ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪಾಯಕಾರಿ ದೆಹಲಿ ಗಾಳಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ – ಸುಪ್ರೀಂ ಕೋರ್ಟ್ ಕಡಕ್ ಸೂಚನೆಕರ್ರೆಗುಟ್ಟಾ ಬೆಟ್ಟದಲ್ಲಿ ಸ್ಫೋಟಕ ಪತ್ತೆ: 711 BGL ಶೆಲ್‌ಗಳು ವಶಕ್ಕೆಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣಸ್ಟಿಂಗ್ ಆಪರೇಷನ್ ನಲ್ಲಿ ಕುಮಾರಸ್ವಾಮಿ‌‌ ಪ್ರಯತ್ನ ಸಂಪೂರ್ಣ ವಿಫಲ – ಶಿವರಾಜ್ ಎಸ್. ತಂಗಡಗಿಕರ್ನಾಟಕದ ಪೆಟ್ರೋಲ್‌ನಲ್ಲಿ 31.2% ಎಥೆನಾಲ್! ವಾಹನ ಸವಾರರಿಗೆ ಆತಂಕ; E20 ಪ್ರಚಾರದ ಜಾಹೀರಾತುಗಳ ಹಿಂದಿನ ಹುನ್ನಾರವೇನು?ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಿಗೆ ಬೆಂಕಿ: ಪ್ರಯಾಣಿಕರು ಸುರಕ್ಷಿತ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೀಸರ್ ವಿರುದ್ಧ ಆಕ್ರೋಶ: ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ, ಸಿನೆಮಾ ಬಿಡುಗಡೆ ಮಾಡದಂತೆ ಒತ್ತಾಯಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ 20,000 ಕೋಟಿ ರೂ –  ಈಶ್ವರ ಖಂಡ್ರೆಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಪತ್ರಗಳ ಬಳಕೆ – ಸಚಿವ ಈಶ್ವರ ಖಂಡ್ರೆKSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆಅಪರಾಧಗಳ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್‌ಗೆ ಕಂಪನಿಗಳೇ ಹೊಣೆ!ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ಪತ್ತೆ‘ಕನ್ನಡಿಗರಿಗೆ ಉದ್ಯೋಗ ಕೊಡಿ, ಕಂಪನಿಗಳಿಗೆ ಕಿರುಕುಳ ಕೊಡಬೇಡಿ’: ಸರಕಾರದ ಇಬ್ಬಗೆ ನೀತಿ & ಅಸಲಿ ಪರಿಹಾರ

ತಾಲ್ಲೂಕು ಆಸ್ಪತ್ರೆಗಳಲ್ಲಿ ಪಾರ್ಶ್ವವಾಯು, ಹೃದಯಾಘಾತಕ್ಕೆ ಉಚಿತ ಇಂಜೆಕ್ಷನ್: ದಿನೇಶ್‌ ಗುಂಡೂರಾವ್‌

PPeepal Media Desk

Peepal Media Desk ರಾಜ್ಯ

• 1 ನಿಮಿಷದ ಓದು

ತಾಲ್ಲೂಕು ಆಸ್ಪತ್ರೆಗಳಲ್ಲಿ ಪಾರ್ಶ್ವವಾಯು, ಹೃದಯಾಘಾತಕ್ಕೆ ಉಚಿತ ಇಂಜೆಕ್ಷನ್: ದಿನೇಶ್‌ ಗುಂಡೂರಾವ್‌

ಬೆಂಗಳೂರು: ಇನ್ನು ಮುಂದೆ ಹೃದಾಯಾಘಾತ ಮತ್ತು ಸ್ಟ್ರೋಕ್‌ ಸಂದರ್ಭಗಳಲ್ಲಿ ಬೇಕಾಗುವ ದುಬಾರಿ ಬೆಲೆಯ ಚುಚ್ಚುಮದ್ದುಗಳು ಸರ್ಕಾರಿ ಆಸ್ಪತ್ರಗಳಲ್ಲೇ ದೊರೆಯಲಿವೆ. ಸ್ಟ್ರೋಕ್‌ ಆದ ಸಂದರ್ಭದಲ್ಲಿ ಬಹು ಅಂಗಾಂಗ ವೈಫಲ್ಯ, ಸಾವು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೃದಯಾಘಾತಕ್ಕೆ ಒಳಗಾದವರಿಗೆ 90 ನಿಮಿಷದಲ್ಲಿ ಚಿಕಿತ್ಸೆ ದೊರೆಯದಿದ್ದರೆ ಅವರು ಸಾವಿಗೀಡಾಗುವ ಸಂಭವ ಇರುತ್ತದೆ. ಹೀಗಾಗಿ ಪಾರ್ಶ್ವವಾಯು ನಿರ್ವಹಣೆಗೆ ಅಗತ್ಯವಿರುವ 60 ಸಾವಿರ ರೂ. ದರದ ಆರ್​ಟಿ ಪ್ಲಸ್ ಚುಚ್ಚುಮದ್ದು, ಹೃದಯಾಘಾತ ನಿರ್ವಹಣೆಗೆ 40 ಸಾವಿರ ರೂ. ಬೆಲೆಯ ಟೆನೆಕ್ಟ್ ಪ್ಲಸ್ ಚುಚ್ಚುಮದ್ದುಗಳು ತಾಲ್ಲೂಕು ಆಸ್ಪತ್ರೆಗಳಿಗೆ ಶೀಘ್ರವೇ ಪೂರೈಕೆಯಾಗಲಿವೆ.

ಇಲ್ಲಿಯವರೆಗೆ ಈ ಚುಚ್ಚುಮದ್ದುಗಳು ಸರ್ಕಾರಿ ವ್ಯವಸ್ಥೆಯಡಿ ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಮತ್ತು ಜಯದೇವ ಹೃದ್ರೋಗ ಸಂಸ್ಥೆ ಹೊರತುಪಡಿಸಿ ಇತರ ಸರ್ಕಾರಿ ಆಸ್ಪತ್ರೆಗಳಲ್ಲಿ ದೊರೆಯುತ್ತಿರಲಿಲ್ಲ.ಈ ಕಾರಣದಿಂದಾಗಿ ತುರ್ತು ಸಂದರ್ಭದಲ್ಲಿ ಈ ಚುಚ್ಚುಮದ್ದುಗಳಿಗೆ ಖಾಸಗಿ ಆಸ್ಪತ್ರೆಗಳನ್ನೇ ಅವಲಂಬಿಸಬೇಕಿತ್ತು.

ಪಾರ್ಶ್ವವಾಯು, ಹೃದಯಾಘಾತವಾದಾಗ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ದೊರೆತರೆ ಸಿಕ್ಕರೆ ವ್ಯಕ್ತಿ ಗುಣಮುಖವಾಗಲು ಸಾಧ್ಯ. ಸರ್ಕಾರಿ ಆಸ್ಪತ್ರೆಗಳಲ್ಲಿ ನಿಗದಿತ ಚುಚ್ಚುಮದ್ದುಗಳನ್ನು ಉಚಿತವಾಗಿ ಒದಗಿಸಲು ಕ್ರಮ ವಹಿಸಲಾಗಿದ್ದು, ಇನ್ನೊಂದು ತಿಂಗಳಲ್ಲಿ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ಸಚಿವ ದಿನೇಶ ಗುಂಡೂರಾವ್‌ ಅವರು ತಿಳಿಸಿದ್ದಾರೆ.

ಈ ಉದ್ದೇಶಕ್ಕಾಗಿ 3.80 ಕೋಟಿ ರೂಪಾಯಿಗಳ ಅನುಮೋದನೆ ದೊರೆತಿದೆ. ಸಾಂಕ್ರಾಮಿಕವಲ್ಲದ ರೋಗಗಳ ತಡೆ ಮತ್ತು ನಿಯಂತ್ರಣ ಕಾರ್ಯಕ್ರಮದಡಿ ಇಲಾಖೆಯು ಈ ಯೋಜನೆಗೆ ಹಣವನ್ನು ಒದಗಿಸಲಿದೆ.

ಸದರಿ ಯೋಜನೆಯಡಲಿ ಸ್ಟ್ರೋಕ್‌ ಮತ್ತು ಹಾರ್ಟ್‌ ಅಟ್ಯಾಕ್‌ ಕಾಯಿಲೆಗಳಿಗೆ ಪ್ರಾಮುಖ್ಯತೆ ನೀಡಲಾಗಿದ್ದು, ಈ ಯೋಜನೆಯಡಿ ಎಪಿಎಲ್‌, ಬಿಪಿಎಲ್‌ ಬೇಧವಿಲ್ಲದೆ ಎಲ್ಲರಿಗೂ ಉಪಚಾರ ಸಿಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PPeepal Media Desk

Peepal Media Desk

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು