ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪಾಯಕಾರಿ ದೆಹಲಿ ಗಾಳಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ – ಸುಪ್ರೀಂ ಕೋರ್ಟ್ ಕಡಕ್ ಸೂಚನೆಕರ್ರೆಗುಟ್ಟಾ ಬೆಟ್ಟದಲ್ಲಿ ಸ್ಫೋಟಕ ಪತ್ತೆ: 711 BGL ಶೆಲ್‌ಗಳು ವಶಕ್ಕೆಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣಸ್ಟಿಂಗ್ ಆಪರೇಷನ್ ನಲ್ಲಿ ಕುಮಾರಸ್ವಾಮಿ‌‌ ಪ್ರಯತ್ನ ಸಂಪೂರ್ಣ ವಿಫಲ – ಶಿವರಾಜ್ ಎಸ್. ತಂಗಡಗಿಕರ್ನಾಟಕದ ಪೆಟ್ರೋಲ್‌ನಲ್ಲಿ 31.2% ಎಥೆನಾಲ್! ವಾಹನ ಸವಾರರಿಗೆ ಆತಂಕ; E20 ಪ್ರಚಾರದ ಜಾಹೀರಾತುಗಳ ಹಿಂದಿನ ಹುನ್ನಾರವೇನು?ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಿಗೆ ಬೆಂಕಿ: ಪ್ರಯಾಣಿಕರು ಸುರಕ್ಷಿತ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೀಸರ್ ವಿರುದ್ಧ ಆಕ್ರೋಶ: ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ, ಸಿನೆಮಾ ಬಿಡುಗಡೆ ಮಾಡದಂತೆ ಒತ್ತಾಯಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ 20,000 ಕೋಟಿ ರೂ –  ಈಶ್ವರ ಖಂಡ್ರೆಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಪತ್ರಗಳ ಬಳಕೆ – ಸಚಿವ ಈಶ್ವರ ಖಂಡ್ರೆKSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆಅಪರಾಧಗಳ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್‌ಗೆ ಕಂಪನಿಗಳೇ ಹೊಣೆ!ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ಪತ್ತೆ‘ಕನ್ನಡಿಗರಿಗೆ ಉದ್ಯೋಗ ಕೊಡಿ, ಕಂಪನಿಗಳಿಗೆ ಕಿರುಕುಳ ಕೊಡಬೇಡಿ’: ಸರಕಾರದ ಇಬ್ಬಗೆ ನೀತಿ & ಅಸಲಿ ಪರಿಹಾರ

ಕೆಂಪು ಇರುವೆ (ಚಗಳಿ) ಚಟ್ನಿಗೆ ಜಿಐ ಟ್ಯಾಗ್ ಲೈನ್ ಪಡೆದುಕೊಂಡ ಒಡಿಶಾ

PPeepal Media Desk

Peepal Media Desk ದೇಶ

• 1 ನಿಮಿಷದ ಓದು

ಕೆಂಪು ಇರುವೆ (ಚಗಳಿ) ಚಟ್ನಿಗೆ ಜಿಐ ಟ್ಯಾಗ್ ಲೈನ್ ಪಡೆದುಕೊಂಡ ಒಡಿಶಾ

ಒಡಿಶಾದ ಕೆಂಪು ಇರುವೆ ಚಟ್ನಿ ಭೌಗೋಳಿಕವಾಗಿ ಗುರುತಿಸಲ್ಪಟ್ಟಿದೆ. ಒರಿಸ್ಸಾ ಬುಡಕಟ್ಟು ವಿಶೇಷ ಅಡುಗೆಯಾದ ಈ ಚಟ್ನಿ ಈಗ GI ಟ್ಯಾಗ್‌ನೊಂದಿಗೆ ನಮಗೆಲ್ಲರಿಗೂ ಲಭ್ಯವಿದೆ.

ಇದು ಒರಿಸ್ಸಾ ರಾಜ್ಯದ ಬುಡಕಟ್ಟು ಆಹಾರ.. ಭೌಗೋಳಿಕ ಗುರುತನ್ನು ಪಡೆದುಕೊಂಡಿದೆ.

ಈ ಕೆಂಪು ಇರುವೆ ಚಟ್ನಿಯನ್ನು ಅಲ್ಲಿನ ಆದಿವಾಸಿಗಳು ಬಹಳ ಮುಖ್ಯವಾದ ಆಹಾರವಾಗಿ ಬಳಸುತ್ತಾರೆ. ಈ ಕೆಂಪು ಇರುವೆ ಚಟ್ನಿ ಇಂದಿಗೂ ಆದಿವಾಸಿಗಳ ನಡುವೆ ಪ್ರಧಾನ ಖಾದ್ಯವಾಗಿದೆ. ಕೆಂಪಿರುವೆ, ಚೌಳಿ, ಕೆಂಜಿಗ ಹಾಗೂ ಚಗಳಿ ಎಂದು ಕರೆಯಲ್ಪಡುವ ಈ ಇರುವೆಯ ಚಟ್ನಿಗೆ GI ಟ್ಯಾಗ್‌ ದೊರೆತಿದ್ದು, ಈ ಟ್ಯಾಗ್‌ ನೀಡಲು ಕಾರಣ ಅದರಲ್ಲಿ ಲಭ್ಯವಿರುವ ಪೋಷಕಾಂಶಗಳು ಎನ್ನಲಾಗಿದೆ.

ಇದು ಔಷಧೀಯ ಗುಣಗಳ ಜೊತೆಗೆ ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ ಎನ್ನಲಾಗುತ್ತದೆ. ಹೀಗಾಗಿ ಸ್ಥಳೀಯವಾಗಿ “ಕೈ ಚಟ್ನಿ” ಎಂದು ಕರೆಯಲ್ಪಡುವ ಈ ಕೆಂಪು ಇರುವೆ ಚಟ್ನಿಗೆ ಈಗ GI ಟ್ಯಾಗ್ ನೀಡಲಾಗಿದೆ. ಇದು ಜನವರಿ 2ರಿಂದ ಭೌಗೋಳಿಕವಾಗಿ ಗುರುತಿಸಲ್ಪಟ್ಟಿದೆ.

ಈ ಕೆಂಜಿಗದ ಚಟ್ನಿಯನ್ನು ನಮ್ಮ ಕರ್ನಾಟಕದ ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯ ಜಿಲ್ಲೆಯ ಕೆಲವು ತಾಲ್ಲೂಕುಗಳಲ್ಲೂ ಊಟದೊಂದಿಗೆ ಸೇವಿಸಲಾಗುತ್ತದೆ.

ಚಗಳಿ ಚಣ್ನಿ ಮಾಡುವ ವಿಧಾನ ಶಿಕಾರಿ ಮಾಡಿದ ಇರುವೆಗಳನ್ನು ಮನೆಗೆ ತಂದು ಆ ಪಾತ್ರೆಗೆ ಸ್ವಲ್ಪ ಶಾಖ ಕೊಟ್ಟು ಮತ್ತೊಮ್ಮೆ ಚಗಳಿಯನ್ನು ಸೊಪ್ಪು ಸದೆಯಿಂದ ಬೇರ್ಪಡಿಸುತ್ತಾರೆ. ಮತ್ತೊಂದು ಕಡೆ ಹಸಿ ಮೆಣಸಿನಕಾಯಿ ಅಥವಾ ಜೀರಿನ ಮೆಣಸಿನಕಾಯಿ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಶುಂಠಿಯನ್ನು ಹುರಿದುಕೊಂಡು ಚಗಳಿ ಜೊತೆ ಹಾಕಿ ರುಬ್ಬುವ ಕಲ್ಲಿನಲ್ಲಿ ಕಡೆಯುತ್ತಾರೆ. ಈ ವೇಳೆ ಅರಿಶಿನ ಮತ್ತು ಉಪ್ಪಿನ ಪುಡಿಯನ್ನು ಕೂಡ ಮಿಶ್ರಣ ಮಾಡಿ ಚೆನ್ನಾಗಿ ನುಣ್ಣಗೆ ಆಗುವ ತನಕ ಕಲ್ಲಿನಲ್ಲಿ ಕಡೆಯಲಾಗುತ್ತದೆ. ಚಗಳಿಯಲ್ಲಿ ಹುಳಿ ಅಂಶ ಇರುವುದರಿಂದ ಯಾವುದೇ ಹುಳಿ ಪದಾರ್ಥಗಳನ್ನು ಚಟ್ನಿಗೆ ಬಳಸುವುದಿಲ್ಲ. ಚೆನ್ನಾಗಿ ರುಬ್ಬುವ ಕಲ್ಲಿನಲ್ಲಿ ಕಡೆದ ಬಳಿಕ ರುಚಿ ರುಚಿಯಾದ ಚಗಳಿ ಚಟ್ನಿ ಸಿದ್ಧವಾಗುತ್ತದೆ.

PPeepal Media Desk

Peepal Media Desk

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು