ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಬೇಲೂರಿನಲ್ಲಿ ಮತ್ತೊಂದು ಕಾಡಾನೆ ದಾಳಿ – 2 ದಿನಗಳಲ್ಲಿ ಇಬ್ಬರ ದುರ್ಮರಣಬೇಲೂರು 56 ಕಾಡಾನೆಗಳನ್ನು ತಿಂಗಳೊಳಗೆ ಸ್ಥಳಾಂತರ – ಸಚಿವ ಕೆ. ಎಂ. ಶಿವಲಿಂಗೇಗೌಡ ಭರವಸೆಹಿರಿಯೂರು ಉಪಚುನಾವಣೆಯಲ್ಲಿ ಜೆಡಿಎಸ್‌ಗೆ ಅವಕಾಶ: ಬಿಜೆಪಿ ನಾಯಕರ ಮನವೊಲಿಕೆಗೆ ಕುಮಾರಸ್ವಾಮಿ ಯತ್ನಬೆಂಗಳೂರಿನಿಂದ ಮಧುರೈಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ತಾಂತ್ರಿಕ ದೋಷ; ಪೈಲಟ್ ಸಮಯಪ್ರಜ್ಞೆಯಿಂದ ತಪ್ಪಿದ ಅನಾಹುತಲೋಕ ಸುತ್ತಾಟ : ಪ್ರಕೃತಿ ವಿಸ್ಮಯದ ಪ್ರವಾಸಿ ತಾಣ : ವಿಯೆಟ್ನಾಂ ಬಾ ನಾ ಹಿಲ್ಸ್‌“ಇದು ಯಾರಪ್ಪನ ಭಾರತವಲ್ಲ” – ಹಾಡುಗಳಲ್ಲಿ ರಾಹತ್ ಇಂದೂರಿ ಸಾಲುಗಳ ನಿರ್ಬಂಧಕ್ಕೆ ಸ್ಥಳೀಯ ಆಡಳಿತಕ್ಕೆ ದಿಲ್ಜಿತ್ ದೋಸಾಂಜ್ ತಿರುಗೇಟು!ಫುಕೆಟ್‌ನಲ್ಲಿ ಭೀಕರ ಅಗ್ನಿ ದುರಂತ: 11 ಮಂದಿ ಸಾವು, 16 ಜನರಿಗೆ ಗಾಯಕಸ್ತೂರಿರಂಗನ್ ವರದಿ: ಅರಣ್ಯ ಗಡಿ ಗೊಂದಲಕ್ಕೆ ಶಾಶ್ವತ ಪರಿಹಾರ, ಒಂದು ವರ್ಷದೊಳಗೆ ಜಂಟಿ ಭೌತಿಕ ಸಮೀಕ್ಷೆ : ಸಚಿವ ರಾಮಲಿಂಗಾರೆಡ್ಡಿಡಿಸೆಂಬರ್ ಮೊದಲ ವಾರದಲ್ಲಿ ಚಳಿಗಾಲದ ಅಧಿವೇಶನ: ಮಹಿಳಾ ಮೀಸಲಾತಿ, ಕ್ಷೇತ್ರ ಪುನರ್ವಿಂಗಡಣೆ ಮಸೂದೆ ಮಂಡನೆಗೆ ಕೇಂದ್ರದ ಸಿದ್ಧತೆಐಸಿಸಿ ಅಧ್ಯಕ್ಷರಾಗಿ ಅಮಿತ್ ಷಾ ಪುತ್ರ ಜಯ್ ಶಾ ಎರಡನೇ ಅವಧಿಗೆ ಅವಿರೋಧ ಆಯ್ಕೆಎನ್‌ವಿಡಿಯಾದಲ್ಲಿ ನಾಯಕತ್ವದ ಪಲ್ಲಟಕ್ಕೆ ಸಿದ್ಧತೆ; ಜೆನ್ಸನ್ ಹುವಾಂಗ್ ಮರುಪ್ರವೇಶಕ್ಕೆ ಮಸ್ಕ್ ಬೆಂಬಲಅಡಿಕೆ, ತೆಂಗಿನ ತೋಟಗಳ ರಕ್ಷಣೆಗೆ ಭದ್ರಾ ಜಲಾಶಯದಿಂದ ನೀರು ಬಿಡುಗಡೆಹಿರಿಯೂರು ಉಪಚುನಾವಣೆ ಕಣಕ್ಕೆ ಪೂರ್ಣಿಮಾ ಶ್ರೀನಿವಾಸ್ ಆಸಕ್ತಿ; ಕಾಂಗ್ರೆಸ್ ಟಿಕೆಟ್‌ಗೆ ಅರ್ಜಿ ಸಲ್ಲಿಕೆನವೆಂಬರ್ 16ರ ಸಹಿಷ್ಣುತೆ ದಿನ ಆಚರಿಸುವ ನೈತಿಕ ಅರ್ಹತೆ ಜಗತ್ತಿಗಿದೆಯೇ?ಬಹ್ರೇನ್‌ನ ಅಮೆರಿಕ ಸೇನಾ ನೆಲೆಗೆ ಇರಾನ್‌ನಿಂದ ಡ್ರೋನ್ ದಾಳಿ ಯತ್ನಬ್ರಿಟನ್ ಪೌರತ್ವ ಪಡೆದ ಐಪಿಎಲ್ ಸಂಸ್ಥಾಪಕ ಲಲಿತ್ ಮೋದಿ; 2010ರಿಂದ ಭಾರತದಿಂದ ಹೊರಗೆ ವಾಸ, ದೇಶ ತೊರೆದವರ ಪಟ್ಟಿಗೆ ಮತ್ತೊಂದು ಸೇರ್ಪಡೆಪಶ್ಚಿಮ ಬಂಗಾಳ: ಪೊಲೀಸರ ಗುಂಡಿನ ದಾಳಿಗೆ ಆರೋಪಿ ಸಾವು; ಆರು ತಿಂಗಳಲ್ಲಿ ಐದನೇ ಎನ್‌ಕೌಂಟರ್ಉತ್ತರ ಪ್ರದೇಶ: ಡಿಜೆ ಸದ್ದಿಗೆ 20 ದಿನದ ಮಗು ಸಾವು; ಕುಟುಂಬದ ದೂರಿನ ಮೇರೆಗೆ ಡಿಜೆ ಉಪಕರಣ ವಶಕ್ಕೆಅಧಿಕಾರ ಸಿಗದ ಸಿಗದ ಹತಾಶೆಯಲ್ಲಿ ಕಾಂಗ್ರೆಸ್‌ ತನ್ನ ಕಾರ್ಯಕ್ರಮಗಳಿಗೆ ವಿದೇಶಿ ಎಡಪಂಥೀಯರನ್ನು ಆಹ್ವಾನಿಸುತ್ತಿದೆ: ಅಮಿತ್‌ ಶಾ ಆರೋಪದೆಹಲಿ ವಾಯುಮಾಲಿನ್ಯ: ಕೇಂದ್ರ ಸಚಿವ ಭೂಪೇಂದ್ರ ಯಾದವ್ ಕಚೇರಿಗೆ ತೆರಳಲು ಎಐಎಸ್ಎ ಅಧ್ಯಕ್ಷೆ ನೇಹಾ ಬೋರಾ ನಿರ್ಧಾರ

ಲೋಕ ಸುತ್ತಾಟ : ಪ್ರಕೃತಿ ವಿಸ್ಮಯದ ಪ್ರವಾಸಿ ತಾಣ : ವಿಯೆಟ್ನಾಂ ಬಾ ನಾ ಹಿಲ್ಸ್‌

PPeepal Media Desk

Peepal Media Desk ಅಂಕಣ

• 3 ನಿಮಿಷದ ಓದು

ಲೋಕ ಸುತ್ತಾಟ : ಪ್ರಕೃತಿ ವಿಸ್ಮಯದ ಪ್ರವಾಸಿ ತಾಣ : ವಿಯೆಟ್ನಾಂ ಬಾ ನಾ ಹಿಲ್ಸ್‌

ವಿಯೆಟ್ನಾಂ ದೇಶದ ಅತಿ ಎತ್ತರದ ಗಿರಿಧಾಮ ಬಾ ನಾ ಹಿಲ್ಸ್‌ ಒಂದು ಸುಂದರ, ಮನಮೋಹಕ, ಪ್ರಕೃತಿ ರಮ್ಯತೆಯ ಪ್ರವಾಸಿ ತಾಣ. ಲೇಖಕರಾದ ಡಾ.ಪ್ರಕಾಶ ಗ.ಖಾಡೆ ಅವರ ಲೋಕ ಸುತ್ತಾಟ ಅಂಕಣದಲ್ಲಿ ಇಂದು ವಿಯೆಟ್ನಾಂ ಬಾ ನಾ ಹಿಲ್ಸ್‌ ಬಗ್ಗೆ ಸ್ವಾರಸ್ಯಕರ ವಿವರಣೆ..

ವಿಯೆಟ್ನಾಂ ದೇಶದ ಅತಿ ಎತ್ತರದ ಗಿರಿಧಾಮ ಬಾ ನಾ ಹಿಲ್ಸ್‌ ಒಂದು ಸುಂದರ ,ಮನಮೋಹಕ, ಪ್ರಕೃತಿ ರಮ್ಯತೆಯ ಪ್ರವಾಸಿ ತಾಣ. ಈ ಗಿರಿಧಾಮದ ಒಂದು ವೈಶಿಷ್ಟ್ಯವೆಂದರೆ, ವರ್ಷಋತುಗಳ ದರ್ಶನ ಒಂದೇ ದಿನವಾಗುತ್ತದೆ. ಬೆಳಿಗ್ಗೆ ವಸಂತ, ಮಧ್ಯಾಹ್ನ ಬೇಸಿಗೆ, ಸಂಜೆ ಶರತ್ಕಾಲ, ರಾತ್ರಿ ಚಳಿಗಾಲ ಹೀಗೆ ನಾಲ್ಕು ಋತುಗಳನ್ನು ಒಂದೇ ದಿನ ಅನುಭವಿಸುತ್ತೇವೆ. ನಾವು ಇಲ್ಲಿ ಒಂದೇ ದಿನ ಉರಿವ ಬಿಸಿಲು. ಸುರಿವ ಮಳೆಯು, ಕೊರೆವ ಚಳಿವು, ಹಾಗೂ ಮುಸುಕುವ ಮಂಜು ಕಾಣುತ್ತೇವೆ. ಇದೊಂದು ಮೋಹಕ ಪ್ರವಾಸಿ ತಾಣ. ಪ್ರಕೃತಿ ರಮ್ಯವಾದ ಈ ಸ್ಥಳವನ್ನು ತಮ್ಮ ತಂಪಾದ ವಿಶ್ರಾಂತಿ ಕೇಂದ್ರವಾಗಿ ಪ್ರೆಂಚ್‌ ವಸಾಹತುಶಾಹಿ ಆಡಳಿತಗಾರರು ಅಭಿವೃದ್ಧಿ ಪಡಿಸಿದರು. ಈಗ ವಿಯೆಟ್ನಾಂ ದ ಅತ್ಯಂತ ಪ್ರಮುಖ ಪ್ರವಾಸಿತಾಣವಾಗಿ ಬಾ ನಾ ಹಿಲ್ಸ್‌ ನಿರ್ಮಿಸಲಾಗಿದೆ.

ವಿಯೆಟ್ನಾಂ ಮಧ್ಯ ಕರಾವಳಿಯ ಡನಾಂಗ್‌ ನಗರದ ಸಮೀಪದಲ್ಲಿರುವ ಈ ಪರ್ವತ ಪ್ರದೇಶವು ತನ್ನ ನೈಸರ್ಗಿಕ ಸೌಂದರ್ಯ, ತಂಪಾದ ಹವಾಮಾನ, ಕಣ್ಮನಗಳನ್ನು ಸೆಳೆಯುವ ಉದ್ಯಾನಗಳು ಮತ್ತು ವಿಶ್ವವಿಖ್ಯಾತ ಗೋಲ್ಡನ್‌ ಬ್ರಿಡ್ಜ್‌ ಮೂಲಕ ವಿಶ್ವದ ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುತ್ತಿದೆ. ಬಾನಾ ಹಿಲ್ಸ್ ಸಮುದ್ರಮಟ್ಟದಿಂದ ೧೪೮೭ ಮೀಟರ್‌ ಎತ್ತರದಲ್ಲಿದೆ. ಬಾನಾ ಹಿಲ್ಸ್‌ ದಲ್ಲಿ ಮಳೆ ವರ್ಷಪೂರ್ತಿ ಇರುತ್ತದೆ. ತುಂಬಾ ಎತ್ತರದಲ್ಲಿ ಇರುವುದರಿಂದ ಮೋಡಗಳು ಹತ್ತಿರದಲ್ಲಿಯೇ ಕಾಣಸಿಗುತ್ತವೆ.

ಮೋಡಗಳ ಮೇಲೆ ತೇಲುವ ಅನುಭವ.
ಹಸಿರು ಪರ್ವತಗಳು, ದಟ್ಟ ಕಾಡುಗಳು, ಮೋಡಗಳ ಹೊದಿಕೆ, ತಂಪಾದ ಹವಾಮಾನದಿಂದ ಈ ಪ್ರದೇಶವು ಪ್ರಕೃತಿಯ ಒಂದು ಅದ್ಭುತ ತಾಣವಾಗಿದೆ. ಗೋಲ್ಡನ್‌ ಬ್ರಿಡ್ಜ್‌ ಸೇತುವೆ ಮೇಲೆ ನಿಂತು ಸುತ್ತಲೂ ನೋಡಿದರೆ ಮೋಡಗಳ ಸಮುದ್ರವೇ ಕಾಣುತ್ತದೆ. ಗಾಳಿ ಬೀಸುವಾಗ ಮೋಡಗಳು ನಿಧಾನವಾಗಿ ಚಲಿಸುತ್ತಾ ಪರ್ವತಗಳನ್ನು ಆವರಿಸುವ ದೃಶ್ಯ ಮನಸ್ಸಿಗೆ ಅಲೌಕಿಕ ಅನುಭವ ನೀಡುತ್ತದೆ. ಕೇಬಲ್‌ ಕಾರುಗಳ ಮೂಲಕ ಪಯಣಿಸುವಾಗ ದಟ್ಟೈಸುವ ಮೋಡಗಳು ಆವರಿಸಿ ಸುತ್ತಲಿನ ದೃಶ್ಯಗಳು ಮಂಜಿನಲ್ಲಿ ಮರೆಯಾಗುತ್ತವೆ. ಆಗ ನಾವು ಆಕಾಶದಲ್ಲಿ ತೇಲುತ್ತಿರುವ ವಿಸ್ಮಯದ ಅನುಭವಾಗುತ್ತದೆ.

ಗೋಲ್ಡನ್‌ ಬ್ರಿಡ್ಜ್.‌ ಕೈಗಳ ಮೇಲೆ ನಿಂತ ಸೇತುವೆ.
ಬಾ ನಾ ಹಿಲ್ಸ್‌ ನ ತುಂಬಾ ಆಕರ್ಷಣೆ ಅಂದ್ರೆ ಅದು ಗೋಲ್ಡನ್ ಬ್ರಿಡ್ಜ್,ಇದೊಂದು ಸಾಂಪ್ರದಾಯಿಕ ಪಾದಚಾರಿ ಸೇತುವೆ. ಇದು ತನ್ನ ವಿಶಿಷ್ಟ ವಿನ್ಯಾಸಕ್ಕೆ ಹೆಸರುವಾಸಿಯಾಗಿದೆ, ಪರ್ವತದ ಇಳಿಜಾರಿನಿಂದ ಹೊರಹೊಮ್ಮುವ ಎರಡು ಬೃಹತ್, ಕೈಗಳಿಂದ ಮೇಲಕ್ಕೆ ಹಿಡಿದಿರುವಂತೆ ಕಾಣುತ್ತದೆ. ಈ ಸೇತುವೆಯು ಸನ್ ವರ್ಲ್ಡ್ ಬಾ ನಾ ಹಿಲ್ಸ್ ಮನೋರಂಜನಾ ಉದ್ಯಾನವನ ಸಂಕೀರ್ಣದ ಭಾಗವಾಗಿದ್ದು, ಸಮುದ್ರ ಮಟ್ಟದಿಂದ ಸುಮಾರು 1,400 ಮೀಟರ್ (4,600 ಅಡಿ) ಎತ್ತರದಲ್ಲಿ ಮೌಂಟ್ ಬಾ ನಾ ಮೇಲೆ ಇದೆ. 150 ಮೀಟರ್ ಉದ್ದದ ಸೇತುವೆಯನ್ನು ಬೆಟ್ಟದ ಪ್ರಕೃತಿ ಪುರುಷನ ಕೈಯಲ್ಲಿ ಚಿನ್ನದ ರೇಷ್ಮೆ ರಿಬ್ಬನ್‌ನಂತೆ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ. ಕೈಗಳು ಗೋಚರಿಸುವಂತೆ ಕಲ್ಲಿನಿಂದ ಮಾಡಲ್ಪಟ್ಟಿಲ್ಲ, ಬದಲಿಗೆ ಫೈಬರ್‌ಗ್ಲಾಸ್ ಮತ್ತು ತಂತಿ ಜಾಲರಿಯಿಂದ ಮುಚ್ಚಿದ ಉಕ್ಕಿನ ಕೋರ್‌ನಿಂದ ನಿರ್ಮಿಸಲಾಗಿದೆ, ಇದು ಉದ್ದೇಶಪೂರ್ವಕವಾಗಿ ವಯಸ್ಸಾದ ಮತ್ತು ಪಾಚಿಯ ನೋಟವನ್ನು ನೀಡುತ್ತದೆ. ತುಂಬಾ ಮನಮೋಹಕವಾಗಿರುವ ಇದನ್ನು ಕೇಬಲ್ ಕಾರ್ ನಿಲ್ದಾಣವನ್ನು ಉದ್ಯಾನಗಳೊಂದಿಗೆ ಸಂಪರ್ಕಿಸಲು ಮತ್ತು ಸುತ್ತಮುತ್ತಲಿನ ಪರ್ವತಗಳು, ಕಾಡುಗಳು ಮತ್ತು ಕೆಳಗಿನ ಡಾ ನಾಂಗ್ ನಗರದ ವಿಹಂಗಮ ನೋಟಗಳೊಂದಿಗೆ ರಮಣೀಯ ನೋಟವನ್ನು ಒದಗಿಸಲು ನಿರ್ಮಿಸಲಾಗಿದೆ.

ಬಾನಾ ಹಿಲ್ಸ್‌ ಕೆಬಲ್‌ ಕಾರು. ಕಣಿವೆಗಳು ಮತ್ತು ಜಲಪಾತಗಳು.
ಬಾ ನಾ ಹಿಲ್ಸ್ ಕೇಬಲ್ ಕಾರುಗಳು ಹಲವಾರು ವಿಶ್ವ ದಾಖಲೆಗಳನ್ನು ಹೊಂದಿವೆ. ಸನ್‌ ಗ್ರುಪ್‌ ಮತ್ತು ಆಸ್ಟ್ರೀಯನ್‌ ತಂತ್ರಜ್ಞರಿಂದ ನಿರ್ಮಿಸಲ್ಪಟ್ಟ ಕೆಬಲ್‌ ಕಾರುಗಳ ಜಾಲವು ನಾಲ್ಕು ಲೈನ್‌ ಗಳಲ್ಲಿವೆ. ಬಾ ನಾ ಹಿಲ್ಸ್‌ ಕೆಬಲ್‌ ಕಾರುಗಳು ತಳದಿಂದ ಗಿರಿಧಾಮಕ್ಕೆ ಕರೆದುಕೊಂಡು ಹೋಗಲು ಕ್ರಮಿಸುವ ದಾರಿ ಮತ್ತು ಅವುಗಳ ನಿರ್ಮಾಣವು ವಿಶ್ವದಾಖಲೆಗಳನ್ನು ಹೊಂದಿದೆ. ಸುಮಾರು 15-20 ನಿಮಿಷಗಳ ಪ್ರಯಾಣದಲ್ಲಿ ಸುತ್ತಮುತ್ತಲಿನ ಪರ್ವತಗಳು ಮತ್ತು ಕಾಡುಗಳ ರಮಣೀಯ ನೋಟ ಕಣ್ಮನ ಸೆಳೆಯುತ್ತದೆ. ಕೆಬಲ್‌ ಕಾರಿನಲ್ಲಿ ಪ್ರಯಾಣಿಸುವಾಗ ಸಣ್ಣ ಸಣ್ಣ ಹೊಳೆಗಳು,ತಿಳಿ ನೀರಿನ ಜಲಪಾತಗಳು, ದಟ್ಟ ಕಾಡುಗಳು ಗೋಚರಿಸುತ್ತವೆ. ಇಲ್ಲಿನ ಕೆಬಲ್‌ ಕಾರುಗಳನ್ನು ಗಿರಿಧಾಮದ ಲಾಂಛನವಾದ ಚೆರ್ರಿ ಬ್ಲಾಸಮ್‌ ಆಕಾರದೊಂದಿಗೆ ವಿನ್ಯಾಸಗೊಳಿಸಲಾಗಿದೆ. ನಾವು ಒಂದು ಕಾರಿನಲ್ಲಿ ಎಂಟು ಜನರಂತೆ ಪ್ರಯಾಣಿಸಿದೆವು. ಹಸಿರು ಹೊತ್ತ ಬೆಟ್ಟಗಳಲ್ಲಿ ಸಾಗುವಾಗ ಅಲ್ಲಲ್ಲಿ ಕಾಣುವ ಕಿರು ಜಲಪಾತಗಳು, ಪ್ರವಹಿಸುವ ತೊರೆಗಳು ಕಣ್ಣಿಗೆ ತಂಪನ್ನು,ಮನಸ್ಸಿಗೆ ಮುದವನ್ನು ನೀಡುತ್ತವೆ.

ಸಿನಿಮಾಕ್ಕೂ ಸೈ
ಈ ಪ್ರದೇಶ ಸಿನಿಮಾ ಚಿತ್ರೀಕರಣಕ್ಕೆ ಹೇಳಿ ಮಾಡಿಸಿದ ತಾಣ. ಕನ್ನಡದ ಗಣೇಶ, ಮಾಳವಿಕಾ ನಾಯರ್ ಅಭಿನಯಿಸಿರುವ ಕೃಷ್ಣಂ ಪ್ರಣಯ ಸಖಿ ಚಲನಚಿತ್ರದ ಹಾಡಿನ ಚಿತ್ರೀಕರಣ ಈ ಪರಿಸರದಲ್ಲಿಯೇ ನಡೆದಿದ್ದು,ಕರುನಾಡ ಪ್ರವಾಸಿಗರಿಗಂತೂ ಇದು ಅಚ್ಚು ಮೆಚ್ಚಿನ ಪ್ರವಾಸಿ ತಾಣವಾಗಿದೆ. ಬಾ ನಾ ಹಿಲ್ಸ್‌ ತನ್ನ ಪ್ರಕೃತಿ ಸೌಂದರ್ಯ, ಪ್ರೆಂಚ್‌ ಮಾದರಿಯ ಕಟ್ಟಡಗಳು ,ಬಗೆ ಬಗೆ ಹೂವಿನ ತೋಟಗಳು,ಪ್ರೆಂಚ್‌ ವಿಲೇಜ್‌, ಫ್ಯಾಂಟಸಿ ಪಾರ್ಕ್,ಜುರಾಸಿಕ್‌ ಪಾರ್ಕ್‌,ವಿವಿಧ ರೀತಿಯ ರೆಸ್ಟೋರೆಂಟ್‌ ಗಳು, ಬಾರ್‌ ಗಳು ಮತ್ತು ಕಾಫಿ ಅಂಗಡಿಗಳು, ಬಿಸಿಬಿಸಿಯಾದ ವೈವಿಧ್ಮಯ ಸಸ್ಯಾಹಾರಿ, ಮಾಂಸಾಹಾರಿ ಊಟದ ಹೊಟೇಲುಗಳು, ನೀರಿನ ಕಾರಂಜಿಗಳು,ಮನಮೋಹಕ ಉಬ್ಬು ಶಿಲ್ಪಗಳು ಹಾಗೂ ಉತ್ಕೃಷ್ಟ ಹವಾಮಾನದಿಂದ ಪ್ರವಾಸಿಗರ ಸ್ವರ್ಗವೆನಿಸಿದೆ.

ಇಲ್ಲಿ ರೇನ್‌ ಕೋಟ್‌ ,ಹಗುರವಾದ ಜ್ಯಾಕೆಟ್‌, ಸಣ್ಣ ಕೊಡೆ, ಸನ್‌ ಗ್ಲಾಸ್‌, ಟೋಪಿ, ನೀರಿನ ಬಾಟಲು ಇಟ್ಟುಕೊಳ್ಳುವುದು ಒಳಿತು. ಇದು ಪರ್ವತ ಪ್ರದೇಶವಾಗಿರುವುದರಿಂದ ಹವಾಮಾನ ತಕ್ಷಣ ಬದಲಾಗುತ್ತದೆ. ಅಯ್ಯೋ ಉರಿಬಿಸಿಲು ಎಂದು ನಾವು ಹೇಳೋ ಹೊತ್ತಿಗೆ ಮಳೆ ಸುರಿಯಲು ಆರಂಭವಾಗುತ್ತದೆ. ಮತ್ತೆ ಮುಂದಿನದು ಚಳಿಯ ಅನುಭವ. ಆಗಾಗ ಮಂಜೂ ಆವರಿಸಿ ಮುಂದೆಲ್ಲಾ ಏನೋ ಕಾಣದ ಅನುಭವವಾಗುತ್ತದೆ. ಇವೆಲ್ಲ ಒಂದಿಷ್ಟು ಕಾಲ ಮಾತ್ರ. ಮತ್ತೆ ಬಯಲಾಗಿ ತಂಪಾದ ಹವಾಮಾನದಿಂದ ಖುಷಿನೀಡುತ್ತದೆ. ಬಾ ನಾ ಹಿಲ್ಸ್‌ ವಸಾಹತುಶಾಹಿ ಬೇಸಿಗೆ ತಂಗುದಾಣದಿಂದ ಇವತ್ತು ವಿಯೆಟ್ನಾಮ್‌ ದ ಪ್ರಮುಖ ಪ್ರವಾಸಿ ತಾಣವಾಗಿ ನಿರ್ಮಿಸಲಾಗಿದೆ. ಬೆಟ್ಟ ಸೀಳಿ ಗಿರಿಧಾಮದ ಗಮ್ಯದೆಡೆಗೆ ಸಾಗುವುದೇ ಜೀವಮಾನದ ಒಂದು ಸಾರ್ಥಕ ಕ್ಷಣ.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು