ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
12 ದಿನಗಳ ಅಹೋರಾತ್ರಿ ಹೋರಾಟಕ್ಕೆ ಮಣಿದ ಸರ್ಕಾರ: ಆಶಾ ಕಾರ್ಯಕರ್ತೆಯರ ಗೌರವಧನ ₹2 ಸಾವಿರ ಹೆಚ್ಚಳಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್ಜೆನ್‌-ಝಿ ಯುವಜನರು ದಾರಿ ತಪ್ಪಿಲ್ಲ, ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ತಲೆಮಾರು: ಅಶ್ಫಕ್ ಕೊಪ್ಪಳಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್ಚುನಾವಣೆಯೊಂದೇ ಬದಲಾವಣೆಯ ಮಾರ್ಗವಲ್ಲ, ಜನಪರ ಪರ್ಯಾಯ ರಾಜಕಾರಣ ರೂಪಿಸಬೇಕು: ನಂದಕುಮಾರ್ ಕುಂಬ್ರಿಉಬ್ಬುಫ್ಯಾಸಿಸಂ ವಿರೋಧವೆಂದರೆ ಕೇವಲ ಬಿಜೆಪಿ ವಿರೋಧವಲ್ಲ; ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟವೂ ಆಗಬೇಕು: ಚಿಂತಕ ಶಿವಸುಂದರ್ಪ್ರಜಾಪ್ರಭುತ್ವದ ಕೊನೆಯ ರಕ್ಷಣಾ ಶಕ್ತಿ ಜನರೇ; ಹಿಂದಿ ಹೇರಿಕೆ ವಿರುದ್ಧವೂ ಹೋರಾಟ ಅಗತ್ಯ: ಡಾ.ರಮೇಶ್ ಬೆಲ್ಲಂಕೊಂಡಕೈಗಾರಿಕೆ, ಮಾಧ್ಯಮದ ಬಳಿಕ ರಾಜಕೀಯ ವ್ಯವಸ್ಥೆಯ ಮೇಲೂ ಕಾರ್ಪೊರೇಟ್ ಹಿಡಿತದ ಆತಂಕ: ಎ.ಬಿ. ಇಬ್ರಾಹಿಂ, ನಿವೃತ್ತ ಐಎಎಸ್ ಅಧಿಕಾರಿಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆಸಂವಾದ ಕಳೆದುಕೊಳ್ಳುತ್ತಿರುವ ಭಾರತಕ್ಕೆ Gen Z ಹೊಸ ರಾಜಕೀಯ ಭಾಷೆ ಕಲಿಸುತ್ತಿದೆ: ರಹಮತ್ ತರೀಕೆರೆಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರಜಿಪಿಎಸ್ ಮೂಲಕ ಬಾಡಿಗೆ ಕಾರಿನ ಎಂಜಿನ್ ಸ್ಥಗಿತಗೊಳಿಸಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೊಲೀಸರುಹಳೆಯ ತಪ್ಪುಗಳನ್ನು ಮತ್ತೆ ಮಾಡಬೇಡಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವಂತೆ ಚಂದ್ರಬಾಬು ನಾಯ್ಡು ಮನವಿಚಮತ್ಕಾರ ತೋರಿಸದಿದ್ದರೆ ನಮಸ್ಕಾರ ಮಾಡಬೇಕಿಲ್ಲ ಎನ್ನುವ ಧೋರಣೆ ಜನರಲ್ಲಿದೆ: ಮೋಹನ್ ಭಾಗವತ್ಡಿಲಿಮಿಟೇಶನ್‌ ವಿಚಾರದಲ್ಲಿ ರಾಜಿ ಇಲ್ಲ: ಕೇಂದ್ರದ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಆಕ್ಷೇಪ, ವಿಶೇಷ ಅಧಿವೇಶನಕ್ಕೂ ಮುನ್ನ ರಾಜಕೀಯ ಚರ್ಚೆ ತೀವ್ರಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಅಸ್ತು: 2029ರ ಚುನಾವಣೆಗೆ ಮಹಿಳಾ ಮೀಸಲಾತಿ ಜಾರಿ ಗುರಿಛತ್ತೀಸ್‌ಗಢದ ನಾರಾಯಣಪುರದಲ್ಲಿ ಮದರ್ ಮೇರಿ ಪ್ರತಿಮೆಗೆ ಬೆಂಕಿ ಹಚ್ಚಲು ಯತ್ನ: ಕ್ರಿಸ್‌ಮಸ್‌ಗೂ ಮುನ್ನ ಚರ್ಚ್‌ಗಳಿಗೆ ಭದ್ರತೆ ಕೋರಿದ ಕ್ರೈಸ್ತ ಸಮುದಾಯಬಿಹಾರ | ಕಬ್ಬು ಕಿತ್ತ ಆರೋಪ: ಹಲ್ಲೆಗೊಳಗಾದ ಇಬ್ಬರು ಮದರಸಾ ವಿದ್ಯಾರ್ಥಿಗಳು ಕೆರೆಯಲ್ಲಿ ಶವವಾಗಿ ಪತ್ತೆ

ಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್

ಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್

ಮಂಗಳೂರು : ಫ್ಯಾಸಿಸಂನಲ್ಲಿ ಉಗ್ರ ರೂಪವೂ ಇದೆ, ಮಂದ ರೂಪವೂ ಇದೆ. ಉಗ್ರ ಫ್ಯಾಸಿಸಂ ಮತ್ತು ಮಂದ ಫ್ಯಾಸಿಸಂ—ಇವೆರಡೂ ನಮಗೆ ಆಯ್ಕೆಯಾಗಬಾರದು. ಮತ್ತೆ ಹೇಳುತ್ತೇನೆ ಎಂದು ಚಿಂತಕ ಶಿವಸುಂದರ್ ಹೇಳಿದರು.

ಯುವಜನ ರಾಜಕಾರಣ: ದಿಕ್ಕು- ಭವಿಷ್ಯ – ಸವಾಲು ಎಂಬ ಆಶಯದೊಂದಿಗೆ ಮಂಗಳೂರಿನ ಬಿಷಪ್ ಜತ್ತಣ್ಣ ಸಭಾಂಗಣದಲ್ಲಿ ಆರಂಭವಾದ ಜನನುಡಿ 2026 ಕಾರ್ಯಕ್ರಮದ ಮೊದಲ ಗೋಷ್ಠಿಯಲ್ಲಿ ಅವರು ಮಾತನಾಡಿದರು.

“ಭವಿಷ್ಯದ ಭಾರತ : ಆರ್ಥಿಕತೆ ಮತ್ತು ಜೀವನೋಪಾಯ” ಗೋಷ್ಠಿಯಲ್ಲಿ ವಿಷಯ ಮಂಡನೆ ಮಾಡಿದ ಅವರು, ಚುನಾವಣೆಯಲ್ಲಿ ಒಂದು ಕ್ಷಣ ಯಾರಿಗೆ ಮತ ಹಾಕುತ್ತೇವೆ ಎಂಬುದು ಬೇರೆ ಪ್ರಶ್ನೆ. ಆದರೆ ಉಳಿದ ಐದು ವರ್ಷಗಳ ಕಾಲ ದುಡಿಯುವ ವರ್ಗದ ಜನರು, ವಿದ್ಯಾರ್ಥಿಗಳು ಮತ್ತು ಕಾರ್ಮಿಕರು ಬಲಿಷ್ಠವಾದ, ಸ್ಪಷ್ಟವಾದ ಸೈದ್ಧಾಂತಿಕ ನೆಲೆಯುಳ್ಳ ಸಂಘಟನೆಗಳನ್ನು ಕಟ್ಟಬೇಕು.
ಹೋರಾಟಗಳನ್ನು ರೂಪಿಸಬೇಕು. ಪರ್ಯಾಯ ರಾಜಕಾರಣವನ್ನು ಬೆಳೆಸಬೇಕು ಎಂದರು.

ಪರ್ಯಾಯ ರಾಜಕಾರಣ ಎಂದರೆ ಇದೇ—ಜನರ ಬೀದಿ ಹೋರಾಟಗಳನ್ನು ಕಟ್ಟುವುದು.
ಇದನ್ನು ಮಾಡಲು ಸಾಧ್ಯವಾದರೆ ಮಾತ್ರ ಭಾರತಕ್ಕೆ ಭವಿಷ್ಯವಿದೆ. ನಮ್ಮ ಸ್ವಾತಂತ್ರ್ಯ, ನಮ್ಮ ಸ್ವಾಭಿಮಾನ ಮತ್ತು ನಮ್ಮ ಸಾರ್ವಭೌಮತೆ ಎಲ್ಲವೂ ಮರಳಿ ಬರಲು ಸಾಧ್ಯ.
ಇಲ್ಲದಿದ್ದರೆ, ಈಗಾಗಲೇ ಅದರ ಪರಿಣಾಮಗಳು ಕಾಣಿಸಿಕೊಳ್ಳುತ್ತಿವೆ ಎಂದರು.

ನವ ಉದಾರವಾದದ ಸಾರಾಂಶದಲ್ಲಿ ಒಂದು ರೀತಿಯ ಸಾಮಾಜಿಕ ಡಾರ್ವಿನಿಸಂ ಇದೆ.
ಡಾರ್ವಿನಿಸಂ ಎಂದರೆ ಏನು? ಬಲಶಾಲಿಯಾಗಿರುವುದು ಉಳಿಯುತ್ತದೆ. ಇದು ನೈಸರ್ಗಿಕ ಆಯ್ಕೆಯ ತತ್ವ. ಪ್ರಕೃತಿ ಯಾರನ್ನು ಹೆಚ್ಚು ಸಮರ್ಥರೆಂದು ಆಯ್ಕೆ ಮಾಡುತ್ತದೆಯೋ ಅವರು ಉಳಿಯುತ್ತಾರೆ ಎಂಬುದು ಅದರ ಮೂಲಭಾವನೆ.
ಬಲಶಾಲಿಗಳಲ್ಲದವರು ಕ್ರಮೇಣ ಅಳಿದುಹೋಗುತ್ತಾರೆ ಎಂಬ ದೃಷ್ಟಿಕೋನ ಇದರಲ್ಲಿ ಅಡಗಿದೆ ಎಂದ ಅವರು, ಮಾರುಕಟ್ಟೆಯ ಮೂಲಭೂತವಾದವೂ ಅದನ್ನೇ ಹೇಳುತ್ತದೆ. ಈ ಮಾರುಕಟ್ಟೆ ವ್ಯವಸ್ಥೆಯಲ್ಲಿ ಬಲಶಾಲಿಗಳು, ಅರ್ಹತೆ ಇರುವವರು ಮಾತ್ರ ಬದುಕುತ್ತಾರೆ; ಉಳಿದವರು ನಾಶವಾಗುವುದು ಸಹಜ ಎಂದು ಅದು ಪ್ರತಿಪಾದಿಸುತ್ತದೆ.
ಈ ಸಾಮಾಜಿಕ ಡಾರ್ವಿನಿಸಂ, ಮಾರುಕಟ್ಟೆ ಮೂಲಭೂತವಾದ ಮತ್ತು ನವ ಉದಾರವಾದಿ ಆರ್ಥಿಕ ವ್ಯವಸ್ಥೆಗಳು ಫ್ಯಾಸಿಸಂನೊಂದಿಗೆ ನೇರ ಸಂಬಂಧ ಹೊಂದಿವೆ.
ಭಾರತದ ಸಂದರ್ಭದಲ್ಲಿ ಇವು ಬ್ರಾಹ್ಮಣವಾದದೊಂದಿಗೆ ಅವಳಿ-ಜವಳಿಯ ಸಂಬಂಧ ಹೊಂದಿವೆ.
ಬ್ರಾಹ್ಮಣವಾದ ಹೇಳುವುದೇನೆಂದರೆ, ನಿಮಗೆ ಅರ್ಹತೆ ಇಲ್ಲ; ನೀವು ಹೀಗೆಯೇ ಬದುಕಬೇಕು; ಸಾಮಾಜಿಕ ಹಂಚಿಕೆ ಮತ್ತು ಸಾಮಾಜಿಕ ನ್ಯಾಯವೆಲ್ಲ ಅರ್ಥಹೀನ. ನೈಸರ್ಗಿಕ ಆಯ್ಕೆಯ ತತ್ವದ ಪ್ರಕಾರ ನಾವು ಶ್ರೇಷ್ಠರು, ಪ್ರಕೃತಿಯೇ ನಮ್ಮನ್ನು ಆಯ್ಕೆ ಮಾಡಿದೆ ಎಂಬ ಭಾವನೆ ಅದರಲ್ಲಿದೆ‌ ಎಂದರು.

ಬ್ರಾಹ್ಮಣವಾದ, ಸಾಮಾಜಿಕ ಡಾರ್ವಿನಿಸಂ ಮತ್ತು ನವ ಉದಾರವಾದ—ಈ ಮೂರೂ ಸೇರಿ ಇಂದು ನಮ್ಮ ದೇಶದಲ್ಲಿ ಫ್ಯಾಸಿಸಂ ಅನ್ನು ಹುಟ್ಟಿಸಿವೆ.
ಕೊನೆಯದಾಗಿ, ಎಲ್ಲವೂ ಇದ್ದೂ ಏನೂ ಇಲ್ಲದಂತೆ ಬದುಕುತ್ತಿರುವ ಈ ದೇಶದಲ್ಲಿ ನಮ್ಮ ಹಕ್ಕು, ಸ್ವಾತಂತ್ರ್ಯ, ಸಮಾನತೆ ಮತ್ತು ಘನತೆಯನ್ನು ಮರಳಿ ಪಡೆಯಬೇಕಾದರೆ ಪರಿಹಾರದ ಮಾರ್ಗವೇನು?
ಚುನಾವಣೆಯಲ್ಲಿ ನಾನು ಸ್ಪರ್ಧಿಸಿ, ಗೆಲ್ಲಲು ಐನೂರು ಕೋಟಿ ರೂಪಾಯಿ ಖರ್ಚು ಮಾಡಿ ಶಾಸಕನಾಗಿ ಬಂದರೆ, ಕಾರ್ಪೊರೇಟ್‌ಗಳನ್ನು ಮೀರಿ ಜನಪರವಾದ ಕಾನೂನುಗಳನ್ನು ರೂಪಿಸುವ ಅವಕಾಶವನ್ನು ಈ ವ್ಯವಸ್ಥೆ ನನಗೆ ನೀಡಿದೆಯೇ ಎಂದು ಪ್ರಶ್ನಿಸಿದರು.

ಪ್ರಜಾಪ್ರಭುತ್ವದ ಮೂಲಸ್ವರೂಪವೇ ಇಂದು ಕಾರ್ಪೊರೇಟೊಕ್ರಸಿ ಆಗಿದೆ.
ಅಪಾರ ಪ್ರಮಾಣದ ಸಂಪತ್ತು ಒಂದೇ ಕಡೆ ಕೇಂದ್ರೀಕೃತವಾಗಿರುವಾಗ, ಈ ದೇಶದ ಮೂವರು ಬಂಡವಾಳಶಾಹಿಗಳ ಕೈಯಲ್ಲಿರುವ ಸಂಪತ್ತಿನ ಮೌಲ್ಯವೇ ಒಂದು ಟ್ರಿಲಿಯನ್ ಡಾಲರ್‌ನಷ್ಟಿದೆ.
ಒಂದು ಟ್ರಿಲಿಯನ್ ಡಾಲರ್ ಎಂದರೆ ಒಂದು ಲಕ್ಷ ಕೋಟಿ ಡಾಲರ್. ಒಂದು ಡಾಲರ್‌ಗೆ 96 ರೂಪಾಯಿ ಎಂದು ಲೆಕ್ಕ ಹಾಕಿದರೆ, ಅದು ಸುಮಾರು 96 ಲಕ್ಷ ಕೋಟಿ ರೂಪಾಯಿ ಆಗುತ್ತದೆ.
ಎಲಾನ್ ಮಸ್ಕ್ ಎಂಬ ವ್ಯಕ್ತಿ, ಯಹೂದಿ ವಿರೋಧಿ ಮತ್ತು ಪ್ಯಾಲೆಸ್ತೀನ್ ಪರ ನಿಲುವು ಹೊಂದಿರುವ ವ್ಯಕ್ತಿಯೊಬ್ಬನನ್ನು ಸೋಲಿಸಲು 450 ಮಿಲಿಯನ್ ಡಾಲರ್ ಖರ್ಚು ಮಾಡುತ್ತಾನೆ.
ಒಬ್ಬ ಅಂಬಾನಿ, ಅದಾನಿ ಅಥವಾ ಟಾಟಾ ಅವರನ್ನು ನಾವು ‘ಜೆಂಟಲ್‌ಮನ್ ಕ್ಯಾಪಿಟಲಿಸ್ಟ್’ ಎಂದು ಕರೆಯುತ್ತೇವೆ. ಇದೇ ಟಾಟಾ ಸಂಸ್ಥೆ ಬಿಜೆಪಿಗೆ 850 ಕೋಟಿ ರೂಪಾಯಿ ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕಾರ್ಪೊರೇಟೊಕ್ರಸಿ ಎಷ್ಟು ಬಲವಾಗಿ ಬೆಳೆದಿದೆ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.

ಇಂತಹ ಕಾಲಘಟ್ಟದಲ್ಲಿ ಒಂದು ಗಂಭೀರವಾದ ಪ್ರಶ್ನೆ ನಮ್ಮ ಮುಂದಿದೆ.
ಫ್ಯಾಸಿಸಂ ಅನ್ನು ಸೋಲಿಸುವುದು ಎಂದರೆ ಕಾಂಗ್ರೆಸ್ ಅನ್ನು ಬೆಂಬಲಿಸುವುದು ಅಥವಾ ಕಾಂಗ್ರೆಸ್ ಮೂಲಕ ಬಿಜೆಪಿಯನ್ನು ಸೋಲಿಸುವುದು ಎಂಬುದು ಬಹಳ ಮೇಲ್ನೋಟದ ತಿಳುವಳಿಕೆ.
ಮತ್ತೆ ಅಂಬೇಡ್ಕರ್ ಅವರ ಬಳಿಗೆ ಮರಳುವುದಾದರೆ, ಯಾರು ನಿಜವಾದ ಫ್ಯಾಸಿಸಂ ವಿರೋಧಿಗಳು?
ಯಾರು ಬಂಡವಾಳಶಾಹಿ ವಿರೋಧಿಗಳೋ, ಯಾರು ಬ್ರಾಹ್ಮಣಶಾಹಿ ವಿರೋಧಿಗಳೋ ಅವರೇ ನಿಜವಾದ ಫ್ಯಾಸಿಸಂ ವಿರೋಧಿಗಳು.
ಕೇವಲ ಕಾಂಗ್ರೆಸ್‌ನ ಬಣ್ಣದ ಪಟ್ಟಿಯನ್ನು ಹಾಕಿಕೊಂಡವರು, ಬೇರೆ ಬಾವುಟವನ್ನು ಹಿಡಿದುಕೊಂಡವರು ನಮ್ಮ ನಿಜವಾದ ಮಿತ್ರರಾಗುವುದಿಲ್ಲ. ಸದಾ ಅಧಿಕಾರದಲ್ಲಿರುವವರ ನೆರಳಿನಲ್ಲಿ ಬದುಕುವವರು, ‘ನಡೆದಾಡುವ ದೇವರು’ಗಳ ನೆರಳಾಗಿರುವವರು ನಮ್ಮ ಫ್ಯಾಸಿಸಂ ವಿರೋಧಿ ಮಿತ್ರರಾಗಲು ಸಾಧ್ಯವಿಲ್ಲ.
ಬಿಜೆಪಿಯನ್ನು ಚುನಾವಣೆಯಲ್ಲಿ ಸೋಲಿಸಲು ಒಂದು ಕ್ಷಣ ಮತ ಹಾಕುವುದು ಬೇರೆ. ಆದರೆ ಉಳಿದಂತೆ ಸ್ವತಂತ್ರವಾದ, ಬಲಿಷ್ಠವಾದ ಮತ್ತು ಶೋಷಿತ ಜನರ ಹಿತಾಸಕ್ತಿಯನ್ನು ಪ್ರತಿನಿಧಿಸುವ ಸಂಘಟನೆಗಳನ್ನು ನಾವು ಕಟ್ಟದೆ ಹೋದರೆ, ಈ ದೇಶದಲ್ಲಿ ಫ್ಯಾಸಿಸಂ ಅನ್ನು ಸೋಲಿಸಲು ಅಥವಾ ಜನರಿಗೆ ನೆಮ್ಮದಿಯ ಬದುಕನ್ನು ಖಾತರಿಪಡಿಸಲು ಸಾಧ್ಯವೇ ಎಂದು ಪ್ರಶ್ನಿಸಿದರು.

ಗೋಷ್ಠಿಯಲ್ಲಿ ಪ್ರತಿಕ್ರಿಯಿಸಿದ ನಂದ ಕುಮಾರ್ ಕುಂಬ್ರಿಉಬ್ಬು, ನಾವು ಈಗಿರುವ ಚೌಕಟ್ಟಿನೊಳಗೇ ಪರಿಹಾರ ಹುಡುಕುತ್ತಾ ಹೋದಾಗ, ಆ ಪರಿಹಾರದ ವ್ಯಾಪ್ತಿ ಮತ್ತು ನಮ್ಮ ಮುಂದಿರುವ ವ್ಯವಸ್ಥೆಯ ಮಿತಿಗಳ ನಡುವೆ ಬಹಳ ದೊಡ್ಡ ವ್ಯತ್ಯಾಸವಿರುತ್ತದೆ. ಆಗ ಹತಾಶೆ ಹುಟ್ಟುತ್ತದೆ. “ಇನ್ನೇನು ಮಾಡುವುದು? ನಮ್ಮಿಂದ ಇನ್ನೇನು ಸಾಧ್ಯ?” ಎಂಬ ಪ್ರಶ್ನೆ ಎದುರಾಗುತ್ತದೆ ಎಂದರು.

ಉದಾಹರಣೆಗೆ, ಜಂತರ್ ಮಂತರ್‌ನಲ್ಲಿ ನಡೆದ ಹೋರಾಟವನ್ನು ತೆಗೆದುಕೊಳ್ಳಿ. ನಮ್ಮ ಹೋರಾಟ ಸಂವಿಧಾನಬದ್ಧವಾಗಿದೆಯೇ ಎಂದು ಕೇಳಲಾಗುತ್ತದೆ. ಪ್ರತಿಭಟನೆ ಮಾಡಬೇಕಾದರೆ ಅನುಮತಿ ಪಡೆಯಬೇಕು, ಸಮಾವೇಶ ನಡೆಸಬೇಕಾದರೆ ಅನುಮತಿ ಪಡೆಯಬೇಕು ಎಂದು ನಿಯಮಗಳನ್ನು ರೂಪಿಸಲಾಗಿದೆ. ಪ್ರತಿಭಟನೆಗೆ ಅನುಮತಿ ನೀಡಬೇಕಾದ ಅಧಿಕಾರವೂ ಅವರ ಕೈಯಲ್ಲಿದೆ. ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ಅವರು ನಡೆದುಕೊಂಡಾಗ, ನಾವು ಅದನ್ನು ಸಂವಿಧಾನಬಾಹಿರ ಎಂದು ಪ್ರಶ್ನಿಸುತ್ತೇವೆ. ಆದರೆ ನಮ್ಮ ಪ್ರತಿಭಟನೆ, ನಮ್ಮ ಪ್ರತಿರೋಧವನ್ನು ವ್ಯಕ್ತಪಡಿಸಲು ಅವರ ಅನುಮತಿಯನ್ನೇ ಪಡೆಯಬೇಕು ಎನ್ನುವ ವ್ಯವಸ್ಥೆ ಎಷ್ಟು ಸಮಂಜಸ ಎಂದು ಪ್ರಶ್ನಿಸಿದರು.

ಪ್ರತಿಭಟಿಸುವುದು ನಮ್ಮ ಪ್ರಜಾತಾಂತ್ರಿಕ ಹಕ್ಕು. ಅಗತ್ಯವಿದ್ದಾಗ ನಾವು ಆ ಹಕ್ಕನ್ನು ಚಲಾಯಿಸುತ್ತೇವೆ. ಅದು ನಮ್ಮ ಹಕ್ಕು. ಅದನ್ನು ತಡೆಯುವ ಹಕ್ಕು ಅಥವಾ ಅಧಿಕಾರ ಯಾರಿಗೂ ಇಲ್ಲ ಎಂದ ಅವರು, ಈ ಮನೋಭಾವದಿಂದಲೇ ಜಂತರ್ ಮಂತರ್ ಹೋರಾಟ ರೂಪುಗೊಂಡಿತು. ಇದಕ್ಕೂ ಹಿಂದಿನ ಹೋರಾಟಗಳನ್ನು ನೋಡಿದರೂ ಇದೇ ರೀತಿಯ ಸಂಗತಿಗಳು ಕಾಣಿಸುತ್ತವೆ ಎಂದರು.

ಪ್ರತಿಕ್ರಿಯಿಸಿದ ಅಶ್ಫಕ್ ಎಂ.ಜಿ. ಕೊಪ್ಪಳ ಅವರು ಮಾತನಾಡಿ, ಯುವಕರ ಕಷ್ಟಗಳನ್ನು ಯುವಕರೇ ಅರ್ಥ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ. ನಮ್ಮ ಆಶೋತ್ತರಗಳನ್ನು ಈಡೇರಿಸಿ ಅಂತ ಒತ್ತಾಯಿಸಲು ಬೀದಿಗಿಳಿಯಬೇಕಾಗಿದೆ ಎಂದರು.

ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಲೇಖಕಿ ಡಾ. ಸಬಿತಾ ಬನ್ನಾಡಿ ಅವರು, ಎಲ್ಲವನ್ನೂ ಸಹಜಗೊಳಿಸಲಾಗುತ್ತಿದೆ. ಸರ್ವಾಧಿಕಾರವನ್ನೂ ಸಹ ಸಹಜಗೊಳಿಸಲಾಗುತ್ತಿದೆ. ಯುವಜನತೆಗೆ ಆಯ್ಕೆಯನ್ನೂ ಕೊಡುತ್ತಿಲ್ಲ. ಬಂಡವಾಳ ತರುವ ಮಾತನ್ನೇ ಆಡುತ್ತಿದ್ದಾರೆ. ಬಂಡವಾಳ ಹುಟ್ಟಿಸುವ ಮಾತು ಆಡುತ್ತಿಲ್ಲ ಎಂದು ವಿಷಾದಿಸಿದರು.

ರಿಜ್ವಾಮ್ ಹರೇಕಳ ನಿರೂಪಿಸಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು