ಜಾರಿಗೆ ಬರಲಿದ್ದು, ಯಶವಂತಪುರ ನಿಲ್ದಾಣಕ್ಕೆ ಆಗಮಿಸುವ ರೈಲುಗಳ ಸಮಯದಲ್ಲಿ 5ರಿಂದ 15 ನಿಮಿಷಗಳವರೆಗೆ ಬದಲಾವಣೆ ಮಾಡಲಾಗಿದೆ ಎಂದು ರೈಲ್ವೆ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಪರಿಷ್ಕೃತ ವೇಳಾಪಟ್ಟಿಯ ವಿವರ ಹೀಗಿದೆ:

– ರೈಲು ಸಂಖ್ಯೆ 16572 ಬೀದರ್–ಯಶವಂತಪುರ ಎಕ್ಸ್‌ಪ್ರೆಸ್: ನವೆಂಬರ್ 23ರಿಂದ ಯಶವಂತಪುರಕ್ಕೆ ಬೆಳಗ್ಗೆ 7.40ರ ಬದಲಿಗೆ 7.55ಕ್ಕೆ ಆಗಮಿಸಲಿದೆ. ಬೀದರ್–ಯಲಹಂಕ ನಡುವಿನ ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ.

– ರೈಲು ಸಂಖ್ಯೆ 16528 ಕಣ್ಣೂರು–ಯಶವಂತಪುರ ಡೈಲಿ ಎಕ್ಸ್‌ಪ್ರೆಸ್: ನವೆಂಬರ್ 21ರಿಂದ ಬೆಳಗ್ಗೆ 7.50ರ ಬದಲಿಗೆ 8.05ಕ್ಕೆ ಯಶವಂತಪುರ ತಲುಪಲಿದೆ. ಕಣ್ಣೂರು–ಬಾಣಸವಾಡಿ ನಡುವಿನ ಸಮಯದಲ್ಲಿ ಬದಲಾವಣೆ ಇಲ್ಲ.

– ರೈಲು ಸಂಖ್ಯೆ 16546 ಸಿಂಧನೂರು–ಯಶವಂತಪುರ ಡೈಲಿ ಎಕ್ಸ್‌ಪ್ರೆಸ್: ನವೆಂಬರ್ 21ರಿಂದ ಬೆಳಗ್ಗೆ 8.05ರ ಬದಲಿಗೆ 8.15ಕ್ಕೆ ಆಗಮಿಸಲಿದೆ. ಸಿಂಧನೂರು–ಚಿಕ್ಕಬಾಣಾವರ ನಡುವಿನ ವೇಳಾಪಟ್ಟಿ ಯಥಾಸ್ಥಿತಿಯಲ್ಲಿರಲಿದೆ.

– ರೈಲು ಸಂಖ್ಯೆ 12214 ದೆಹಲಿ ಸರಾಯ್ ರೋಹಿಲ್ಲಾ–ಯಶವಂತಪುರ ವಾರದ ದುರಂತೋ ಎಕ್ಸ್‌ಪ್ರೆಸ್: ನವೆಂಬರ್ 23ರಿಂದ ಬೆಳಗ್ಗೆ 8.20ರ ಬದಲಿಗೆ 8.25ಕ್ಕೆ ಆಗಮಿಸಲಿದೆ. ದೆಹಲಿ–ಗುಂತಕಲ್ ನಡುವಿನ ಸಮಯದಲ್ಲಿ ಬದಲಾವಣೆ ಇಲ್ಲ.

– ರೈಲು ಸಂಖ್ಯೆ 16574 ಪಾಂಡಿಚೇರಿ–ಯಶವಂತಪುರ ವಾರದ ಎಕ್ಸ್‌ಪ್ರೆಸ್: ನವೆಂಬರ್ 21ರಿಂದ ಬೆಳಗ್ಗೆ 8.20ರ ಬದಲಿಗೆ 8.25ಕ್ಕೆ ತಲುಪಲಿದೆ. ಪಾಂಡಿಚೇರಿ–ಬಾಣಸವಾಡಿ ನಡುವಿನ ಸಮಯದಲ್ಲಿ ಬದಲಾವಣೆ ಇರುವುದಿಲ್ಲ.

– ರೈಲು ಸಂಖ್ಯೆ 12735 ಚರ್ಲಪಲ್ಲಿ–ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್: ನವೆಂಬರ್ 22ರಿಂದ ಬೆಳಗ್ಗೆ 8.20ರ ಬದಲಿಗೆ 8.25ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಚರ್ಲಪಲ್ಲಿ–ಹಿಂದೂಪುರ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ರೈಲು ಪ್ರಯಾಣಿಕರು ಪ್ರಯಾಣ ಆರಂಭಿಸುವ ಮುನ್ನ ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಸೂಚಿಸಿದೆ.

ನ.21ರಿಂದ ನೂತನ ಸಮಯ ಜಾರಿ; ಯಶವಂತಪುರ ತಲುಪುವ ರೈಲುಗಳ ಆಗಮನ ಸಮಯದಲ್ಲಿ 5ರಿಂದ 15 ನಿಮಿಷ ಬದಲಾವಣೆ

ಪರಿಷ್ಕೃತ ವೇಳಾಪಟ್ಟಿಯ ವಿವರ ಹೀಗಿದೆ:

– ರೈಲು ಸಂಖ್ಯೆ 16572 ಬೀದರ್–ಯಶವಂತಪುರ ಎಕ್ಸ್‌ಪ್ರೆಸ್: ನವೆಂಬರ್ 23ರಿಂದ ಯಶವಂತಪುರಕ್ಕೆ ಬೆಳಗ್ಗೆ 7.40ರ ಬದಲಿಗೆ 7.55ಕ್ಕೆ ಆಗಮಿಸಲಿದೆ. ಬೀದರ್–ಯಲಹಂಕ ನಡುವಿನ ವೇಳಾಪಟ್ಟಿಯಲ್ಲಿ ಬದಲಾವಣೆ ಇಲ್ಲ.

– ರೈಲು ಸಂಖ್ಯೆ 16528 ಕಣ್ಣೂರು–ಯಶವಂತಪುರ ಡೈಲಿ ಎಕ್ಸ್‌ಪ್ರೆಸ್: ನವೆಂಬರ್ 21ರಿಂದ ಬೆಳಗ್ಗೆ 7.50ರ ಬದಲಿಗೆ 8.05ಕ್ಕೆ ಯಶವಂತಪುರ ತಲುಪಲಿದೆ. ಕಣ್ಣೂರು–ಬಾಣಸವಾಡಿ ನಡುವಿನ ಸಮಯದಲ್ಲಿ ಬದಲಾವಣೆ ಇಲ್ಲ.

– ರೈಲು ಸಂಖ್ಯೆ 16546 ಸಿಂಧನೂರು–ಯಶವಂತಪುರ ಡೈಲಿ ಎಕ್ಸ್‌ಪ್ರೆಸ್: ನವೆಂಬರ್ 21ರಿಂದ ಬೆಳಗ್ಗೆ 8.05ರ ಬದಲಿಗೆ 8.15ಕ್ಕೆ ಆಗಮಿಸಲಿದೆ. ಸಿಂಧನೂರು–ಚಿಕ್ಕಬಾಣಾವರ ನಡುವಿನ ವೇಳಾಪಟ್ಟಿ ಯಥಾಸ್ಥಿತಿಯಲ್ಲಿರಲಿದೆ.

– ರೈಲು ಸಂಖ್ಯೆ 12214 ದೆಹಲಿ ಸರಾಯ್ ರೋಹಿಲ್ಲಾ–ಯಶವಂತಪುರ ವಾರದ ದುರಂತೋ ಎಕ್ಸ್‌ಪ್ರೆಸ್: ನವೆಂಬರ್ 23ರಿಂದ ಬೆಳಗ್ಗೆ 8.20ರ ಬದಲಿಗೆ 8.25ಕ್ಕೆ ಆಗಮಿಸಲಿದೆ. ದೆಹಲಿ–ಗುಂತಕಲ್ ನಡುವಿನ ಸಮಯದಲ್ಲಿ ಬದಲಾವಣೆ ಇಲ್ಲ.

– ರೈಲು ಸಂಖ್ಯೆ 16574 ಪಾಂಡಿಚೇರಿ–ಯಶವಂತಪುರ ವಾರದ ಎಕ್ಸ್‌ಪ್ರೆಸ್: ನವೆಂಬರ್ 21ರಿಂದ ಬೆಳಗ್ಗೆ 8.20ರ ಬದಲಿಗೆ 8.25ಕ್ಕೆ ತಲುಪಲಿದೆ. ಪಾಂಡಿಚೇರಿ–ಬಾಣಸವಾಡಿ ನಡುವಿನ ಸಮಯದಲ್ಲಿ ಬದಲಾವಣೆ ಇರುವುದಿಲ್ಲ.

– ರೈಲು ಸಂಖ್ಯೆ 12735 ಚರ್ಲಪಲ್ಲಿ–ಯಶವಂತಪುರ ಗರೀಬ್ ರಥ್ ಎಕ್ಸ್‌ಪ್ರೆಸ್: ನವೆಂಬರ್ 22ರಿಂದ ಬೆಳಗ್ಗೆ 8.20ರ ಬದಲಿಗೆ 8.25ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಚರ್ಲಪಲ್ಲಿ–ಹಿಂದೂಪುರ ನಡುವಿನ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.

ರೈಲು ಪ್ರಯಾಣಿಕರು ಪ್ರಯಾಣ ಆರಂಭಿಸುವ ಮುನ್ನ ಪರಿಷ್ಕೃತ ವೇಳಾಪಟ್ಟಿಯನ್ನು ಪರಿಶೀಲಿಸಿಕೊಳ್ಳಬೇಕು ಎಂದು ರೈಲ್ವೆ ಇಲಾಖೆ ಸೂಚಿಸಿದೆ..

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು