ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಮಧುಮೇಹ ಪತ್ತೆಯಲ್ಲಿನ ವಿಳಂಬ ಆತಂಕಕಾರಿ; ಆರಂಭಿಕ ತಪಾಸಣೆಗೆ WHO ಕರೆವಿಶ್ವ ಬಾಕ್ಸ್ ಆಫೀಸ್‌ನಲ್ಲಿ ₹1,110 ಕೋಟಿ ಗಳಿಸಿದ ‘ರಾಮಾಯಣ’; ಯಶ್‌ಗೆ ಮತ್ತೊಂದು 1,000 ಕೋಟಿ ದಾಖಲೆ!ಋತುಬಂಧದ ಮಹಿಳೆಯರ ಆರೋಗ್ಯ ರಕ್ಷಣೆಗೆ ‘ಋತುತಾರೆ’ ಯೋಜನೆ ಜಾರಿ; ನಟಿ, ಮಾಜಿ ಸಂಸದೆ ರಮ್ಯಾ ರಾಯಭಾರಿನನ್ನ ಫೋನ್‌ನಲ್ಲೇ ಸಾಕ್ಷ್ಯವಿದೆ, ಮೋದಿಯವರೇ ಫೋನ್ ಕದ್ದಾಲಿಕೆ ಮಾಡುತ್ತಿದ್ದಾರೆ: ರಾಹುಲ್ ಗಾಂಧಿ; ಮುಖಾಮುಖಿ ಚರ್ಚೆಗೆ ಮತ್ತೊಮ್ಮೆ ಸವಾಲುಕಾಳಿಂಗ ಸರ್ಪ ಸೆರೆಹಿಡಿದ ಆರೋಪ: ಉರಗ ರಕ್ಷಕ ಡಾ. ಗೌರಿಶಂಕರ್ ವಿರುದ್ಧದ ಕ್ರಿಮಿನಲ್ ಪ್ರಕರಣ ರದ್ದುಪಡಿಸಿದ ಹೈಕೋರ್ಟ್ಮಾನಹಾನಿ ಪ್ರಕರಣದಲ್ಲಿ ಯತ್ನಾಳ್‌ಗೆ ಹೈಕೋರ್ಟ್ ಹಿನ್ನಡೆ; ಅರ್ಜಿ ವಜಾಬಸ್‌ಗಳಲ್ಲಿ ತಂಬಾಕು ಉತ್ಪನ್ನಗಳ ಪ್ರಚಾರಕ್ಕೆ ಬ್ರೇಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಸುತ್ತೋಲೆ ಪ್ರಶ್ನಿಸಿದ್ದ ಅರ್ಜಿ ಹೈಕೋರ್ಟ್‌ನಿಂದ ವಜಾಬೆಂಗಳೂರಿನಲ್ಲಿ ರಸ್ತೆ ನಿರ್ವಹಣೆ ಸಮಸ್ಯೆಗಳದ್ದೇ ಸಿಂಹಪಾಲು: ಪಾಲಿಕೆ ಫೋನ್‌-ಇನ್‌ಗೆ 43 ದೂರುಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ವಿಮಾನ ಹಾರಾಟ ಸ್ಥಗಿತಕ್ಕೆ ಕೇಂದ್ರದ ಉಡಾನ್ ನೀತಿಯೇ ಕಾರಣ: ಸಚಿವ ಎಂ.ಬಿ. ಪಾಟೀಲ್ಸಿಡಿ ಮಾಡೋದು, ಪೋಸ್ಟರ್ ಅಂಟಿಸೋದು ಬಿಡ್ರಿ ಡಿಕೆಶಿ – ಎಚ್ಡಿಕೆ ಗರಂಆರ್‌ಎಸ್ಎಸ್‌ಗೆ ನೊಂದಣಿ ಮಾಡಿಸುವುದು ಸೂಕ್ತ, ಮಾಡಿಸುತ್ತೇವೆ: ಪ್ರಿಯಾಂಕ್ ಖರ್ಗೆರೈಲುಗಳಲ್ಲಿ ಗಬ್ಬು ವಾಸನೆ, ರೈಲ್ವೇಗೆ 30,000 ರೂ. ದಂಡ ವಿಧಿಸಿ – ಚೀಮಾರಿ ಹಾಕಿದ ಗ್ರಾಹಕ ಆಯೋಗಪತ್ರಿಕಾಗೋಷ್ಠಿ ವೇಳೆ ವ್ಯಕ್ತಿಗೆ ಮುತ್ತಿಟ್ಟ ಬಿಜೆಪಿ ಶಾಸಕ – ಮರ್ಯಾದೆ ಇಲ್ಲಾ ಎಂದ ನೆಟ್ಟಿಗರುಶಿಕ್ಷಕರ ವರ್ಗಾವಣೆ ನಿಯಮ ಬದಲಾವಣೆ – ಕರಡು ಅಧಿಸೂಚನೆ ಹೊರಡಿಸಿದ ಸರ್ಕಾರಬೊಗಸೆಗೆ ದಕ್ಕಿದ್ದು-100 : “ಸತ್ಯ ಮುಖ್ಯವಲ್ಲ; ಗೆಲುವು ಮಾತ್ರ!”ಊರ ಬಯಲಿನ ನಡುವೆ – 1 : ಕಾಲ ಓಡುತ್ತಿದೆ ಎನ್ನುತ್ತಿದ್ದೇವೆ! ಆದರೆ….?SC/ST ಮೀಸಲಾತಿ ಹೋರಾಟ, ಸುಪ್ರೀಂ ಕೋರ್ಟ್‌ನಲ್ಲಿ ಗೆಲುವಿನ ವಿಶ್ವಾಸ –  ಡಿ.ಕೆ ಶಿವಕುಮಾರ್ನವೆಂಬರ್ 15ರಂದು KPSC ಪೂರ್ವಭಾವಿ ಪರೀಕ್ಷೆ: ಚುನಾವಣಾ ಮಾದರಿ ಭದ್ರತೆ – CM ಸೂಚನೆSSLC, PUC ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಗುಡ್‌ ನ್ಯೂಸ್‌ –  ನೋಂದಣಿ ದಿನಾಂಕ ವಿಸ್ತರಣೆಅಡುಗೆ ಎಣ್ಣೆ ಮರುಬಳಕೆ ಪತ್ತೆಗೆ, ಆರೋಗ್ಯ ಇಲಾಖೆ ಮಾಸ್ಟರ್‌ ಪ್ಲಾನ್‌ – ಯು.ಟಿ. ಖಾದರ್

ಋತುಬಂಧದ ಮಹಿಳೆಯರ ಆರೋಗ್ಯ ರಕ್ಷಣೆಗೆ ‘ಋತುತಾರೆ’ ಯೋಜನೆ ಜಾರಿ; ನಟಿ, ಮಾಜಿ ಸಂಸದೆ ರಮ್ಯಾ ರಾಯಭಾರಿ

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ಋತುಬಂಧದ ಮಹಿಳೆಯರ ಆರೋಗ್ಯ ರಕ್ಷಣೆಗೆ ‘ಋತುತಾರೆ’ ಯೋಜನೆ ಜಾರಿ; ನಟಿ, ಮಾಜಿ ಸಂಸದೆ ರಮ್ಯಾ ರಾಯಭಾರಿ

ದಕ್ಷಿಣ ಕನ್ನಡ: ಋತುಬಂಧದ ಸಂದರ್ಭದಲ್ಲಿ ಮಹಿಳೆಯರು ಎದುರಿಸುವ ದೈಹಿಕ ಸಮಸ್ಯೆಗಳು ಹಾಗೂ ಮಾನಸಿಕ ಒತ್ತಡವನ್ನು ಗುರುತಿಸಿ ಸೂಕ್ತ ವೈದ್ಯಕೀಯ ನೆರವು ಒದಗಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ರೂಪಿಸಿರುವ ‘ಋತುತಾರೆ’ ಯೋಜನೆಯನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೊಳಿಸಲು ಆದೇಶ ಹೊರಡಿಸಲಾಗಿದೆ.

ಮಹಿಳೆಯರ ಮಧ್ಯವಯಸ್ಸಿನ ಆರೋಗ್ಯ ಸಮಸ್ಯೆಗಳಿಗೆ ಸಕಾಲದಲ್ಲಿ ಚಿಕಿತ್ಸೆ, ವೈದ್ಯಕೀಯ ಸಲಹೆ ಮತ್ತು ಮಾನಸಿಕ ಆರೋಗ್ಯದ ಸಮಾಲೋಚನೆ ಒದಗಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಮೊದಲ ಹಂತದಲ್ಲಿ ಮೂರು ತಿಂಗಳ ಕಾಲ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೋಜನೆ ಅನುಷ್ಠಾನಗೊಳ್ಳಲಿದ್ದು, ನಂತರ ರಾಜ್ಯಾದ್ಯಂತ ವಿಸ್ತರಿಸಲು ಆರೋಗ್ಯ ಇಲಾಖೆ ಉದ್ದೇಶಿಸಿದೆ.

ಯೋಜನೆಯ ಅನುಷ್ಠಾನಕ್ಕಾಗಿ ಜಿಲ್ಲೆಯ ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಹಾಗೂ ಜಿಲ್ಲಾ ಆಸ್ಪತ್ರೆಗಳು, ಆಯುಷ್ಮಾನ್ ಆರೋಗ್ಯ ಮಂದಿರಗಳು ಮತ್ತು ಗುರುತಿಸಲಾದ ವೈದ್ಯಕೀಯ ಕಾಲೇಜುಗಳಲ್ಲಿ ಲಭ್ಯವಿರುವ ಆರೋಗ್ಯ ಸೌಲಭ್ಯಗಳ ಸಮಗ್ರ ಮಾಹಿತಿ ಸಂಗ್ರಹಿಸಿ ನಕ್ಷೆ ಸಿದ್ಧಪಡಿಸುವಂತೆ ಸೂಚಿಸಲಾಗಿದೆ.

35 ವರ್ಷ ಮೇಲ್ಪಟ್ಟ ಅರ್ಹ ಮಹಿಳೆಯರನ್ನು ಗುರುತಿಸುವ ಜವಾಬ್ದಾರಿಯನ್ನು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯಾಧಿಕಾರಿಗಳಿಗೆ ವಹಿಸಲಾಗಿದೆ. ಮಹಿಳೆಯರಿಗೆ ಸ್ಥಳೀಯವಾಗಿಯೇ ಆರೋಗ್ಯ ಸೇವೆ ದೊರೆಯುವಂತೆ ವಿಶೇಷ ಚಿಕಿತ್ಸಾ ಶಿಬಿರಗಳನ್ನು ಆಯೋಜಿಸಲು ಕ್ರಮ ಕೈಗೊಳ್ಳಲಾಗುತ್ತಿದೆ.

ಪ್ರಾಥಮಿಕ ಆರೋಗ್ಯ ಕೇಂದ್ರಗಳು, ತಾಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ಪ್ರತಿ ಬುಧವಾರ ವಿಶೇಷ ಚಿಕಿತ್ಸಾ ಶಿಬಿರಗಳನ್ನು ನಡೆಸಲಾಗುತ್ತದೆ. ವೈದ್ಯಕೀಯ ಕಾಲೇಜುಗಳಲ್ಲಿ ಪ್ರತಿ ಶನಿವಾರ ಶಿಬಿರ ಆಯೋಜಿಸಲು ಸೂಚಿಸಲಾಗಿದೆ. ಅರ್ಹ ಮಹಿಳೆಯರಿಗೆ ಮಧ್ಯವಯಸ್ಕ ಆರೋಗ್ಯ ಕಾರ್ಡ್ ವಿತರಿಸಿ, ಆರೋಗ್ಯ ತಪಾಸಣೆ, ವೈದ್ಯಕೀಯ ಮೌಲ್ಯಮಾಪನ, ಸಮಾಲೋಚನೆ ಹಾಗೂ ಅಗತ್ಯ ಚಿಕಿತ್ಸೆಯನ್ನು ಒದಗಿಸಲಾಗುತ್ತದೆ.

ನಟಿ ರಮ್ಯಾ ಯೋಜನೆಯ ರಾಯಭಾರಿ
ಮಹಿಳೆಯರ ಆರೋಗ್ಯದ ಕುರಿತು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ನಟಿ ರಮ್ಯಾ ಅವರನ್ನು ‘ಋತುತಾರೆ’ ಯೋಜನೆಯ ರಾಯಭಾರಿಯಾಗಿ ನೇಮಿಸಲಾಗಿದೆ. ಋತುಬಂಧದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ದೈಹಿಕ ಬದಲಾವಣೆಗಳು ಹಾಗೂ ಮಾನಸಿಕ ಒತ್ತಡದ ಕುರಿತು ಮಹಿಳೆಯರಲ್ಲಿ ಅರಿವು ಮೂಡಿಸುವುದು ಅಭಿಯಾನದ ಉದ್ದೇಶವಾಗಿದೆ.

ಋತುಬಂಧವು ಮಹಿಳೆಯರ ಜೀವನದ ಸಹಜ ಹಂತವಾಗಿದ್ದರೂ ಈ ಅವಧಿಯಲ್ಲಿ ಎದುರಾಗುವ ಆರೋಗ್ಯ ಸಮಸ್ಯೆಗಳಿಗೆ ಸೂಕ್ತ ಚಿಕಿತ್ಸೆ ಪಡೆಯುವ ಕುರಿತು ಇನ್ನಷ್ಟು ಜಾಗೃತಿ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಮಹಿಳೆಯರ ಆರೋಗ್ಯ ತಪಾಸಣೆ ಮತ್ತು ಚಿಕಿತ್ಸೆಗೆ ವ್ಯವಸ್ಥಿತ ವೇದಿಕೆ ಕಲ್ಪಿಸುವ ‘ಋತುತಾರೆ’ ಯೋಜನೆ ಮಹತ್ವ ಪಡೆದುಕೊಂಡಿದೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು