ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬಿಹಾರ | ಕಬ್ಬು ಕಿತ್ತ ಆರೋಪ: ಹಲ್ಲೆಗೊಳಗಾದ ಇಬ್ಬರು ಮದರಸಾ ವಿದ್ಯಾರ್ಥಿಗಳು ಕೆರೆಯಲ್ಲಿ ಶವವಾಗಿ ಪತ್ತೆಜನನುಡಿ 2026 LIVE: ಮಂಗಳೂರಿನಲ್ಲಿ ಎರಡು ದಿನಗಳ ಚಿಂತನ ಮಂಥನ ಒಂದು ಆರಂಭ; ಪ್ರತಿ ಅಪ್‌ಡೇಟ್‌ಗೆ ‘PEEPAL ‘ ನೋಡಿಬೆಲೆ ಏರಿಕೆಯ ಬಿಸಿ: ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಸಂಕಷ್ಟದ ಹೊಡೆತ!ಊರ ಬಯಲಿನ ನಡುವೆ : ಈಗ ಅಂಗಳವೂ ಇಲ್ಲ, ಆಡುವವರೂ ಇಲ್ಲ!ಆಶಾ ಕಾರ್ಯಕರ್ತೆಯರ ಹೋರಾಟ: 10 ದಿನ ವಿಧಾನಸೌಧಕ್ಕೆ ರಜೆ ಘೋಷಿಸಿ; ಆಗ್ರಹ!ಸಂಪುಟ ಪುನಾರಚನೆ ಚರ್ಚೆ ಮತ್ತೆ ಮುನ್ನೆಲೆಗೆ: ಸಚಿವ ಸ್ಥಾನದ ಆಕಾಂಕ್ಷಿಗಳಿಂದ ವರಿಷ್ಠರ ಮೇಲೆ ಒತ್ತಡ; ದೆಹಲಿಗೆ ಹೊರಟು ಸಿಎಂ ಡಿಕೆಶಿಕ್ಷೇತ್ರ ಮರುವಿಂಗಡಣೆಗೆ ಡಿಎಂಕೆ ಬೆಂಬಲ!; ರಾಜ್ಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವುದರ ಬಗ್ಗೆ ನಿರೀಕ್ಷೆಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ದೌರ್ಬಲ್ಯವಲ್ಲ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ಪತಿ ವಿರುದ್ಧ ಪೊಲೀಸ್ ದೂರು ನೀಡಿಲ್ಲವೆಂಬ ಕಾರಣಕ್ಕೆ ಪತ್ನಿಯ ದೌರ್ಜನ್ಯದ ಆರೋಪ ಸುಳ್ಳಾಗುವುದಿಲ್ಲ: ಕರ್ನಾಟಕ ಹೈಕೋರ್ಟ್ಹೆದ್ದಾರಿ ವಿಸ್ತರಣೆಗೆ 400 ವರ್ಷಗಳ ಪೀರ್ ಬಾಬಾ ದರ್ಗಾ ತೆರವು ವಿರೋಧಿಸಿ ಹಿಂದೂ–ಮುಸ್ಲಿಮರಿಂದ ಒಗ್ಗಟ್ಟು ಪ್ರದರ್ಶನಪತ್ರಕರ್ತರೆಂದು ಗುರುತಿಸಿಕೊಳ್ಳಲು ಅರ್ಹತೆಗಳೇನು? ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ರಕ್ಷಣೆ ನೀಡಬೇಕೇ? ಸುಪ್ರೀಂ ಕೋರ್ಟ್ ಪ್ರಶ್ನೆಕ್ಷೇತ್ರ ಮರುವಿಂಗಡಣೆ ಮಸೂದೆಗೆ ಮತ್ತೆ ವೇದಿಕೆ ಸಿದ್ಧ? ನವೆಂಬರ್ 30ರಿಂದ ಸಂಸತ್ ವಿಶೇಷ ಅಧಿವೇಶನಪೆಟ್ರೋಲ್‌ನಲ್ಲಿ ಮತ್ತೊಂದು ಬದಲಾವಣೆಗೆ ಕೇಂದ್ರದ ಸಿದ್ಧತೆ; E25 ಜಾರಿಗೆ ಸಂಬಂಧಿಸಿದಂತೆ ಮಹತ್ವದ ಘೋಷಣೆKSRTC ಪುರುಷ ನೌಕರರಿಗೆ ಗುಡ್‌ನ್ಯೂಸ್: ಪತ್ನಿಯ ಹೆರಿಗೆ ಸಂದರ್ಭದಲ್ಲಿ 15 ದಿನಗಳ ಪಿತೃತ್ವ ರಜೆ ಮಂಜೂರುಚಳಿಗಾಲದ ನಡುವೆಯೇ ಮತ್ತೆ ಮಳೆ ಮುನ್ಸೂಚನೆ: ನವೆಂಬರ್ 28ರವರೆಗೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಮಳೆ ಸಾಧ್ಯತೆಕಾಂಗ್ರೆಸ್ ವಿರುದ್ಧ ಬಿಜೆಪಿ–ಜೆಡಿಎಸ್ ಜಂಟಿ ಸಮರಕ್ಕೆ ಸಿದ್ಧತೆ; ಚುನಾವಣಾ ಮೈತ್ರಿಗೆ ಸಮನ್ವಯ ಸಮಿತಿ ರಚನೆ25 ಲಕ್ಷ ಸರ್ಕಾರಿ ಉದ್ಯೋಗ, ರೈತರ ಸಾಲ ಮನ್ನಾ, ವೃದ್ಧೆಯರಿಗೆ ₹40 ಸಾವಿರ ಪಿಂಚಣಿ: ಅಖಿಲೇಶ್ ಯಾದವ್ ಭರ್ಜರಿ ಚುನಾವಣಾ ಘೋಷಣೆಅಮಾಯಕರನ್ನು ನಕ್ಸಲಿಸಂಗೆ ಸೆಳೆದವರಿಗೂ ಹೊಣೆಗಾರಿಕೆ ನಿಗದಿಯಾಗಬೇಕು: ರಾಷ್ಟ್ರಪತಿ ದ್ರೌಪದಿ ಮುರ್ಮುರಾಹುಲ್ ಗಾಂಧಿ ಹೆಸರಿನ ಪೋಸ್ಟ್‌ಗಳಿಗೆ ನಿರ್ಬಂಧ; ‘ಮೆಟಾ’ ವಿರುದ್ಧ ಕಾನೂನು ಸಮರಕ್ಕೆ ಇಳಿದ ಕಾಂಗ್ರೆಸ್ತುಂಗಾ ನದಿಯಲ್ಲಿ ಬೆಂಗಳೂರಿನ ನಾಲ್ವರು ಯುವಕರು ನೀರುಪಾಲು: ಈಶ್ವರ ಮಲ್ಪೆ ತಂಡದಿಂದ ಮೃತದೇಹಗಳ ಪತ್ತೆ

ಜನನುಡಿ 2026 LIVE: ಮಂಗಳೂರಿನಲ್ಲಿ ಎರಡು ದಿನಗಳ ಚಿಂತನ ಮಂಥನ ಒಂದು ಆರಂಭ; ಪ್ರತಿ ಅಪ್‌ಡೇಟ್‌ಗೆ ‘PEEPAL ‘ ನೋಡಿ

MMurali Maluru

Murali Maluru ರಾಜ್ಯ

• 2 ನಿಮಿಷದ ಓದು

Jananudi 2026

ಮಂಗಳೂರು: ಪ್ರಜಾಪ್ರಭುತ್ವ, ಯುವಜನರ ರಾಜಕೀಯ ಭಾಗವಹಿಸುವಿಕೆ, ಭವಿಷ್ಯದ ಭಾರತ, ಸಾಮಾಜಿಕ ನ್ಯಾಯ, ಶಿಕ್ಷಣ, ಮಾಧ್ಯಮ ಮತ್ತು ಸಮಕಾಲೀನ ರಾಜಕಾರಣದ ಹಲವು ಆಯಾಮಗಳ ಕುರಿತು ಚರ್ಚಿಸಲು ಮಂಗಳೂರಿನಲ್ಲಿ ‘ಜನನುಡಿ 2026’ ವೇದಿಕೆ ಸಜ್ಜಾಗಿದೆ. ನವೆಂಬರ್ 28 ಮತ್ತು 29ರಂದು ನಡೆಯಲಿರುವ ಈ ಎರಡು ದಿನಗಳ ಕಾರ್ಯಕ್ರಮದಲ್ಲಿ ರಾಜಕೀಯ ಚಿಂತಕರು, ಪತ್ರಕರ್ತರು, ಶಿಕ್ಷಣ ತಜ್ಞರು, ಸಾಮಾಜಿಕ ಹೋರಾಟಗಾರರು ಹಾಗೂ ಯುವಜನರು ಒಂದೇ ವೇದಿಕೆಯಲ್ಲಿ ಮುಖಾಮುಖಿಯಾಗಲಿದ್ದಾರೆ.

ಮಂಗಳೂರಿನಲ್ಲಿ ನಡೆಯಲಿರುವ ‘ಜನನುಡಿ 2026’ ಕೇವಲ ಭಾಷಣಗಳ ಕಾರ್ಯಕ್ರಮವಲ್ಲ. ಯುವಜನರ ರಾಜಕಾರಣ ಯಾವ ದಿಕ್ಕಿನಲ್ಲಿ ಸಾಗಬೇಕು, ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳೇನು, ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ವರ್ತಮಾನದ ರಾಜಕಾರಣದಲ್ಲಿ ಹೇಗೆ ಮುನ್ನೆಲೆಗೆ ತರಬೇಕು ಎಂಬಿತ್ಯಾದಿ ಪ್ರಶ್ನೆಗಳನ್ನು ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ತರುವ ಪ್ರಯತ್ನವಾಗಿದೆ.

‘ಯುವಜನ ರಾಜಕಾರಣ: ದಿಕ್ಕು–ಭವಿಷ್ಯ–ಸವಾಲು’ ಎಂಬ ಕೇಂದ್ರ ಆಶಯದೊಂದಿಗೆ ಆಯೋಜಿಸಲಾಗಿರುವ ಈ ಕಾರ್ಯಕ್ರಮವು ಇಂದಿನ ರಾಜಕೀಯ ಮತ್ತು ಸಾಮಾಜಿಕ ವಾತಾವರಣದಲ್ಲಿ ಯುವಜನರ ಪಾತ್ರವನ್ನು ಮರುಪರಿಶೀಲಿಸಲು ಅವಕಾಶ ಕಲ್ಪಿಸಲಿದೆ.

ಮೊದಲ ದಿನ: ಜನನುಡಿ, ಭವಿಷ್ಯದ ಭಾರತ ಮತ್ತು ಸಾಮಾಜಿಕ ನ್ಯಾಯ

ನವೆಂಬರ್ 28ರ ಬೆಳಗ್ಗೆ 9 ಗಂಟೆಗೆ ಪ್ರಸ್ತಾವನಾ ಕಾರ್ಯಕ್ರಮದೊಂದಿಗೆ ಜನನುಡಿ ಆರಂಭವಾಗಲಿದೆ. ಬಸವರಾಜ್ ಸೂಳಿಭಾವಿ ಅವರಿಂದ ಉದ್ಘಾಟನೆ ನಡೆಯಲಿದ್ದು, ಡಾ. ಗಣನಾಥ ಎಕ್ಕಾರು ಅಧ್ಯಕ್ಷತೆ ವಹಿಸಲಿದ್ದಾರೆ.

ಬೆಳಗ್ಗೆ 10ರಿಂದ 12.30ರವರೆಗೆ ನಡೆಯುವ ಮೊದಲ ಪ್ರಮುಖ ಗೋಷ್ಠಿ ‘ಜನನುಡಿ ಉದ್ಘಾಟನಾ ಗೋಷ್ಠಿ’. ಪ್ರೊ. ರಹಮತ್ ತರೀಕೆರೆ ಉದ್ಘಾಟಿಸಲಿದ್ದು, ಶಿಕ್ಷಣ, ರಾಜಕೀಯ ಮತ್ತು ಸಾಮಾಜಿಕ ವಲಯದ ಗಣ್ಯರು ಭಾಗವಹಿಸಲಿದ್ದಾರೆ.

ಮಧ್ಯಾಹ್ನದ ಗೋಷ್ಠಿಯಲ್ಲಿ ‘ಭವಿಷ್ಯದ ಭಾರತ: ಆರ್ಥಿಕತೆ ಮತ್ತು ಜೀವನೋಪಾಯ’ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ. ಜಾಗತಿಕ ಆರ್ಥಿಕ ಬದಲಾವಣೆಗಳು, ಉದ್ಯೋಗ, ಬದುಕಿನ ಭದ್ರತೆ ಮತ್ತು ಸಾಮಾನ್ಯ ಜನರ ಜೀವನೋಪಾಯದ ಪ್ರಶ್ನೆಗಳನ್ನು ಈ ಗೋಷ್ಠಿ ಮುನ್ನೆಲೆಗೆ ತರಲಿದೆ.

ಇದರ ಬೆನ್ನಲ್ಲೇ ‘ಅಸಮಾನತೆಯ ಹಾದು-ಪಾಡು’ ಎಂಬ ವಿಷಯದ ಚರ್ಚೆ ನಡೆಯಲಿದೆ. ಸಂಜೆ ‘ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ’ ಕುರಿತ ಗೋಷ್ಠಿ ಆಯೋಜನೆಯಾಗಿದೆ. ಶಿಕ್ಷಣದ ಅವಕಾಶಗಳು, ಸಾಮಾಜಿಕ ಅಸಮಾನತೆ ಮತ್ತು ನ್ಯಾಯದ ಪರಿಕಲ್ಪನೆಗಳ ನಡುವಿನ ಸಂಬಂಧವನ್ನು ಈ ಚರ್ಚೆ ಪರಿಶೀಲಿಸಲಿದೆ.

ದಿನದ ಮತ್ತೊಂದು ಪ್ರಮುಖ ಆಕರ್ಷಣೆ ‘ಬಹುಭಾಷಾ ನಾಟಕ ಸ್ಪರ್ಧೆ ರೈ ಜೋಗಿಗೆ’. ಇದರ ನಂತರ ‘ಸಾಂಸ್ಕೃತಿಕ ಕಾರ್ಯಕ್ರಮ’ ನಡೆಯಲಿದ್ದು, ಜನಪರ ಸಾಂಸ್ಕೃತಿಕ ಅಭಿವ್ಯಕ್ತಿಗೂ ವೇದಿಕೆ ಕಲ್ಪಿಸಲಾಗಿದೆ.

ಎರಡನೇ ದಿನ: ಪ್ರಜಾಪ್ರಭುತ್ವದ ಭವಿಷ್ಯ ಮತ್ತು ಸಮಕಾಲೀನ ರಾಜಕಾರಣ

ನವೆಂಬರ್ 29ರ ಕಾರ್ಯಕ್ರಮಗಳು ಬೆಳಗ್ಗೆ 9 ಗಂಟೆಗೆ ‘ಪ್ರತಿರೋಧದ ಕವಿತೆ ಕವಿಗೋಷ್ಠಿ’ಯೊಂದಿಗೆ ಆರಂಭವಾಗಲಿವೆ. ಕವಿತೆ, ಪ್ರತಿರೋಧ ಮತ್ತು ಸಾಮಾಜಿಕ ಪ್ರಜ್ಞೆಯ ಅಭಿವ್ಯಕ್ತಿಗೆ ಈ ವೇದಿಕೆ ಅವಕಾಶ ಕಲ್ಪಿಸಲಿದೆ.

ಬೆಳಗ್ಗೆ 10.30ರಿಂದ ನಡೆಯುವ ‘ರಾಜಕೀಯ, ಅಸ್ತಿತ್ವ ಮತ್ತು ಡಿಜಿಟಲ್ ರಾಜಕಾರಣ’ ಗೋಷ್ಠಿ ಈ ಬಾರಿಯ ಜನನುಡಿಯ ಪ್ರಮುಖ ಚರ್ಚೆಗಳಲ್ಲಿ ಒಂದಾಗಿದೆ. ಡಿಜಿಟಲ್ ಮಾಧ್ಯಮಗಳು ರಾಜಕೀಯ ಅಭಿಪ್ರಾಯ ರೂಪಿಸುವಲ್ಲಿ ವಹಿಸುತ್ತಿರುವ ಪಾತ್ರ, ಅಸ್ತಿತ್ವದ ರಾಜಕಾರಣ ಮತ್ತು ಬದಲಾಗುತ್ತಿರುವ ಸಾರ್ವಜನಿಕ ಸಂವಹನದ ಸ್ವರೂಪ ಇಲ್ಲಿ ಚರ್ಚೆಯಾಗಲಿದೆ.

ಮಧ್ಯಾಹ್ನ ‘ಕೋಮುವಾದ–ಕೋವಿನ ರಾಜಕಾರಣ ಮೈತ್ರಿ–ಸವಾಲು’ ಎಂಬ ಗೋಷ್ಠಿ ನಡೆಯಲಿದೆ. ಕೋಮುವಾದ, ರಾಜಕೀಯ ಧ್ರುವೀಕರಣ ಮತ್ತು ಪ್ರಜಾಪ್ರಭುತ್ವದ ಮುಂದಿರುವ ಸವಾಲುಗಳನ್ನು ಈ ಚರ್ಚೆ ವಿಶ್ಲೇಷಿಸಲಿದೆ.

ಇದರೊಂದಿಗೆ ‘ವಿಶೇಷ ಅತಿಥಿ ಜೊತೆ ಮಾತುಕತೆ’ ಕಾರ್ಯಕ್ರಮವೂ ನಡೆಯಲಿದೆ. ನಂತರ ‘ಪ್ರಜಾಪ್ರಭುತ್ವದ ಅಳಿವು, ಉಳಿವು–ಸಿದ್ಧಾಂತಗಳ ಪಾತ್ರ’ ಎಂಬ ಗೋಷ್ಠಿಯಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳು, ರಾಜಕೀಯ ಸಿದ್ಧಾಂತಗಳು ಮತ್ತು ವರ್ತಮಾನದ ರಾಜಕೀಯ ಬೆಳವಣಿಗೆಗಳ ಕುರಿತು ಚರ್ಚೆ ನಡೆಯಲಿದೆ.

ಎರಡು ದಿನಗಳ ಕಾರ್ಯಕ್ರಮಕ್ಕೆ ಸಮಾರೋಪ ಸಮಾರಂಭದೊಂದಿಗೆ ತೆರೆ ಬೀಳಲಿದೆ. ‘ಫ್ಯಾಸಿಸಂ ವಿರುದ್ಧ ಭಾರತ’ ಎಂಬ ಆಶಯದೊಂದಿಗೆ ನಡೆಯುವ ಸಮಾರೋಪವು ಜನನುಡಿಯ ರಾಜಕೀಯ ಮತ್ತು ಸಾಮಾಜಿಕ ಚರ್ಚೆಗಳಿಗೆ ಒಂದು ಮಹತ್ವದ ಅಂತಿಮ ವೇದಿಕೆಯಾಗಲಿದೆ.

ಕೇವಲ ಕಾರ್ಯಕ್ರಮವಲ್ಲ, ಪ್ರಶ್ನೆಗಳನ್ನು ಎತ್ತುವ ವೇದಿಕೆ

ಇಂದಿನ ಭಾರತದಲ್ಲಿ ಯುವಜನರ ಮುಂದಿರುವ ಪ್ರಶ್ನೆಗಳು ಉದ್ಯೋಗ ಮತ್ತು ಶಿಕ್ಷಣಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಜಾಪ್ರಭುತ್ವದಲ್ಲಿ ಅವರ ಪಾಲ್ಗೊಳ್ಳುವಿಕೆ, ಅಭಿವ್ಯಕ್ತಿ ಸ್ವಾತಂತ್ರ್ಯ, ಸಾಮಾಜಿಕ ನ್ಯಾಯ, ಧರ್ಮನಿರಪೇಕ್ಷತೆ ಮತ್ತು ರಾಜಕೀಯ ಹೊಣೆಗಾರಿಕೆಯೂ ಅಷ್ಟೇ ಮುಖ್ಯವಾಗಿವೆ.

ಒಂದು ಕಡೆ ಡಿಜಿಟಲ್ ಮಾಧ್ಯಮಗಳು ಸಾರ್ವಜನಿಕ ಅಭಿಪ್ರಾಯವನ್ನು ರೂಪಿಸುತ್ತಿದ್ದರೆ, ಮತ್ತೊಂದೆಡೆ ರಾಜಕೀಯ ಚರ್ಚೆಗಳು ಹೆಚ್ಚಾಗಿ ಧ್ರುವೀಕರಣದತ್ತ ಸಾಗುತ್ತಿರುವ ಆತಂಕವೂ ಇದೆ. ಇಂತಹ ಸಂದರ್ಭದಲ್ಲಿ ಯುವಜನರು ರಾಜಕೀಯವನ್ನು ಹೇಗೆ ಅರ್ಥಮಾಡಿಕೊಳ್ಳಬೇಕು? ರಾಜಕೀಯವೆಂದರೆ ಕೇವಲ ಅಧಿಕಾರ ಹಿಡಿಯುವ ಪ್ರಕ್ರಿಯೆಯೇ ಅಥವಾ ಸಮಾಜವನ್ನು ಬದಲಿಸುವ ಹೊಣೆಗಾರಿಕೆಯೂ ಹೌದೇ? ಪ್ರಜಾಪ್ರಭುತ್ವದ ಮೌಲ್ಯಗಳನ್ನು ಉಳಿಸುವಲ್ಲಿ ಯುವಜನರ ಪಾತ್ರವೇನು?

ಜನನುಡಿ 2026ರ ಕೇಂದ್ರ ಆಶಯವನ್ನು ಈ ಪ್ರಶ್ನೆಗಳ ಹಿನ್ನೆಲೆಯಲ್ಲಿ ಅರ್ಥಮಾಡಿಕೊಳ್ಳಬಹುದು.

ಈ ಕಾರ್ಯಕ್ರಮವನ್ನು ‘ಅಭಿಮತ, ಮಂಗಳೂರು’ ಮತ್ತು ‘ಭಗತ್ ಸಿಂಗ್ ಮೆಮೋರಿಯಲ್ ಕಲ್ಚರಲ್ ಟ್ರಸ್ಟ್’ ಆಯೋಜಿಸಿವೆ. ಮಂಗಳೂರಿನ ಬಿಜಿಎಸ್ ಭವನ ಸಭಾಂಗಣ, ಕೆಟಿಸಿ ಕ್ಯಾಂಪಸ್, ಬಲ್ಲಾಳ್‌ಬಾಗ್‌ನಲ್ಲಿ ಎರಡು ದಿನಗಳ ಕಾರ್ಯಕ್ರಮ ನಡೆಯಲಿದೆ.

ರಾಜಕೀಯವನ್ನು ಕೇವಲ ಪಕ್ಷಗಳ ನಡುವಿನ ಸ್ಪರ್ಧೆಯಾಗಿ ನೋಡದೆ, ಜನರ ಬದುಕು, ಹಕ್ಕುಗಳು ಮತ್ತು ಸಾಮಾಜಿಕ ಬದಲಾವಣೆಯೊಂದಿಗೆ ಬೆಸೆದು ಚರ್ಚಿಸುವ ಅಗತ್ಯವಿರುವ ಹೊತ್ತಿನಲ್ಲಿ ಜನನುಡಿ 2026 ಮಹತ್ವ ಪಡೆದುಕೊಳ್ಳುತ್ತದೆ. ಯುವಜನರ ಪ್ರಶ್ನೆಗಳಿಗೆ ಉತ್ತರ ಹುಡುಕುವುದರ ಜತೆಗೆ, ಅವರೇ ಹೊಸ ಪ್ರಶ್ನೆಗಳನ್ನು ಕೇಳುವಂತೆ ಪ್ರೇರೇಪಿಸುವ ವೇದಿಕೆಯಾಗಲಿ ಎಂಬುದು ಈ ಕಾರ್ಯಕ್ರಮದ ಆಶಯ.

ನಿಮ್ಮ ಪೀಪಲ್ ಟಿವಿಯಲ್ಲಿ ಎರಡೂ ದಿನಗಳ ಕಾರ್ಯಕ್ರಮಗಳ ಲೈವ್‌ ಹಾಗೂ ಭಾಷಣದ ವರದಿಗಳಿಗಾಗಿ ವೆಬ್‌ಸೈಟ್‌ ಗಮನಿಸಿ.

MMurali Maluru

Murali Maluru

Peepal Media · ರಾಜ್ಯ ವಿಭಾಗ

Murali MV is a reporter cum presenter at Peepal Media, covering sports and political affairs. An avid reader with a keen interest in current affairs, he brings curiosity, insight and a passion for storytelling to his journalism. His reporting focuses on exploring key developments and issues shaping the worlds of sports and politics.

ಸಂಬಂಧಿತ ಸುದ್ದಿಗಳು