ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ನನ್ನ ವಾದವನ್ನೇ ಆಲಿಸದೆ ಸುಪ್ರೀಂಕೋರ್ಟ್‌ ಆದೇಶ ನೀಡಿದೆ, ಜಾಮೀನು ನಿರ್ಧಾರದ ವಿರುದ್ಧ ಹೋರಾಡುತ್ತೇನೆ: ಬಿಲ್ಕಿಸ್‌ ಬಾನೊಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐಎಸ್‌ಐಆರ್‌ ಕುರಿತು ಏಕಮತದ ತೀರ್ಮಾನ ಕೈಗೊಂಡಿರುವುದಕ್ಕೆ ಇಸಿಐ ದಾಖಲೆಗಳನ್ನು ಸಲ್ಲಿಸಿಲ್ಲ: ಸುಪ್ರೀಂಕೋರ್ಟಿನಲ್ಲಿ ವಾದ ಸಲ್ಲಿಸಿದ ಅರ್ಜಿದಾರರುಬೇಡಿಕೆ ಈಡೇರಿಸುವ ತನಕ ನಾವು ಇಲ್ಲಿಂದ ಹೋಗುವುದಿಲ್ಲ: ಆರೋಗ್ಯ ಸಚಿವರ ಮನವಿಯನ್ನು ತಿರಸ್ಕರಿಸಿದ ಆಶಾ ಕಾರ್ಯಕರ್ತೆಯರುದಕ್ಷಿಣ ಕನ್ನಡ | ಕೋಲ್ಡ್‌ ಪ್ರೆಸ್ಡ್‌ ಹೆಸರಿನಲ್ಲಿ ಕಚ್ಚಾ ಎಣ್ಣೆ ಮಾರಾಟ: 1,240 ಕೆ.ಜಿ. ಅಡುಗೆ ಎಣ್ಣೆ ವಶಕ್ಕೆ ಪಡೆದ ಆಹಾರ ಸುರಕ್ಷತಾ ಇಲಾಖೆಹೋಟೆಲ್‌ ಕೋಣೆಯಲ್ಲಿ ಗಾಂಜಾ ಇಟ್ಟು ಸುಳ್ಳು ಪ್ರಕರಣ ದಾಖಲಿಸಲು ಸಂಚು, ವಿಡಿಯೊ ವೈರಲ್‌; ಠಾಣಾಧಿಕಾರಿ ವರ್ಗಾವಣೆಭದ್ರಾ ಅರಣ್ಯಕ್ಕೆ 56 ಕಾಡಾನೆಗಳ ಸ್ಥಳಾಂತರಕ್ಕೆ ವಿರೋಧ: ಪ್ರಸ್ತಾವನೆ ಕೈಬಿಡುವಂತೆ ಅರಣ್ಯ ಸಚಿವರಿಗೆ ಶಾಸಕ ರಾಜೇಗೌಡ ಮನವಿಹಾಸನದ ಬೇಲೂರಿನಲ್ಲಿ ಕಾಡಾನೆ ಸೆರೆ – ಸ್ಥಳಾಂತರ ಕಾರ್ಯಾಚರಣೆಗೆ ಚಾಲನೆಅನುದಿನದ ಅಂತರಂಗ: ತುಳಿದಷ್ಟೂ ಬೆಳೆಯುತ್ತೇನೆ ತಿಳಿದಿರಲಿ ನಿಮಗೆಬೊಗಸೆಗೆ ದಕ್ಕಿದ್ದು-101 : ಮೇಲ್ವರ್ಗದ ರಕ್ಷಣೆ, ಕೆಳವರ್ಗದ ಗುಲಾಮಿಯೇ ಸರ್ವಾಧಿಕಾರದ ಗುರಿ!SIR ಮತದಾರರ ಪಟ್ಟಿ ಪರಿಷ್ಕರಣೆ ವಿವಾದ ಸುಪ್ರೀಂ ಕೋರ್ಟ್ ಅಂಗಳಕ್ಕೆ!ಹಾಸನದಲ್ಲಿ ಕಾಡಾನೆ ಕಾರ್ಯಾಚರಣೆಗೆ ಸಿದ್ಧತೆ: 300ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆಕೇಂದ್ರದ ವಿರುದ್ಧ ಸುಪ್ರೀಂ ದೂರು – ರಾಜ್ಯ ಬರಬೇಕಾದ 2186 ಕೋಟಿ ರೂ. ಬಾಕಿಕೋಲಾರ : ಆಟೋಗೆ ಸ್ಕೊಡಾ ಕಾರಿನ ನಡುವೆ ಬೀಕರ ಅಪಘಾತ – ಇಬ್ಬರು ದುರ್ಮರಣಎಂಎಸ್ ಧೋನಿ ಐಪಿಎಲ್ ನಿವೃತ್ತಿ: 2027ರಿಂದ CSK ಮೆಂಟರ್ಶಾಸಕ ಹರೀಶ್ ಪೂಂಜಾ ವಿರುದ್ಧ ಕಾನೂನು ಕ್ರಮ – ಮಧು ಬಂಗಾರಪ್ಪಸಾತನೂರು: ಜನರಲ್ಲಿ ಆತಂಕ ಮೂಡಿಸಿದ್ದ ಚಿರತೆ; ಬೋನಿಗೆ.ಸೋನಿಯಾ ಗಾಂಧಿ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯಗೆ ಐದನೇ ಸಾಲಿನ ಆಸನ! ಕರ್ನಾಟಕದಲ್ಲಿ ಕಾಂಗ್ರೆಸ್ ತನ್ನ ತಲೆ ಮೇಲೆ ತಾನೇ ಕಲ್ಲು ಎಳೆದುಕೊಂಡಿದೆ ಎಂಬ ಚರ್ಚೆಧರ್ಮಸ್ಥಳದ ಪ್ರತಿಭಟನೆಗೆ ಪ್ರಚಾರ, ಸೌಜನ್ಯಳ ನ್ಯಾಯದ ಪ್ರಶ್ನೆಗಳಿಗೆ ಇಲ್ಲ ಉಪಚಾರ!ಬಿಲ್ಕಿಸ್ ಬಾನೊ ಸಾಮೂಹಿಕ ಅತ್ಯಾಚಾರ ಪ್ರಕರಣ: ಇಬ್ಬರು ಅಪರಾಧಿಗಳಿಗೆ ಜಾಮೀನು ನೀಡಿದ ಸುಪ್ರೀಂಕೋರ್ಟ್

ಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐ

PPeepal Media

Peepal Media ದೇಶ

• 1 ನಿಮಿಷದ ಓದು

ಇನ್ಶೂರೆನ್ಸ್ ಇಲ್ಲದೆ ಟೋಲ್‌ ದಾಟುವ ವಾಹನಗಳಿಗೆ ಎಸ್‌ಎಮ್‌ಎಸ್‌ ಅಲರ್ಟ್:‌ ಪ್ರಾಯೋಗಿಕ ಯೋಜನೆ ಆರಂಭಿಸಿದ ಎನ್‌ಎಚ್‌ಎಐ

ದೆಹಲಿ: ಮಾನ್ಯವಾದ ಥರ್ಡ್‌ ಪಾರ್ಟಿ ವಿಮೆ ಇಲ್ಲದ ವಾಹನಗಳು ರಾಷ್ಟ್ರೀಯ ಹೆದ್ದಾರಿಗಳ ಟೋಲ್‌ ಪ್ಲಾಜಾಗಳನ್ನು ದಾಟಿದರೆ, ವಾಹನ ಮಾಲೀಕರ ಮೊಬೈಲ್‌ಗೆ ಎಸ್‌ಎಂಎಸ್‌ ಎಚ್ಚರಿಕೆ ಕಳುಹಿಸುವ ಪ್ರಾಯೋಗಿಕ ಯೋಜನೆಯನ್ನು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಆರಂಭಿಸಿದೆ.

ಕಡ್ಡಾಯವಾಗಿರುವ ಥರ್ಡ್‌ ಪಾರ್ಟಿ ವಿಮೆಯ ಅವಧಿ ಮುಗಿದಿದ್ದರೆ ಅಥವಾ ವಾಹನಕ್ಕೆ ವಿಮೆಯೇ ಇಲ್ಲದಿದ್ದರೆ, ಟೋಲ್‌ ಪ್ಲಾಜಾ ದಾಟಿದ ಕೆಲವೇ ನಿಮಿಷಗಳಲ್ಲಿ ಮಾಲೀಕರಿಗೆ ಸಂದೇಶ ಬರಲಿದೆ. ದೆಹಲಿಯ ಅರ್ಬನ್‌ ಎಕ್ಸ್‌ಟೆನ್ಷನ್‌ ರಸ್ತೆ–2 (ಯುಇಆರ್‌–2) ಮೇಲಿರುವ ಮುಂಡ್ಕಾ ಟೋಲ್‌ ಪ್ಲಾಜಾದಲ್ಲಿ ಈ ಯೋಜನೆ ಆರಂಭವಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸಲು ಉದ್ದೇಶಿಸಲಾಗಿದೆ.

ವಾಹನ ಮಾಲೀಕರು ಸಮಯಕ್ಕೆ ಸರಿಯಾಗಿ ವಿಮೆ ನವೀಕರಿಸಿಕೊಳ್ಳುವಂತೆ ಪ್ರೇರೇಪಿಸುವುದು ಈ ಯೋಜನೆಯ ಉದ್ದೇಶ. ಪ್ರಸ್ತುತ ಈ ವ್ಯವಸ್ಥೆಯನ್ನು ಪರೀಕ್ಷಿಸುವ ಪ್ರಾಯೋಗಿಕ ಪ್ರಯತ್ನ ನಡೆಯುತ್ತಿದೆ.

ವಿಮೆಯ ಅವಧಿ ಮುಗಿದಿದ್ದರೆ ಅಥವಾ ವಾಹನಕ್ಕೆ ವಿಮೆ ಇಲ್ಲದಿದ್ದರೆ, ವಾಹನದ ನೋಂದಣಿ ಸಂಖ್ಯೆ, ಟೋಲ್‌ ಪ್ಲಾಜಾ ದಾಟಿದ ಸಮಯ ಮತ್ತು ವಿಮೆಯ ಅವಧಿ ಮುಗಿದಿರುವ ವಿವರಗಳೊಂದಿಗೆ ಮಾಲೀಕರಿಗೆ ಎಸ್‌ಎಂಎಸ್‌ ಕಳುಹಿಸಲಾಗುತ್ತದೆ. ವಿಮೆ ಮುಕ್ತಾಯಗೊಂಡ ದಿನಾಂಕವನ್ನೂ ಸಂದೇಶದಲ್ಲಿ ತಿಳಿಸಿ, ಮೋಟಾರು ವಾಹನ ಕಾಯ್ದೆಯಡಿ ದಂಡದಿಂದ ತಪ್ಪಿಸಿಕೊಳ್ಳಲು ವಿಮೆಯನ್ನು ನವೀಕರಿಸಿಕೊಳ್ಳುವಂತೆ ಸೂಚಿಸಲಾಗುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ವಿಮೆ ಇಲ್ಲದ ವಾಹನಗಳು ರಸ್ತೆ ಅಪಘಾತಗಳಲ್ಲಿ ಸಿಲುಕಿದರೆ, ಸಂತ್ರಸ್ತರಿಗೆ ಪರಿಹಾರ ಪಡೆಯುವ ಅವಕಾಶಗಳು ಸೀಮಿತವಾಗುತ್ತವೆ. ಹೀಗಾಗಿ ವಾಹನ ಮಾಲೀಕರು ನಿಗದಿತ ಸಮಯಕ್ಕೆ ವಿಮೆ ನವೀಕರಿಸಿಕೊಳ್ಳುವಂತೆ ಮಾಡಲು ಈ ಕ್ರಮ ಕೈಗೊಳ್ಳಲಾಗಿದೆ.

ವಿಮೆ ಇಲ್ಲದಿದ್ದರೆ ಎಷ್ಟು ದಂಡ?

ಪ್ರಸ್ತುತ ನಿಯಮಗಳ ಪ್ರಕಾರ, ವಿಮೆ ಇಲ್ಲದ ವಾಹನದ ಮೊದಲ ಉಲ್ಲಂಘನೆಗೆ ಮೂಲ ವಿಮಾ ಪ್ರೀಮಿಯಂನ ಮೂರು ಪಟ್ಟು ಅಥವಾ ₹5,000 — ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ದಂಡವಾಗಿ ಪಾವತಿಸಬೇಕಾಗುತ್ತದೆ.

ಎರಡನೇ ಬಾರಿ ಇದೇ ನಿಯಮ ಉಲ್ಲಂಘಿಸಿದರೆ, ಮೂಲ ಪ್ರೀಮಿಯಂನ ಐದು ಪಟ್ಟು ಅಥವಾ ₹10,000 — ಇವೆರಡರಲ್ಲಿ ಯಾವುದು ಹೆಚ್ಚೋ ಆ ಮೊತ್ತವನ್ನು ದಂಡವಾಗಿ ವಿಧಿಸಲಾಗುತ್ತದೆ.

PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು