Home ರಾಜಕೀಯ ನೀಟ್ ಪರೀಕ್ಷೆ ರದ್ದತಿಗೆ ಮುಖ್ಯಮಂತ್ರಿಗಳಿಗೆ ಒತ್ತಾಯ

ನೀಟ್ ಪರೀಕ್ಷೆ ರದ್ದತಿಗೆ ಮುಖ್ಯಮಂತ್ರಿಗಳಿಗೆ ಒತ್ತಾಯ

0

ನೀಟ್ ಪರೀಕ್ಷೆಯನ್ನು ರದ್ದು ಮಾಡುವ ವಿಷಯವಾಗಿ ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಶುಕ್ರವಾರ ಮುಖ್ಯಮಂತ್ರಿ ನಿವಾಸದಲ್ಲಿ ಭೇಟಿ ಮಾಡಿ, ಮನವಿ ಪತ್ರ ಕೊಟ್ಟು ಒಂದು ವರ್ಷದ ಅವಧಿ ಒಳಗೆ, ನೀಟ್ ಪರೀಕ್ಷೆಯನ್ನು ರದ್ದು ಮಾಡಬೇಕೆಂದು ಒತ್ತಾಯಿಸಲಾಯಿತು.

14-04-2027 ರ ಒಳಗೆ ರಾಜ್ಯ ಸರ್ಕಾರಗಳು ಮೆಡಿಕಲ್ ಸೀಟುಗಳ ಕೊಡುವ ಅಧಿಕಾರ ಕೇಂದ್ರ ಸರ್ಕಾರದಿಂದ ಕಿತ್ತುಕೊಳ್ಳದಿದ್ದರೆ 2027 ಮೇ ತಿಂಗಳಲ್ಲಿ ನಡೆಯುವ NEET ಪರೀಕ್ಷಾ ಕೊಠಡಿಗೆ ಮುತ್ತಿಗೆ ಹಾಕುತ್ತೇವೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ‘ದ್ರಾವಿಡ ಸಿಟಿ ಮೂವ್ಮೆಂಟ್’ ಸಂಘಟನೆಯು ಸೌತ್ ಇಂಡಿಯಾ ಮಟ್ಟದ ಸಂಘಟನೆ ಆಗಿದ್ದು ಇದರಲ್ಲಿ ಕರ್ನಾಟಕ , ತೆಲಂಗಾಣ, ತಮಿಳುನಾಡು, ಆಂದ್ರ ಪ್ರದೇಶ, ಪುದುಚೇರಿ ಮತ್ತು ಕೇರಳ ರಾಜ್ಯಗಳ ವಾಲಂಟೀರ್ ಗಳು ಇದ್ದಾರೆ.

ನೀಟ್ ಪರೀಕ್ಷೆ ನಡೆಸುವವರಲ್ಲಿ ದಕ್ಷತೆಯ ಕೊರತೆಯುಂಟಾಗಿದ್ದು, ನೀಟ್ ಪರೀಕ್ಷೆಯು ಕಳೆದ ವರ್ಷಗಳಿಂದ ಹಗರಣಗಳ ಸುಳಿಯಲಿ ಸಿಲುಕಿ, ಈ ನಡೆಯಿಂದ ಲಕ್ಷಾಂತರ ವೈದ್ಯಕೀಯ ವಿದ್ಯಾರ್ಥಿಗಳ ಜೀವನ ನಾಶವಾಗಲಿದ್ದು, ಇದಕ್ಕೆ ಮುನ್ನೆಚ್ಚರಿಕೆಯಾಗಿ ನೀಟ್ ಪರೀಕ್ಷೆಯನ್ನು ರದ್ದು ಮಾಡಿ, ಕರ್ನಾಟಕದಲ್ಲಿ ಕನ್ನಡದ ಮಕ್ಕಳು ಡಾಕ್ಟರ್ ಗಳಾಗಲು, ವೈದ್ಯಕೀಯ ಪ್ರವೇಶ ಪಡೆಯಲು ಪಿಯುಸಿ ಅಂಕಗಳನ್ನು ಪರಿಗಣಿಸಬೇಕೆಂದು ಪತ್ರದ ಮುಖಾಂತರ ತಿಳಿಸಲಾಯಿತು.

ಮುಖ್ಯಮಂತ್ರಿಗಳಿಗೆ ಮನವಿ ಪತ್ರ ಸಲ್ಲಿಸುವ ಸಂದರ್ಭದಲ್ಲಿ, ಅಭಿ ಒಕ್ಕಲಿಗ, ದ್ರಾವಿಡ ಸಿಟಿ ಚಳುವಳಿಯ ಮುಖಂಡರು, ವಕೀಲರಾದ ಪಾವೆಂದನ್ ತಮಿಳುನಾಡಿನಿಂದ, ವಿದ್ಯಾರ್ಥಿ ತೇಜಸ್ ಒಕ್ಕಲಿಗ, ಮುಂತಾದವರು ಉಪಸ್ಥಿತರಿದ್ದರು

You cannot copy content of this page

Exit mobile version