ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಚುನಾವಣಾ ನೀತಿ ಸಂಹಿತೆ: ಮರುನೇಮಕಗೊಂಡ ನಿವೃತ್ತ ಸರ್ಕಾರಿ ಅಧಿಕಾರಿಗಳಿಗೂ ರಾಜಕೀಯ ಚಟುವಟಿಕೆ ನಿಷೇಧ; ಚುನಾವಣಾ ಆಯೋಗದ ಸೂಚನೆಕರ್ನಾಟಕದ 64 ಕ್ಷೇತ್ರಗಳಲ್ಲಿ 8.80 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರ ಹೆಸರು ಅಳಿಸಲಾಗಿದೆ: ಮುಸ್ಲಿಂ ಒಕ್ಕೂಟ ಆರೋಪಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಪ್ರಕರಣ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೇಜಸ್ವಿ ಸೂರ್ಯ ತಿರುಗೇಟು; ಮೂರು ದಿನಗಳಲ್ಲಿ ಸಾಕ್ಷ್ಯ ನೀಡುವಂತೆ ಸವಾಲುಭಾವಪುಂಜ – 3 : ಅಡುಗೆಮನೆ ಅಂದು ಇಂದುಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ವಿಜಯನಗರ ನಿಲ್ದಾಣದಲ್ಲಿ ಹಳಿಗೆ ಹಾರಿದ ಪ್ರಯಾಣಿಕನಾಟಕಕ್ಕೂ ಬೇಕಾ ಪೋಲೀಸ್ ಕಣ್ಗಾವಲು?ರಾಮಾಯಣ ಮತ್ತು ಕರುನಾಡಿನ ಭೌಗೋಳಿಕ ನಂಟುಕಲಬುರಗಿ ಸಮೀಪ ಶರಣರ ವಚನ ಪರಂಪರೆಗೆ ಹೊಸ ಸ್ಪರ್ಶ; ವಚನ ಮಂಟಪ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಿಂತನೆರಾಜ್ಯ ಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ: 35 ತಹಶೀಲ್ದಾರ್‌ಗಳಿಗೆ ಹೊಸ ಜವಾಬ್ದಾರಿಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಶಿರಾಡಿಘಾಟ್ ಕಂದಕದಲ್ಲಿ – ಬೆಚ್ಚಿ ಬೀಳಿಸುವ ಸಂಗತಿE20 ಪೆಟ್ರೋಲ್ ವಿವಾದಕ್ಕೆ ಮತ್ತೊಂದು ತಿರುವು: 20% ಎಥನಾಲ್ ಎಂದ BPCL ಪೋಸ್ಟ್‌ನಲ್ಲಿ ಕಂಡಿದ್ದು 33%; ತಕ್ಷಣವೇ ಟ್ವಿಟ್ ಡಿಲೀಟ್ಟರ್ಕಿಯ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಕಾರ್ಮಿಕರು ಸಾವು, ಹಲವರಿಗೆ ಗಾಯಐಫೋನ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ದುರಂತ; ವಿಷಕಾರಿ ಅನಿಲ ಸೇವಿಸಿ ಮೂವರು ಕಾರ್ಮಿಕರು ಸಾವು!ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯದೀಪಾವಳಿ ಪಟಾಕಿ ಹಾವಳಿ; ದೆಹಲಿ ವಾಯುಮಾಲಿನ್ಯದ ನಂತರ ಬೆಂಗಳೂರಿನ ಗಾಳಿ ಕಲುಷಿತ!ಮಾಲಿನ್ಯದಲ್ಲಿ ಶೇ.25ರಷ್ಟು ಏರಿಕೆLPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆಐದು ದಶಕಗಳ ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ; ಪುಸ್ತಕ ಮಳಿಗೆಗಳಲ್ಲಿ ಓದುಗರ ಆಸಕ್ತಿ!ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ – ಹೈಕೋರ್ಟ್ ಗರಂಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರ ಕೈವಾಡ – ಪ್ರಿಯಾಂಕ್ ಖರ್ಗೆಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕುಮಾರಸ್ವಾಮಿಯವರಿಗೆ ಶೋಭೆಯಲ್ಲ: ಕೆ. ಎಂ. ಶಿವಲಿಂಗೇಗೌಡ

ಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ವಿಜಯನಗರ ನಿಲ್ದಾಣದಲ್ಲಿ ಹಳಿಗೆ ಹಾರಿದ ಪ್ರಯಾಣಿಕ

PPeepal Media

Peepal Media ರಾಜ್ಯ

• 1 ನಿಮಿಷದ ಓದು

ಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ವಿಜಯನಗರ ನಿಲ್ದಾಣದಲ್ಲಿ ಹಳಿಗೆ ಹಾರಿದ ಪ್ರಯಾಣಿಕ

ಬೆಂಗಳೂರು: ವಿಜಯನಗರ ಮೆಟ್ರೋ ನಿಲ್ದಾಣದಲ್ಲಿ ಸೋಮವಾರ ಮಧ್ಯಾಹ್ನ ಪ್ರಯಾಣಿಕರೊಬ್ಬರು ರೈಲು ಹಳಿ ಮೇಲೆ ಹಾರಿದ ಪರಿಣಾಮ ನೇರಳೆ ಮಾರ್ಗದ ಮೆಟ್ರೋ ಸಂಚಾರದಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಯಿತು. ಮಧ್ಯಾಹ್ನ 1.31ರ ಸುಮಾರಿಗೆ ರೈಲು ನಿಲ್ದಾಣಕ್ಕೆ ಆಗಮಿಸುತ್ತಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್‌ಸಿಎಲ್) ತಿಳಿಸಿದೆ.

ಘಟನೆ ನಡೆದ ತಕ್ಷಣ ನಿಲ್ದಾಣದ ಅಧಿಕಾರಿಗಳು ತುರ್ತು ಸುರಕ್ಷತಾ ಕ್ರಮಗಳನ್ನು ಕೈಗೊಂಡು ಪ್ರಯಾಣಿಕರನ್ನು ರಕ್ಷಿಸಿದ್ದಾರೆ. ಬಳಿಕ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.

ರಕ್ಷಣಾ ಕಾರ್ಯಾಚರಣೆ ಮತ್ತು ಸುರಕ್ಷತಾ ಕ್ರಮಗಳು ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಪ್ರಯಾಣಿಕರಿಗೆ ಉಂಟಾಗುವ ತೊಂದರೆ ಕಡಿಮೆ ಮಾಡಲು ನೇರಳೆ ಮಾರ್ಗದಲ್ಲಿ ಎರಡು ವಿಭಾಗಗಳಲ್ಲಿ ಮಾತ್ರ ಮೆಟ್ರೋ ರೈಲು ಸಂಚಾರ ಮುಂದುವರಿಸಲಾಯಿತು.

ಕೆಂಪೇಗೌಡ ಮೆಟ್ರೋ ನಿಲ್ದಾಣ (ಮೆಜೆಸ್ಟಿಕ್) ಮತ್ತು ವೈಟ್‌ಫೀಲ್ಡ್ (ಕಾಡುಗೋಡಿ) ನಡುವೆ ಒಂದು ವಿಭಾಗದಲ್ಲಿ ಹಾಗೂ ಮೈಸೂರು ರಸ್ತೆ ಮತ್ತು ಚಲ್ಲಘಟ್ಟ ನಡುವೆ ಮತ್ತೊಂದು ವಿಭಾಗದಲ್ಲಿ ರೈಲುಗಳು ಸಂಚರಿಸಿದವು.

ಮಧ್ಯಾಹ್ನ 1.58ರಿಂದ ನೇರಳೆ ಮಾರ್ಗದಲ್ಲಿ ಮೆಟ್ರೋ ರೈಲು ಸಂಚಾರ ಸಹಜ ಸ್ಥಿತಿಗೆ ಮರಳಿತು. ಹಸಿರು ಮತ್ತು ಹಳದಿ ಮಾರ್ಗಗಳ ಮೆಟ್ರೋ ಸೇವೆಗಳಿಗೆ ಯಾವುದೇ ವ್ಯತ್ಯಯ ಉಂಟಾಗಿಲ್ಲ ಎಂದು ಬಿಎಂಆರ್‌ಸಿಎಲ್ ತನ್ನ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದೆ.

ಸಂಚಾರದಲ್ಲಿ ಉಂಟಾದ ತಾತ್ಕಾಲಿಕ ವ್ಯತ್ಯಯದಿಂದ ಪ್ರಯಾಣಿಕರಿಗೆ ಆದ ಅನಾನುಕೂಲಕ್ಕೆ ಬಿಎಂಆರ್‌ಸಿಎಲ್ ವಿಷಾದ ವ್ಯಕ್ತಪಡಿಸಿದೆ. ತುರ್ತು ಕಾರ್ಯಾಚರಣೆಯ ಸಂದರ್ಭದಲ್ಲಿ ಸಹಕಾರ ನೀಡಿದ ಪ್ರಯಾಣಿಕರಿಗೆ ಧನ್ಯವಾದ ತಿಳಿಸಿದೆ.

PPeepal Media

Peepal Media

Peepal Media · ರಾಜ್ಯ ವಿಭಾಗ

ಸಂಬಂಧಿತ ಸುದ್ದಿಗಳು