ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
12 ದಿನಗಳ ಅಹೋರಾತ್ರಿ ಹೋರಾಟಕ್ಕೆ ಮಣಿದ ಸರ್ಕಾರ: ಆಶಾ ಕಾರ್ಯಕರ್ತೆಯರ ಗೌರವಧನ ₹2 ಸಾವಿರ ಹೆಚ್ಚಳಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್ಜೆನ್‌-ಝಿ ಯುವಜನರು ದಾರಿ ತಪ್ಪಿಲ್ಲ, ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ತಲೆಮಾರು: ಅಶ್ಫಕ್ ಕೊಪ್ಪಳಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್ಚುನಾವಣೆಯೊಂದೇ ಬದಲಾವಣೆಯ ಮಾರ್ಗವಲ್ಲ, ಜನಪರ ಪರ್ಯಾಯ ರಾಜಕಾರಣ ರೂಪಿಸಬೇಕು: ನಂದಕುಮಾರ್ ಕುಂಬ್ರಿಉಬ್ಬುಫ್ಯಾಸಿಸಂ ವಿರೋಧವೆಂದರೆ ಕೇವಲ ಬಿಜೆಪಿ ವಿರೋಧವಲ್ಲ; ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟವೂ ಆಗಬೇಕು: ಚಿಂತಕ ಶಿವಸುಂದರ್ಪ್ರಜಾಪ್ರಭುತ್ವದ ಕೊನೆಯ ರಕ್ಷಣಾ ಶಕ್ತಿ ಜನರೇ; ಹಿಂದಿ ಹೇರಿಕೆ ವಿರುದ್ಧವೂ ಹೋರಾಟ ಅಗತ್ಯ: ಡಾ.ರಮೇಶ್ ಬೆಲ್ಲಂಕೊಂಡಕೈಗಾರಿಕೆ, ಮಾಧ್ಯಮದ ಬಳಿಕ ರಾಜಕೀಯ ವ್ಯವಸ್ಥೆಯ ಮೇಲೂ ಕಾರ್ಪೊರೇಟ್ ಹಿಡಿತದ ಆತಂಕ: ಎ.ಬಿ. ಇಬ್ರಾಹಿಂ, ನಿವೃತ್ತ ಐಎಎಸ್ ಅಧಿಕಾರಿಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆಸಂವಾದ ಕಳೆದುಕೊಳ್ಳುತ್ತಿರುವ ಭಾರತಕ್ಕೆ Gen Z ಹೊಸ ರಾಜಕೀಯ ಭಾಷೆ ಕಲಿಸುತ್ತಿದೆ: ರಹಮತ್ ತರೀಕೆರೆಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರಜಿಪಿಎಸ್ ಮೂಲಕ ಬಾಡಿಗೆ ಕಾರಿನ ಎಂಜಿನ್ ಸ್ಥಗಿತಗೊಳಿಸಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೊಲೀಸರುಹಳೆಯ ತಪ್ಪುಗಳನ್ನು ಮತ್ತೆ ಮಾಡಬೇಡಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವಂತೆ ಚಂದ್ರಬಾಬು ನಾಯ್ಡು ಮನವಿಚಮತ್ಕಾರ ತೋರಿಸದಿದ್ದರೆ ನಮಸ್ಕಾರ ಮಾಡಬೇಕಿಲ್ಲ ಎನ್ನುವ ಧೋರಣೆ ಜನರಲ್ಲಿದೆ: ಮೋಹನ್ ಭಾಗವತ್ಡಿಲಿಮಿಟೇಶನ್‌ ವಿಚಾರದಲ್ಲಿ ರಾಜಿ ಇಲ್ಲ: ಕೇಂದ್ರದ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಆಕ್ಷೇಪ, ವಿಶೇಷ ಅಧಿವೇಶನಕ್ಕೂ ಮುನ್ನ ರಾಜಕೀಯ ಚರ್ಚೆ ತೀವ್ರಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಅಸ್ತು: 2029ರ ಚುನಾವಣೆಗೆ ಮಹಿಳಾ ಮೀಸಲಾತಿ ಜಾರಿ ಗುರಿಛತ್ತೀಸ್‌ಗಢದ ನಾರಾಯಣಪುರದಲ್ಲಿ ಮದರ್ ಮೇರಿ ಪ್ರತಿಮೆಗೆ ಬೆಂಕಿ ಹಚ್ಚಲು ಯತ್ನ: ಕ್ರಿಸ್‌ಮಸ್‌ಗೂ ಮುನ್ನ ಚರ್ಚ್‌ಗಳಿಗೆ ಭದ್ರತೆ ಕೋರಿದ ಕ್ರೈಸ್ತ ಸಮುದಾಯಬಿಹಾರ | ಕಬ್ಬು ಕಿತ್ತ ಆರೋಪ: ಹಲ್ಲೆಗೊಳಗಾದ ಇಬ್ಬರು ಮದರಸಾ ವಿದ್ಯಾರ್ಥಿಗಳು ಕೆರೆಯಲ್ಲಿ ಶವವಾಗಿ ಪತ್ತೆ

ಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡ

ಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡ

ಮಂಗಳೂರು : ಬಡತನ ಮತ್ತು ಸಾಮಾಜಿಕ ದಬ್ಬಾಳಿಕೆಯಿಲ್ಲದೆ ಪ್ರತಿಯೊಬ್ಬರೂ ಕರ್ನಾಟಕ ಹಾಗೂ ಭಾರತವನ್ನು ಕಟ್ಟುವುದೆ ನಮ್ಮ ಗುರಿಯಾಗಬೇಕಿದೆ, ಪ್ರಜಾಪ್ರಭುತ್ವವನ್ನು ಉಳಿಸಲು ನಾಗರಿಕರು ಮುಂದೆ ಬರಬೇಕೆಂದು ‘ಕನ್ನಡ ಭಾರತೀಯರು’ (‘ಕನ್ನಡ ಇಂಡಿಯನ್ಸ್ ಫಾರ್ ಜಸ್ಟಿಸ್ ಫಾರ್ ಆಲ್ ಇಂಡಿಯನ್ಸ್’) ಸಂಘಟನೆಯ ಸಂಚಾಲಕ ರಮೇಶ್ ಬೆಲ್ಲಂಕೊಂಡ ಕರೆ ನೀಡಿದ್ದಾರೆ.

ಮಾತನಾಡಿದ ಅವರು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಸರಣಿ ಪೆಟ್ಟುಗಳು ಬೀಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಎಸ್‌ಐಆರ್ (SIR) ಕುರಿತು ತಮ್ಮ ಸಂಘಟನೆಯು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಕಿರುಪುಸ್ತಕ ಹಾಗೂ ಕರಪತ್ರಗಳನ್ನು ಪ್ರಕಟಿಸಿ ಹಂಚಿದ್ದು, ಪ್ರಜಾಪ್ರಭುತ್ವದ ರಕ್ಷಣೆಗೆ ಜನರು ಇವುಗಳನ್ನು ಓದಿ ತಮ್ಮ ಕೊಡುಗೆ ನೀಡಬೇಕೆಂದು ಮನವಿ ಮಾಡಿದರು. ಚುನಾವಣಾ ಪ್ರಕ್ರಿಯೆ, ಚುನಾವಣಾ ಆಯೋಗ, ಒಕ್ಕೂಟ ಸರ್ಕಾರ ಹಾಗೂ ಆರ್‌ಎಸ್‌ಎಸ್–ಬಿಜೆಪಿ ಧೋರಣೆಗಳ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಪ್ರಜಾಪ್ರಭುತ್ವವನ್ನು ಕಾಪಾಡುವ ಕೊನೆಯ ರಕ್ಷಣಾ ರೇಖೆ ದೇಶದ ಜನರೇ ಆಗಿದ್ದಾರೆ ಎಂದರು.

ಹಿಂದಿ ಹೇರಿಕೆ ಮತ್ತು ಭಾಷಾ ತಾರತಮ್ಯದ ವಿಚಾರವನ್ನು ಪ್ರಸ್ತಾಪಿಸಿದ ರಮೇಶ್ ಬೆಲ್ಲಂಕೊಂಡ, ಕನ್ನಡ ಮತ್ತು ಕನ್ನಡಿಗರನ್ನು ಸಮಾನವಾಗಿ ಕಾಣದೆ ಎರಡನೇ ದರ್ಜೆಯ ನಾಗರಿಕರಂತೆ ನಡೆಸಿಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ರಾಷ್ಟ್ರೀಕೃತ ಬ್ಯಾಂಕ್‌ಗಳು, ಬೆಂಗಳೂರು ವಿಮಾನ ನಿಲ್ದಾಣದ ಭದ್ರತಾ ನೇಮಕಾತಿಗಳು, ಯುಪಿಎಸ್‌ಸಿ, ಎಸ್‌ಎಸ್‌ಸಿ, ರೈಲ್ವೆ, ಬ್ಯಾಂಕಿಂಗ್ ಹಾಗೂ ಕೇಂದ್ರ ವಿಶ್ವವಿದ್ಯಾಲಯಗಳ ಪರೀಕ್ಷೆಗಳಲ್ಲಿ ಕನ್ನಡಕ್ಕೆ ಸೂಕ್ತ ಅವಕಾಶ ಸಿಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಕಲಬುರಗಿ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರವೇಶ ಪ್ರಕಟಣೆಯಲ್ಲಿ ಕನ್ನಡದ ಆಯ್ಕೆ ಇಲ್ಲದಿದ್ದುದನ್ನು ಅವರು ಉದಾಹರಣೆಯಾಗಿ ನೀಡಿದರು.

ಈ ಪರಿಸ್ಥಿತಿಗೆ ಕಾಂಗ್ರೆಸ್ 80 ವರ್ಷಗಳಿಂದ ಕಾರಣವಾಗಿದ್ದರೆ, ಬಿಜೆಪಿ ಅದನ್ನು ವೇಗವಾಗಿ ಮುಂದುವರಿಸುತ್ತಿದೆ ಎಂದು ಟೀಕಿಸಿದರು. ರಾಜ್ಯ ಶಿಕ್ಷಣ ನೀತಿ ಸಮಿತಿಯ ವರದಿ ಬಂದರೂ ಅದನ್ನು ಬಹಿರಂಗಪಡಿಸದ ಮತ್ತು ಜಾರಿಗೊಳಿಸದ ರಾಜ್ಯ ಸರ್ಕಾರದ ಧೋರಣೆಯನ್ನೂ ಅವರು ಪ್ರಶ್ನಿಸಿದರು. ಹಂಪಿ ಕನ್ನಡ ವಿಶ್ವವಿದ್ಯಾಲಯಕ್ಕೆ ಸರಿಯಾದ ಅನುದಾನ ನೀಡದೆ ವಿದ್ಯುತ್ ಬಿಲ್ ಪಾವತಿಸಲೂ ಪರದಾಡುವ ಸ್ಥಿತಿ ತಂದಿರುವುದನ್ನು ಖಂಡಿಸಿದರು.

ಅವೈಜ್ಞಾನಿಕ ಚಿಂತನೆಗಳ ವಿರುದ್ಧ ನಿಂತು ವೈಜ್ಞಾನಿಕ ಮನೋಭಾವವನ್ನು ಕಾಪಾಡಿಕೊಳ್ಳಬೇಕು ಹಾಗೂ ಎಲ್ಲರಿಗೂ ಗುಣಮಟ್ಟದ ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ದೊರೆಯುವಂತಾಗಬೇಕು ಎಂದು ಆಗ್ರಹಿಸಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು