ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಅಪಾಯಕಾರಿ ದೆಹಲಿ ಗಾಳಿ ವಾಯು ಮಾಲಿನ್ಯ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಕ್ಕೆ – ಸುಪ್ರೀಂ ಕೋರ್ಟ್ ಕಡಕ್ ಸೂಚನೆಕರ್ರೆಗುಟ್ಟಾ ಬೆಟ್ಟದಲ್ಲಿ ಸ್ಫೋಟಕ ಪತ್ತೆ: 711 BGL ಶೆಲ್‌ಗಳು ವಶಕ್ಕೆಸ್ಟಿಂಗ್ ಕೇಂದ್ರಿತ ರಾಜಕಾರಣದ ಹಿಂದಿರುವ ಸಂಚು ವಂಚನೆಗಳ ಅನಾವರಣಸ್ಟಿಂಗ್ ಆಪರೇಷನ್ ನಲ್ಲಿ ಕುಮಾರಸ್ವಾಮಿ‌‌ ಪ್ರಯತ್ನ ಸಂಪೂರ್ಣ ವಿಫಲ – ಶಿವರಾಜ್ ಎಸ್. ತಂಗಡಗಿಕರ್ನಾಟಕದ ಪೆಟ್ರೋಲ್‌ನಲ್ಲಿ 31.2% ಎಥೆನಾಲ್! ವಾಹನ ಸವಾರರಿಗೆ ಆತಂಕ; E20 ಪ್ರಚಾರದ ಜಾಹೀರಾತುಗಳ ಹಿಂದಿನ ಹುನ್ನಾರವೇನು?ಬಯಲು ಸಂತೆಯ ಮೌನ – 3 : ಮೂರು ದಾರಿಯ ಖತ್ರಿಕರ್ಮಭೂಮಿ ಎಕ್ಸ್‌ಪ್ರೆಸ್ ರೈಲಿಗೆ ಬೆಂಕಿ: 4 ಬೋಗಿಗಳಿಗೆ ಹಾನಿ, ಪ್ರಯಾಣಿಕರು ಸುರಕ್ಷಿತಪಂಜಾಬ್‌ನಲ್ಲಿ ಕರ್ಮಭೂಮಿ ಎಕ್ಸ್‌ಪ್ರೆಸ್‌ನ ನಾಲ್ಕು ಬೋಗಿಗಳಿಗೆ ಬೆಂಕಿ: ಪ್ರಯಾಣಿಕರು ಸುರಕ್ಷಿತ‘ಸಂಗೀತ ಬಾರ್ ಅಂಡ್ ರೆಸ್ಟೋರೆಂಟ್’ ಟೀಸರ್ ವಿರುದ್ಧ ಆಕ್ರೋಶ: ಕೋಮು ಸಾಮರಸ್ಯಕ್ಕೆ ಧಕ್ಕೆ ಆರೋಪ, ಸಿನೆಮಾ ಬಿಡುಗಡೆ ಮಾಡದಂತೆ ಒತ್ತಾಯಗೃಹಲಕ್ಷ್ಮೀ ಫಲಾನುಭವಿಗಳ ಜೊತೆ ಡಿಕೆಶಿ ಸಂವಾದ – ಯೋಜನೆ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲರಾಜ್ಯದ ರಸ್ತೆ ಮೂಲಸೌಕರ್ಯ ಅಭಿವೃದ್ಧಿಗಾಗಿ 20,000 ಕೋಟಿ ರೂ –  ಈಶ್ವರ ಖಂಡ್ರೆಮೋದಿಯವರಿಗಿಂತ ಚೆನ್ನಾಗಿ ಇಂಗ್ಲೀಷ್ ಮಾತನಾಡಬಲ್ಲೆ – ಪ್ರಿಯಾಂಕ್ ಖರ್ಗೆಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗಳಿಗೆ ಮತಪತ್ರಗಳ ಬಳಕೆ – ಸಚಿವ ಈಶ್ವರ ಖಂಡ್ರೆKSRTC ಬಸ್ ಪಾಸ್ ದರವೂ ಭಾರಿ ಏರಿಕೆ – ಶೇಕಡಾ 23 ರಷ್ಟು ಏರಿಕೆಅಪರಾಧಗಳ ರಾಜಧಾನಿಯಾಗುತ್ತಿದೆಯೇ ಬೆಂಗಳೂರು?ಫೇಸ್‌ಬುಕ್, ಇನ್‌ಸ್ಟಾಗ್ರಾಂ, ಯೂಟ್ಯೂಬ್‌ಗೆ ಇನ್ನು ಕಾನೂನು ರಕ್ಷಣೆ ಇಲ್ಲವೇ? ನಿಮ್ಮ ಒಂದು ಪೋಸ್ಟ್‌ಗೆ ಕಂಪನಿಗಳೇ ಹೊಣೆ!ಕುವೆಂಪು ಚಿಂತನೆಗಳು ಇಂದು: ವಿಷಯ ಮಂಡನೆ ಮತ್ತು ಸಂವಾದಹಿರಿಯ ಸಾಹಿತಿ, ಭಾಷಾಶಾಸ್ತ್ರಜ್ಞ ಪ್ರೊ. ಕೆ.ವಿ. ನಾರಾಯಣ ಇನ್ನಿಲ್ಲಒಂದೇ ಕುಟುಂಬದ ಏಳು ಮಂದಿಯ ಹತ್ಯೆ ಪ್ರಕರಣ: ನಂದಿಬೆಟ್ಟದ ತಪ್ಪಲಿನಲ್ಲಿ ಬಾಲಕನ ಮೃತದೇಹ ಪತ್ತೆ‘ಕನ್ನಡಿಗರಿಗೆ ಉದ್ಯೋಗ ಕೊಡಿ, ಕಂಪನಿಗಳಿಗೆ ಕಿರುಕುಳ ಕೊಡಬೇಡಿ’: ಸರಕಾರದ ಇಬ್ಬಗೆ ನೀತಿ & ಅಸಲಿ ಪರಿಹಾರ

ಕೃಷ್ಣಾ ನ್ಯಾಯಾಧೀಕರಣ:  ಗೆಜೆಟ್  ಅಧಿಸೂಚನೆ ಹೊರಡಿಸಲು ಸಭೆಯಲ್ಲಿ ಒತ್ತಾಯಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ

PPeepal Media Desk

Peepal Media Desk ಮೀಡಿಯಾ, ರಾಜಕೀಯ, ರಾಜ್ಯ

• 1 ನಿಮಿಷದ ಓದು

ಕೃಷ್ಣಾ ನ್ಯಾಯಾಧೀಕರಣ:  ಗೆಜೆಟ್  ಅಧಿಸೂಚನೆ ಹೊರಡಿಸಲು ಸಭೆಯಲ್ಲಿ ಒತ್ತಾಯಿಸಲಾಗುವುದು : ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಮೇ 5:  ಕೇಂದ್ರದ ಜಲಶಕ್ತಿ ಸಚಿವರು ಮೇ 7 ರಂದು ಕೃಷ್ಣಾ ಕಣಿವೆಯ  ಸಭೆಯನ್ನು ಕರೆದಿದ್ದು, ಸಭೆಯಲ್ಲಿ ಕೂಡಲೇ ಅಧಿಸೂಚನೆ ಹೊರಡಿಸಲು ಒತ್ತಾಯಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಅವರು ಇಂದು ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು.
ಸಭೆಗೆ ಪೂರಕವಾಗಿ ಉಪಮುಖ್ಯಮಂತ್ರಿಗಳು ಹಾಗೂ ಜಲಸಂಪನ್ಮೂಲ ಸಚಿವ  ಡಿ.ಕೆ. ಶಿವಕುಮಾರ್ ಸೇರಿದಂತೆ ಸಚಿವರು, ಕಾನೂನು ತಜ್ಞರು ಹಾಗೂ ಅಧಿಕಾರಿಗಳೊಂದಿಗೆ ಇಂದು ಸಭೆ ನಡೆಸಲಾಯಿತು. ಸಭೆಯಲ್ಲಿ  ರಾಜ್ಯದ  ನಿಲುವು ಏನಿರಬೇಕೆಂದು ಚರ್ಚಿಸಲಾಗಿದೆ ಎಂದರು.

ಕೃಷ್ಣಾ ಜಲವಿವಾದ ನ್ಯಾಯಮಂಡಳಿ -2  ದಿನಾಂಕ 30-12- 2010 ರಲ್ಲಿ  ತೀರ್ಪು ನೀಡಿದ ನಂತರ  2013 ರಲ್ಲಿ ಅಧಿಸೂಚನೆ  ಹೊರಡಿಸಲಾಗಿತ್ತು.  ತದನಂತರ ಈವರೆಗೆ ಕೇಂದ್ರ ಸರ್ಕಾರ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ನಾನು ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೇಂದ್ರದ ನೀರಾವರಿ ಸಚಿವರನ್ನು ಭೇಟಿ ಮಾಡಿ ಒತ್ತಾಯಿಸಿದ ನಂತರ ಸಭೆಯನ್ನು ಕರೆಯಲಾಗಿದೆ.

ಎರಡನೇ ನ್ಯಾಯಾಧಿಕರಣದ ಆದೇಶದಲ್ಲಿ 173 ಟಿ.ಎಂ.ಸಿ ನೀರನ್ನು ಬಳಸಿಕೊಳ್ಳಲು ಸೂಚಿಸಿದೆ. 519 ಮೀಟರ್ ಗಳಿಂದ 524 ಮೀಟರ್ ಗಳಿಗೆ ಅಣೆಕಟ್ಟಿನ ಎತ್ತರವನ್ನು  ಹೆಚ್ಚಿಸಿದರೆ ಕರ್ನಾಟಕಕ್ಕೆ ಹಂಚಿಕೆ ಮಾಡಿರುವ ನೀರನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಅದಕ್ಕಾಗಿ ಗೆಜೆಟ್ ಅಧಿಸೂಚನೆ ಹೊರಡಿಸಬೇಕು. ಸಭೆಯಲ್ಲಿಯೂ ಈ ಬಗ್ಗೆ ಒತ್ತಾಯಿಸಲಾಗುವುದು ಎಂದ ಮುಖ್ಯಮಂತ್ರಿಗಳು ತೆಲಂಗಾಣ  ಮತ್ತು ಆಂಧ್ರ ಪ್ರದೇಶ ಕೂಡ ಅರ್ಜಿ ಹಾಕಿಕೊಂಡಿದೆ. ಅವರು ತಮ್ಮ ಪಾಲಿಗೆ ಹಂಚಿಕೆಯಾಗಿರುವದನ್ನು ಬಳಸಿಕೊಳ್ಳಲಿ . ಈ ಬಗ್ಗೆ ನಾವು ಒತ್ತಾಯ ಮಾಡಿದ್ದು, ಸರ್ವೋಚ್ಛ ನ್ಯಾಯಾಲಯದಿಂದ ಯಾವುದೇ ಮಧ್ಯಂತರ ಆದೇಶ ಹೊರಡಿಸದ ಕಾರಣ 524 ಮೀಟರ್‌ಗಳಿಗೆ ಹೆಚ್ಚಿಸುವ ಕೆಲಸವನ್ನು ಮಾಡುತ್ತೇವೆ ಎಂದರು.

PPeepal Media Desk

Peepal Media Desk

Peepal Media · ಮೀಡಿಯಾ ವಿಭಾಗ

ಸಂಬಂಧಿತ ಸುದ್ದಿಗಳು