ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕರ್ನಾಟಕದ 64 ಕ್ಷೇತ್ರಗಳಲ್ಲಿ 8.80 ಲಕ್ಷಕ್ಕೂ ಹೆಚ್ಚು ಮುಸ್ಲಿಂ ಮತದಾರರ ಹೆಸರು ಅಳಿಸಲಾಗಿದೆ: ಮುಸ್ಲಿಂ ಒಕ್ಕೂಟ ಆರೋಪಗೌರಿ ಲಂಕೇಶ್, ಕಲಬುರ್ಗಿ ಹತ್ಯೆ ಪ್ರಕರಣ: ಪ್ರಿಯಾಂಕ್ ಖರ್ಗೆ ಹೇಳಿಕೆಗೆ ತೇಜಸ್ವಿ ಸೂರ್ಯ ತಿರುಗೇಟು; ಮೂರು ದಿನಗಳಲ್ಲಿ ಸಾಕ್ಷ್ಯ ನೀಡುವಂತೆ ಸವಾಲುಭಾವಪುಂಜ – 3 : ಅಡುಗೆಮನೆ ಅಂದು ಇಂದುಬೆಂಗಳೂರು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ: ವಿಜಯನಗರ ನಿಲ್ದಾಣದಲ್ಲಿ ಹಳಿಗೆ ಹಾರಿದ ಪ್ರಯಾಣಿಕನಾಟಕಕ್ಕೂ ಬೇಕಾ ಪೋಲೀಸ್ ಕಣ್ಗಾವಲು?ರಾಮಾಯಣ ಮತ್ತು ಕರುನಾಡಿನ ಭೌಗೋಳಿಕ ನಂಟುಕಲಬುರಗಿ ಸಮೀಪ ಶರಣರ ವಚನ ಪರಂಪರೆಗೆ ಹೊಸ ಸ್ಪರ್ಶ; ವಚನ ಮಂಟಪ ನಿರ್ಮಾಣಕ್ಕೆ ಸಚಿವ ಪ್ರಿಯಾಂಕ್ ಖರ್ಗೆ ಚಿಂತನೆರಾಜ್ಯ ಕಂದಾಯ ಇಲಾಖೆಯಲ್ಲಿ ಭಾರಿ ವರ್ಗಾವಣೆ: 35 ತಹಶೀಲ್ದಾರ್‌ಗಳಿಗೆ ಹೊಸ ಜವಾಬ್ದಾರಿಏಳು ಮಂದಿಯ ಭೀಕರ ಹತ್ಯೆ ಪ್ರಕರಣ ಶಿರಾಡಿಘಾಟ್ ಕಂದಕದಲ್ಲಿ – ಬೆಚ್ಚಿ ಬೀಳಿಸುವ ಸಂಗತಿE20 ಪೆಟ್ರೋಲ್ ವಿವಾದಕ್ಕೆ ಮತ್ತೊಂದು ತಿರುವು: 20% ಎಥನಾಲ್ ಎಂದ BPCL ಪೋಸ್ಟ್‌ನಲ್ಲಿ ಕಂಡಿದ್ದು 33%; ತಕ್ಷಣವೇ ಟ್ವಿಟ್ ಡಿಲೀಟ್ಟರ್ಕಿಯ ಉಕ್ಕಿನ ಕಾರ್ಖಾನೆಯಲ್ಲಿ ಭೀಕರ ಸ್ಫೋಟ: 16 ಕಾರ್ಮಿಕರು ಸಾವು, ಹಲವರಿಗೆ ಗಾಯಐಫೋನ್ ಬಿಡಿಭಾಗಗಳ ತಯಾರಿಕಾ ಘಟಕದಲ್ಲಿ ದುರಂತ; ವಿಷಕಾರಿ ಅನಿಲ ಸೇವಿಸಿ ಮೂವರು ಕಾರ್ಮಿಕರು ಸಾವು!ಹಾಸನ DC ಹುದ್ದೆಯಲ್ಲಿ ಮುಂದುವರಿಯಲು ₹75 ಲಕ್ಷ ಲಂಚ – ತನಿಖೆಗೆ HDK ಒತ್ತಾಯದೀಪಾವಳಿ ಪಟಾಕಿ ಹಾವಳಿ; ದೆಹಲಿ ವಾಯುಮಾಲಿನ್ಯದ ನಂತರ ಬೆಂಗಳೂರಿನ ಗಾಳಿ ಕಲುಷಿತ!ಮಾಲಿನ್ಯದಲ್ಲಿ ಶೇ.25ರಷ್ಟು ಏರಿಕೆLPG ಕೆ.ಜಿಗೆ 11 ರೂ ಹೆಚ್ಚಳ ಆಟೋ ಚಾಲಕರಿಗೆ – ಗಾಯದ ಮೇಲೆ ಬರೆಐದು ದಶಕಗಳ ಭಾರತದ ಇತಿಹಾಸಕ್ಕೆ ಸಾಕ್ಷಿಯಾದ ಸೋನಿಯಾ ಗಾಂಧಿ ಆತ್ಮಕಥೆ ಬಿಡುಗಡೆ; ಪುಸ್ತಕ ಮಳಿಗೆಗಳಲ್ಲಿ ಓದುಗರ ಆಸಕ್ತಿ!ಅಗತ್ಯ ವಸ್ತುಗಳ ದರ ಏರಿಕೆಗೆ ಸರ್ಕಾರದ ವಿರುದ್ದ – ಹೈಕೋರ್ಟ್ ಗರಂಕಲಬುರ್ಗಿ, ಗೌರಿ ಲಂಕೇಶ್ ಹತ್ಯೆಯ ಹಿಂದೆ ಸಂಘ ಪರಿವಾರ ಕೈವಾಡ – ಪ್ರಿಯಾಂಕ್ ಖರ್ಗೆಎಐ ಯುಗದಲ್ಲಿ ನಕಲಿ ಚಾಟ್ ಸೃಷ್ಟಿಸಿ ಮಾನಹಾನಿ ಮಾಡುವುದು ಕುಮಾರಸ್ವಾಮಿಯವರಿಗೆ ಶೋಭೆಯಲ್ಲ: ಕೆ. ಎಂ. ಶಿವಲಿಂಗೇಗೌಡ44,250 ಸಜೀವ ಗುಂಡುಗಳ ವಶ: ಆರ್‌ಎಸ್‌ಎಸ್‌–ಬಿಜೆಪಿಗೆ 5 ಪ್ರಶ್ನೆಗಳನ್ನು ಮುಂದಿಟ್ಟ ಪ್ರಿಯಾಂಕ್ ಖರ್ಗೆ

ನಾಟಕಕ್ಕೂ ಬೇಕಾ ಪೋಲೀಸ್ ಕಣ್ಗಾವಲು?

PPeepal Media Desk

Peepal Media Desk ಅಂಕಣ

• 3 ನಿಮಿಷದ ಓದು

ನಾಟಕಕ್ಕೂ ಬೇಕಾ ಪೋಲೀಸ್ ಕಣ್ಗಾವಲು?

“..ಇಷ್ಟಕ್ಕೂ ಈ ಪೊಲೀಸಿನವರಿಗೆ ರಂಗಭೂಮಿಯ ಬಗ್ಗೆ ಅದೆಷ್ಟು ತಿಳುವಳಿಕೆ ಇದೆ? ರಂಗಭೂಮಿ ಎನ್ನುವುದೇ ಪ್ರತಿಭಟನಾ ಮಾಧ್ಯಮ. ಪ್ರಭುತ್ವವನ್ನು ಟೀಕಿಸುವ, ವಿಮರ್ಶಿಸುವ ಕೆಲಸವನ್ನು ನಾಟಕಗಳು ಮಾಡುತ್ತವೆ ಹಾಗೂ ಮಾಡಬೇಕು. ಪೊಲೀಸರ ಮಾನದಂಡಗಳು ಪ್ರತಿರೋಧವನ್ನೇ ಹತ್ತಿಕ್ಕುವಂತಿವೆ..” ವಿಮರ್ಶಕ ಶಶಿಕಾಂತ ಯಡಹಳ್ಳಿ ಅವರ ಬರಹದಲ್ಲಿ

‘ಹರಿಯೋ ನೀರಿಗೆ ದೊಣ್ಣೆ ನಾಯಕನ ಅಪ್ಪಣೇನಾ?’ ಎಂಬುದು ಜನಜನಿತ ಮಾತು. ಅದೇ ರೀತಿ ನಾಟಕ ಪ್ರದರ್ಶಿಸಲೂ ಪೊಲೀಸರ ಪರ್ಮೀಶನ್ನು ಬೇಕಾ? ರಂಗಕಲೆ ಎಂಬುದು ಅತ್ಯಂತ ಸೃಜನಶೀಲವಾದ ಕಲಾ ಮಾಧ್ಯಮ. ಅದಕ್ಕೆ ಅಂಕುಶ ಹಾಕಿ ನಿಯಂತ್ರಿಸುವ ಪ್ರಯತ್ನ ಖಂಡನೀಯ. ಎಲ್ಲೋ ಒಂದೆರಡು ನಾಟಕಗಳು ಜನವಿರೋಧಿ ಯಾಗಿರಬಹುದು. ಹಾಗಂತಾ ಎಲ್ಲಾ ನಾಟಕಗಳನ್ನೂ ಸೆನ್ಸಾರ್ ಮಾಡಬೇಕೆನ್ನುವ ಪೋಲೀಸ್ ಆದೇಶ ಅಭಿವ್ಯಕ್ತಿ ಸ್ವಾತಂತ್ರ್ಯದ ಹರಣ.

ಹೌದು.. ಯಾವಾಗ ಅಡ್ಡಂಡ ಕಾರ್ಯಪ್ಪ ಎನ್ನುವ ಮತಾಂಧನೊಬ್ಬ “ಗಾಂಧಿ ಹತ್ಯೆಯ ಸತ್ಯ” ಎನ್ನುವ ಗಾಂಧಿ ವಿರೋಧಿ ನಾಟಕವೊಂದನ್ನು ನಿರ್ದೇಶಿಸಿ ಸುಚಿತ್ರ ಅಕಾಡೆಮಿಯಲ್ಲಿ ಅಕ್ಟೋಬರ್ 31 ರಂದು ಪ್ರದರ್ಶಿಸಿದನೋ ಆಗ ಗಾಂಧಿ ಅಭಿಮಾನಿಗಳಿಂದ ತೀವ್ರ ಪ್ರತಿರೋಧ ಉಂಟಾಯಿತು. ಗಾಂಧಿ ವಿರೋಧಿಯಾದ ಕೋಮುವಾದಿ ಅಡ್ಡಂಡನನ್ನು ಎಳೆದಾಡಿ ಮುಖಕ್ಕೆ ಮಸಿ ಬಳಿಯಲಾಯ್ತು. ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರುಗಳು ದಾಖಲಾದವು. ಮಾರನೆಯ ದಿನ 200 ಕ್ಕೂ ಹೆಚ್ಚು ಮೀಸಲು ಪೊಲೀಸ್ ಪಡೆಯ ರಕ್ಷಣೆಯಲ್ಲಿ ನಾಟಕ ಪ್ರದರ್ಶನ ಮಾಡಬೇಕಾಯ್ತು. ಮುಂದಿನ ಪ್ರದರ್ಶನಗಳನ್ನು ಪೊಲೀಸರೇ ರದ್ದು ಮಾಡಿದರು. “ಕೋತಿ ತಾನು ಕೆಡುವುದಲ್ಲದೇ ವನವನ್ನೆಲ್ಲಾ ಕೆಡಿಸಿತು” ಎನ್ನುವ ಗಾದೆಯಂತೆ ಈ ಅಡ್ನಾಡಿ ಮಾಡಿದ ಅವಗಡದಿಂದ ರಂಗಭೂಮಿಗೇ ಕಂಟಕ ಎದುರಾಗಿದೆ

ಈ ಹಿನ್ನೆಲೆಯಲ್ಲಿ ಬಸವನಗುಡಿಯ ಠಾಣಾಧಿಕಾರಿಯು ತನ್ನ ವ್ಯಾಪ್ತಿಯ ಕಲಾಪ್ರದರ್ಶನ ಮಂದಿರಗಳಿಗೆ ನವೆಂಬರ್ 4 ರಂದು ನೋಟೀಸ್ ಜಾರಿಮಾಡಿ ರಂಗಮಂದಿರದಲ್ಲಿ ಪ್ರದರ್ಶನಗೊಳ್ಳುವ ನಾಟಕಗಳಿಗೆ ಪೂರ್ವಭಾವಿಯಾಗಿ ಪೊಲೀಸ್ ಅನುಮತಿಯನ್ನು ಪಡೆಯಲೇಬೇಕೆಂದು ಆದೇಶ ನೀಡಿದೆ. “ಸಾಮಾಜಿಕ ಸ್ವಾಸ್ಥ್ಯ, ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಯ ಹಿತದೃಷ್ಟಿಯಿಂದ ನಾಟಕ ಪ್ರದರ್ಶನದ ಪೂರ್ವ ಮಾಹಿತಿ ಹಾಗೂ ಅಗತ್ಯ ದಾಖಲೆಗಳನ್ನು ಸಲ್ಲಿಸಬೇಕು” ಎಂದು ನೋಟೀಸಿನಲ್ಲಿ ಸೂಚಿಸಲಾಗಿದೆ.

“ಕಲಾಭವನದ ವತಿಯಿಂದ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಸಭಾಂಗಣಗಳಲ್ಲಿ ಸಾಮಾಜಿಕ ನಾಟಕಗಳನ್ನು, ಬೀದಿ ನಾಟಕಗಳು ಹಾಗೂ ಇತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರದರ್ಶಿಸಲಾಗುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಸಾಮಾಜಿಕ ಜಾಗೃತಿ ಮೂಡಿಸುವುದು ನಾಟಕಗಳ ಪ್ರಮುಖ ಉದ್ದೇಶವಾಗಿರುತ್ತದೆ. ಕೆಲವು ನಾಟಕಗಳಲ್ಲಿ ಸಂಭಾಷಣೆಗಳು, ದೃಶ್ಯಗಳು ಅಥವಾ ಪ್ರಸ್ತುತಪಡಿಸುವ ವಿಧಾನವು ಸಮಾಜದಲ್ಲಿ ಪರಸ್ಪರ ವೈಮನಸ್ಸನ್ನು, ಸಾರ್ವಜನಿಕ ಅಶಾಂತಿ, ವ್ಯಕ್ತಿಗಳ ಮಾನಹಾನಿ ಅಥವಾ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟುಮಾಡುವ ಸಾಧ್ಯತೆ ಇರುವುದರಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿರುತ್ತದೆ.

ಆದ್ದರಿಂದ ತಮ್ಮ ಕಲಾಭವನದ ವತಿಯಿಂದ ಮುಂದಿನ ದಿನಗಳಲ್ಲಿ ಪ್ರದರ್ಶನಗಳು ಉದ್ದೇಶಿತವಾದ ನಾಟಕಗಳ ಕುರಿತು ಕೆಳಕಂಡ ದಾಖಲೆ ಮತ್ತು ಮಾಹಿತಿಗಳನ್ನು ಸಂಬಂಧಪಟ್ಟ ಪ್ರಾಧಿಕಾರದ ಪರಿಶೀಲನೆಗಾಗಿ ಸಲ್ಲಿಸಲು ಸೂಚಿಸಲಾಗಿದೆ” ಎಂದು ನೋಟೀಸಿನಲ್ಲಿ ಹೇಳಲಾಗಿದೆ.

ಪೊಲೀಸಿನವರು ಈ ನೋಟೀಸಿನಲ್ಲಿ ವಿಧಿಸಿ ಸಲ್ಲಿಸಬೇಕೆಂದು ಹೇಳಿದ ನಿಬಂಧನೆಗಳು ಹೀಗಿವೆ..

  • ನಾಟಕದ ಸಂಪೂರ್ಣ ಕಥಾವಸ್ತು ಮತ್ತು ಸಂಭಾಷಣೆಯ ಪ್ರತಿ.
  • ನಾಟಕದ ಉದ್ದೇಶ ಮತ್ತು ಸಾರ್ವಜನಿಕರಿಗೆ ನೀಡಲು ಉದ್ದೇಶಿಸಿರುವ ಸಾಮಾಜಿಕ ಸಂದೇಶ.
  • ನಾಟಕ ಪ್ರದರ್ಶನದ ದಿನಾಂಕ, ಸಮಯ ಮತ್ತು ಸ್ಥಳ.
  • ನಾಟಕದ ನಿರ್ದೇಶಕರು, ನಿರ್ಮಾಪಕರು ಹಾಗೂ ಆಯೋಜಕರ ವಿವರ.
  • ಸಾರ್ವಜನಿಕ ಶಾಂತಿ ಮತ್ತು ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗದಂತೆ ಕೈಗೊಂಡಿರುವ ಮುನ್ನೆಚ್ಚರಿಕಾ ಕ್ರಮಗಳ ವಿವರ.
  • ಅನ್ವಯವಾಗುವ ನಿಯಮಗಳ ಪ್ರಕಾರ ಅಗತ್ಯವಿರುವ ಅನುಮತಿ ಮತ್ತು ಪರವಾನಗಿಗಳ ದಾಖಲೆಗಳು.

ಒಂದು ನಾಟಕ ಪ್ರದರ್ಶನ ಮಾಡಲು ಇಷ್ಟೆಲ್ಲವನ್ನೂ ಒದಗಿಸಬೇಕಂತೆ. ಆ ನಂತರ ಪರವಾನಿಗೆ ಕೊಡಬೇಕೋ ಬೇಡವೋ ಎಂದು ಪೊಲೀಸಿನವರು ನಿರ್ಧರಿಸುತ್ತಾರಂತೆ.

ಇಷ್ಟಕ್ಕೂ ಈ ಪೊಲೀಸಿನವರಿಗೆ ರಂಗಭೂಮಿಯ ಬಗ್ಗೆ ಅದೆಷ್ಟು ತಿಳುವಳಿಕೆ ಇದೆ? ರಂಗಭೂಮಿ ಎನ್ನುವುದೇ ಪ್ರತಿಭಟನಾ ಮಾಧ್ಯಮ. ಪ್ರಭುತ್ವವನ್ನು ಟೀಕಿಸುವ, ವಿಮರ್ಶಿಸುವ ಕೆಲಸವನ್ನು ನಾಟಕಗಳು ಮಾಡುತ್ತವೆ ಹಾಗೂ ಮಾಡಬೇಕು. ಪೊಲೀಸರ ಮಾನದಂಡಗಳು ಪ್ರತಿರೋಧವನ್ನೇ ಹತ್ತಿಕ್ಕುವಂತಿವೆ. “ಕೇವಲ ಮನರಂಜನಾತ್ಮಕ ನಗೆ ನಾಟಕಗಳನ್ನು ಮಾತ್ರ ಮಾಡಿ, ಪ್ರತಿರೋಧದ ನಾಟಕ ಆಡಬೇಡಿ” ಎನ್ನುವುದು ಪೊಲೀಸರ ಈ ನೋಟೀಸಿನ ಹಿಂದಿರುವ ಉದ್ದೇಶವಾಗಿದೆ. ಇದು ರಂಗಭೂಮಿಯ ಮೂಲ ಆಶಯಕ್ಕೆ ದಕ್ಕೆ ತರುವಂತಿದೆ.

ಬ್ರಿಟೀಷರ ಕಾಲದಲ್ಲಿ ನಾಟಕ ಪ್ರದರ್ಶನಗಳನ್ನು ಸೆನ್ಸಾರ್ ಮಾಡಲಾಗುತ್ತಿತ್ತು. 1975 ರ ತುರ್ತು ಪರಿಸ್ಥಿತಿಯಲ್ಲೂ ನಾಟಕಗಳ ಸ್ಕ್ರಿಪ್ಟ್ ಸೆನ್ಸಾರ್ ಮಾಡಲು ಆದೇಶಿಸಲಾಗಿತ್ತು. ಮಾಸ್ಟರ್ ಹಿರಣ್ಣಯ್ಯನವರ ನಾಟಕಗಳನ್ನು ಆಗ ಬ್ಯಾನ್ ಮಾಡಲಾಗಿತ್ತು. ಯಾವಾಗ್ಯಾವಾಗ ಶಾಂತಿ ಸುವ್ಯವಸ್ಥೆ ನೆಪದಲ್ಲಿ ನಾಟಕ ಪ್ರದರ್ಶನಗಳಿಗೆ ಅಂಕುಶ ಹಾಕುವ ಪ್ರಯತ್ನವನ್ನು ಪೊಲೀಸರ ಮೂಲಕ ಪ್ರಭುತ್ವ ಮಾಡುತ್ತದೋ ಆಗೆಲ್ಲಾ ರಂಗಭೂಮಿಯವರು ಸಿಡಿದೆದ್ದು ಪ್ರತಿಭಟಿಸಿದ್ದಾರೆ. ಎಮರ್ಜನ್ಸಿ ಸಮಯದಲ್ಲೂ ಶ್ರೀರಂಗರ ನೇತೃತ್ವದಲ್ಲಿ ರವೀಂದ್ರ ಕಲಾಕ್ಷೇತ್ರದ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು.

ಆದರೆ ಈಗ ರಂಗ ಪ್ರದರ್ಶನಕ್ಕೆ ಅನುಮತಿ ಪಡೆಯಬೇಕು ಎನ್ನುವ ಪೊಲೀಸ್ ನೋಟೀಸಿನ ವಿರುದ್ಧ ಯಾರೂ ಯಾಕೆ ದ್ವನಿ ಎತ್ತುತ್ತಿಲ್ಲ?. ಸ್ಕ್ರಿಪ್ಟ್ ಸೆನ್ಸಾರ್ ಎನ್ನುವ ಅಭಿವ್ಯಕ್ತಿ ಸ್ವಾತಂತ್ರ್ಯ ಹರಣದ ವಿರುದ್ದ ರಂಗಕರ್ಮಿಗಳಿಂದ ಪ್ರತಿರೋಧ ಕೇಳಿ ಬರುತ್ತಿಲ್ಲ. ರಂಗಭೂಮಿ ತನ್ನ ಪ್ರತಿರೋಧದ ಶಕ್ತಿಯನ್ನು ಕಳೆದುಕೊಂಡಿದೆಯಾ? ಹೊಸ ತಲೆಮಾರಿನ ಯುವ ರಂಗಕರ್ಮಿಗಳಲ್ಲಿ ಹೋರಾಟದ ಮನೋಭಾವವೇ ಇಲ್ಲದಾಯಿತೇ? ಇವತ್ತು ಒಂದು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೋಟೀಸ್ ಹೊರಡಿಸಿ ಅನುಮತಿಗಾಗಿ ಒತ್ತಾಯಿಸಲಾಗಿದೆ. ಇದನ್ನು ಪ್ರತಿರೋಧಿಸದೇ ಸುಮ್ಮನಿದ್ದರೆ ರಾಜ್ಯಾದ್ಯಂತ ಇದೇ ರೀತಿ ಪೊಲೀಸ್ ನೋಟೀಸ್ ಜಾರಿಯಾಗುತ್ತದೆ. ಯಾವ ನಾಟಕ ಪ್ರದರ್ಶಿಸಬೇಕು, ಯಾವುದನ್ನು ಪ್ರದರ್ಶಿಸಬಾರದು ಎಂಬುದನ್ನು ಪೊಲೀಸರು ನಿರ್ಧರಿಸುವಂತಾಗುತ್ತದೆ. ಹೀಗೆಯೇ ಆದರೆ ರಂಗಪ್ರದರ್ಶನಗಳು ಪ್ರತಿಭಟನಾ ಶಕ್ತಿಯನ್ನು ಕಳೆದುಕೊಂಡು ಕೇವಲ ಮನರಂಜನೆಗೆ ಮೀಸಲಾಗುವಂತಾಗುತ್ತವೆ. ಹೀಗಾಗಬಾರದು ಎಂದಾದರೆ, ರಂಗಭೂಮಿ ಪ್ರತಿಭಟನಾ ಮಾಧ್ಯಮವಾಗಿ ಮುಂದುವರೆಯಬೇಕೆಂದರೆ, ನಾಟಕಗಳು ಪ್ರಭುತ್ವದ ಜನವಿರೋಧಿತನವನ್ನು ಪ್ರಶ್ನಿಸಬೇಕೆಂದರೆ ಈ ರೀತಿಯ ಪೊಲೀಸ್ ಅದೇಶವನ್ನು ವಿರೋಧಿಸಲೇಬೇಕಿದೆ. ಕಲೆಗೆ ಬಲೆಹಾಕುವ ಕ್ರಮವನ್ನು ದಿಕ್ಕರಿಸಬೇಕಿದೆ.

ಈ ಕೂಡಲೇ ಹಿರಿಯ ರಂಗಕರ್ಮಿಗಳು ಗೃಹ ಸಚಿವರನ್ನು ಬೇಟಿಯಾಗಿ ಪೊಲೀಸ್ ನೊಟೀಸ್ ರದ್ದತಿಗಾಗಿ ಒತ್ತಾಯಿಸಬೇಕಿದೆ. ಪೊಲೀಸ್ ಕಮಿಷನರ್ ಬೇಟಿಯಾಗಿಯೂ ಮನವಿ ಸಲ್ಲಿಸಬೇಕಾಗಿದೆ. ಆಗಲೂ ನೋಟೀಸ್ ವಾಪಸ್ ಪಡೆಯದೇ ಇದ್ದರೆ ಮುಖ್ಯ ಮಂತ್ರಿಗಳನ್ನೇ ರಂಗಕರ್ಮಿಗಳ ನಿಯೋಗ ಬೇಟಿಯಾಗಿ ಪೊಲೀಸ್ ಹಸ್ತಕ್ಷೇಪದ ದುಷ್ಪರಿಣಾಮದ ಬಗ್ಗೆ ಮನವರಿಕೆ ಮಾಡಿಕೊಡಬೇಕಿದೆ. ಈ ಎಲ್ಲಾ ಪ್ರಯತ್ನಗಳು ಫಲ ಕೊಡದೇ ಹೋದರೆ ನೋಟೀಸ್ ಜಾರಿ ಮಾಡಿದ ಪೊಲೀಸ್ ಠಾಣೆಯ ಮುಂದೆ ಧರಣಿ ಕೂಡಬೇಕಿದೆ. ಒಟ್ಟಾರೆಯಾಗಿ ಸೃಜನಶೀಲ ಪ್ರದರ್ಶನ ಮಾಧ್ಯಮದ ಅಭಿವ್ಯಕ್ತಿಯನ್ನು ಹತ್ತಿಕ್ಕುವ ಪ್ರಯತ್ನವನ್ನು ವಿಫಲಗೊಳಿಸಬೇಕಿದೆ.

ನಾಟಕದ ಮೂಲಕ ಇತಿಹಾಸವನ್ನು ತಿರುಚಿ ಸಾಮಾಜಿಕ ಸ್ವಾಸ್ಥ್ಯ ಹಾಗೂ ಸಾಮರಸ್ಯವನ್ನು ಕದಡಲು ಪ್ರಯತ್ನಿಸುವ ಅಡ್ಡಂಡ ಕಾರ್ಯಪ್ಪನವರಂತವರ ಮತಾಂಧತೆಯನ್ನೂ ವಿರೋಧಿಸಬೇಕಿದೆ. ರಂಗಭೂಮಿ ಇರುವುದೇ ಸಮಾಜದ ಓರೆಕೋರೆಗಳನ್ನು ನಾಟಕದ ಮೂಲಕ ತೋರಿಸಿ ಜನರನ್ನು ಜಾಗೃತಗೊಳಿಸಲು, ನಾಟಕಗಳು ಇರುವುದೇ ಪ್ರಭುತ್ವವನ್ನು ಪ್ರಶ್ನಿಸಲು. ಹೀಗಾಗಿ ಜನಪರ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ರಂಗಕರ್ಮಿ ಕಲಾವಿದರು, ಸಾಹಿತಿಗಳು, ಪ್ರಜ್ಞಾವಂತರುಗಳು ಎಚ್ಚರಗೊಂಡು ರಂಗವಿರೋಧಿತನದ ವಿರುದ್ಧ ಎದ್ದು ನಿಲ್ಲಬೇಕಿದೆ. ರಂಗಭೂಮಿ ಪ್ರತಿರೋಧದ ಮಾಧ್ಯಮವಾಗಿ ಮುಂದುವರೆಯಬೇಕಿದೆ. “ಸುಮ್ಮನಿದ್ದರೆ ದಮನ ತಪ್ಪದು, ಎದ್ದು ನಿಂತರೆ ಗೆಲುವು ನಮ್ಮದು”

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು