ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪಾಯಕಾರಿ ದೆಹಲಿ ಗಾಳಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ – ಸುಪ್ರೀಂ ಕೋರ್ಟ್ ಕಡಕ್ ಸೂಚನೆಕರ್ರೆಗುಟ್ಟಾ ಬೆಟ್ಟದಲ್ಲಿ ಸ್ಫೋಟಕ ಪತ್ತೆ: 711 BGL ಶೆಲ್‌ಗಳು ವಶಕ್ಕೆಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣಸ್ಟಿಂಗ್ ಆಪರೇಷನ್ ನಲ್ಲಿ ಕುಮಾರಸ್ವಾಮಿ‌‌ ಪ್ರಯತ್ನ ಸಂಪೂರ್ಣ ವಿಫಲ – ಶಿವರಾಜ್ ಎಸ್. ತಂಗಡಗಿಕರ್ನಾಟಕದ ಪೆಟ್ರೋಲ್‌ನಲ್ಲಿ 31.2% ಎಥೆನಾಲ್! ವಾಹನ ಸವಾರರಿಗೆ ಆತಂಕ; E20 ಪ್ರಚಾರದ ಜಾಹೀರಾತುಗಳ ಹಿಂದಿನ ಹುನ್ನಾರವೇನು?ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಿಗೆ ಬೆಂಕಿ: ಪ್ರಯಾಣಿಕರು ಸುರಕ್ಷಿತ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೀಸರ್ ವಿರುದ್ಧ ಆಕ್ರೋಶ: ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ, ಸಿನೆಮಾ ಬಿಡುಗಡೆ ಮಾಡದಂತೆ ಒತ್ತಾಯಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ 20,000 ಕೋಟಿ ರೂ –  ಈಶ್ವರ ಖಂಡ್ರೆಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಪತ್ರಗಳ ಬಳಕೆ – ಸಚಿವ ಈಶ್ವರ ಖಂಡ್ರೆKSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆಅಪರಾಧಗಳ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್‌ಗೆ ಕಂಪನಿಗಳೇ ಹೊಣೆ!ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ಪತ್ತೆ‘ಕನ್ನಡಿಗರಿಗೆ ಉದ್ಯೋಗ ಕೊಡಿ, ಕಂಪನಿಗಳಿಗೆ ಕಿರುಕುಳ ಕೊಡಬೇಡಿ’: ಸರಕಾರದ ಇಬ್ಬಗೆ ನೀತಿ & ಅಸಲಿ ಪರಿಹಾರ

ಮಣಿಪುರದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ಬರ್ಬರ ಹತ್ಯೆ

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಮಣಿಪುರದಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಗಳ ಬರ್ಬರ ಹತ್ಯೆ

ಇಂಫಾಲ: ಈಶಾನ್ಯ ರಾಜ್ಯ ಮಣಿಪುರದಲ್ಲಿ ಗಲಭೆ ಸಮಯದಲ್ಲಿ ನಡೆದ ದೌರ್ಜನ್ಯಗಳು ಒಂದೊಂದಾಗಿ ಬೆಳಕಿಗೆ ಬರುತ್ತಿವೆ. ಕೆಲ ತಿಂಗಳ ಹಿಂದೆ ನಾಪತ್ತೆಯಾಗಿದ್ದ ಇಬ್ಬರು ವಿದ್ಯಾರ್ಥಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಸದ್ಯ ಅವರ ಮೃತ ದೇಹಗಳ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಾಜ್ಯದಲ್ಲಿ ಮತ್ತೊಮ್ಮೆ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಳೆದ ವಾರ, ಗಲಭೆಗಳು ಮತ್ತು ಆಂದೋಲನಗಳ ಹಿನ್ನೆಲೆಯಲ್ಲಿ ಮಣಿಪುರ ಸರ್ಕಾರವು ಇಂಟರ್ನೆಟ್ ಸೇವೆಗಳ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಿತು. ಇಂಟರ್ನೆಟೆ ಸೇವೆ ಚಾಲೂ ಆಗುತ್ತಿದ್ದಂತೆ ಸೋಮವಾರದಿಂದ ಈ ಫೋಟೋಗಳು ವೈರಲ್ ಆಗಿವೆ. ಇಬ್ಬರು ವಿದ್ಯಾರ್ಥಿಗಳನ್ನು ಕೆಲವು ಶಸ್ತ್ರಸಜ್ಜಿತ ವ್ಯಕ್ತಿಗಳು ಅಪಹರಿಸಿ ಕೊಂದಿರುವುದಾಗಿ ಸುದ್ದಿಯಾಗುತ್ತಿದೆ. ಒಂದು ಫೋಟೋದಲ್ಲಿ, ವಿದ್ಯಾರ್ಥಿಗಳನ್ನು ಅರಣ್ಯ ಪ್ರದೇಶದಲ್ಲಿ ಸೆರೆಹಿಡಿಯಲಾಗಿದೆ, ಅವರ ಹಿಂದೆ ಇಬ್ಬರು ಶಸ್ತ್ರಸಜ್ಜಿತ ವ್ಯಕ್ತಿಗಳು ಇದ್ದಾರೆ. ವಿದ್ಯಾರ್ಥಿಗಳ ಮೃತದೇಹಗಳನ್ನು ಪೊದೆಗಳ ಮಧ್ಯೆ ಎಸೆದಿರುವ ಮತ್ತೊಂದು ಫೋಟೋ ಕೂಡ ವೈರಲ್ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಸರ್ಕಾರ ಹೇಳಿಕೆ ಬಿಡುಗಡೆ ಮಾಡಿದೆ. ಕೊಲೆಯಾದ ವಿದ್ಯಾರ್ಥಿಗಳನ್ನು 17 ವರ್ಷದ ಬಾಲಕಿ ಮತ್ತು 20 ವರ್ಷದ ಮೈಟಿ ಸಮುದಾಯದ ಹುಡುಗ ಎಂದು ಗುರುತಿಸಲಾಗಿದೆ. ಜುಲೈ 6ರಿಂದ ಇಬ್ಬರೂ ನಾಪತ್ತೆಯಾಗಿದ್ದಾರೆ. ಜುಲೈ 6ರಂದು ನಿರ್ಬಂಧಗಳನ್ನು ಸಡಿಲಿಸಿದ್ದರಿಂದ, ಹುಡುಗಿ NEET ಕೋಚಿಂಗ್‌ಗಾಗಿ ಮನೆಯಿಂದ ಹೊರಟಿದ್ದಳು. ಪರಿಸ್ಥಿತಿ ಶಾಂತವಾಗಿದೆ ಎಂದು ಭಾವಿಸಿದ ಅವಳು ನಂತರ ತನ್ನ ಸ್ನೇಹಿತನೊಂದಿಗೆ ಬೈಕ್‌ನಲ್ಲಿ ಲಾಂಗ್ ಡ್ರೈವ್‌ಗೆ ಹೋದಳು. ಅಂದಿನಿಂದ, ಅವರ ಯಾವುದೇ ಸುದ್ದಿ ಇದ್ದಿರಲಿಲ್ಲ. ಅವರ ಫೋನ್ ಸ್ವಿಚ್ ಆಫ್ ಆಗಿತ್ತು. ಆ ಸಮಯದಲ್ಲಿ ಅವರು ಇಂಫಾಲ್ ಬಳಿಯ ನಂಬೋಲ್ ಕಡೆಗೆ ಹೋಗಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ದಾಖಲಾಗಿದೆ ಎಂದು ಪೊಲೀಸರು ಬಹಿರಂಗಪಡಿಸಿದರು. ಈಗ ಶಸ್ತ್ರಸಜ್ಜಿತ ವ್ಯಕ್ತಿಗಳು ಅವರನ್ನು ಅಪಹರಿಸಿ ಕೊಂದಿರಬಹುದು ಎಂದು ನಂಬಲಾಗಿದೆ.

ಏತನ್ಮಧ್ಯೆ, ಘಟನೆಯ ಕುರಿತು ಸಿಬಿಐ ಈಗಾಗಲೇ ತನಿಖೆಯನ್ನು ಪ್ರಾರಂಭಿಸಿದೆ ಎಂದು ಮಣಿಪುರ ಸರ್ಕಾರ ತನ್ನ ಹೇಳಿಕೆಯಲ್ಲಿ ಬಹಿರಂಗಪಡಿಸಿದೆ. ಹತ್ಯೆಗೆ ಕಾರಣರಾದವರಿಗೆ ಕಠಿಣ ಶಿಕ್ಷೆ ವಿಧಿಸಲಾಗುವುದು ಎಂದು ಭರವಸೆ ನೀಡಿದ್ದಾರೆ. ಮತ್ತೊಂದೆಡೆ ಕುಕಿ ಸಮುದಾಯಕ್ಕೆ ಸೇರಿದ ಪುಂಡರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು