ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
12 ದಿನಗಳ ಅಹೋರಾತ್ರಿ ಹೋರಾಟಕ್ಕೆ ಮಣಿದ ಸರ್ಕಾರ: ಆಶಾ ಕಾರ್ಯಕರ್ತೆಯರ ಗೌರವಧನ ₹2 ಸಾವಿರ ಹೆಚ್ಚಳಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್ಜೆನ್‌-ಝಿ ಯುವಜನರು ದಾರಿ ತಪ್ಪಿಲ್ಲ, ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ತಲೆಮಾರು: ಅಶ್ಫಕ್ ಕೊಪ್ಪಳಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್ಚುನಾವಣೆಯೊಂದೇ ಬದಲಾವಣೆಯ ಮಾರ್ಗವಲ್ಲ, ಜನಪರ ಪರ್ಯಾಯ ರಾಜಕಾರಣ ರೂಪಿಸಬೇಕು: ನಂದಕುಮಾರ್ ಕುಂಬ್ರಿಉಬ್ಬುಫ್ಯಾಸಿಸಂ ವಿರೋಧವೆಂದರೆ ಕೇವಲ ಬಿಜೆಪಿ ವಿರೋಧವಲ್ಲ; ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟವೂ ಆಗಬೇಕು: ಚಿಂತಕ ಶಿವಸುಂದರ್ಪ್ರಜಾಪ್ರಭುತ್ವದ ಕೊನೆಯ ರಕ್ಷಣಾ ಶಕ್ತಿ ಜನರೇ; ಹಿಂದಿ ಹೇರಿಕೆ ವಿರುದ್ಧವೂ ಹೋರಾಟ ಅಗತ್ಯ: ಡಾ.ರಮೇಶ್ ಬೆಲ್ಲಂಕೊಂಡಕೈಗಾರಿಕೆ, ಮಾಧ್ಯಮದ ಬಳಿಕ ರಾಜಕೀಯ ವ್ಯವಸ್ಥೆಯ ಮೇಲೂ ಕಾರ್ಪೊರೇಟ್ ಹಿಡಿತದ ಆತಂಕ: ಎ.ಬಿ. ಇಬ್ರಾಹಿಂ, ನಿವೃತ್ತ ಐಎಎಸ್ ಅಧಿಕಾರಿಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆಸಂವಾದ ಕಳೆದುಕೊಳ್ಳುತ್ತಿರುವ ಭಾರತಕ್ಕೆ Gen Z ಹೊಸ ರಾಜಕೀಯ ಭಾಷೆ ಕಲಿಸುತ್ತಿದೆ: ರಹಮತ್ ತರೀಕೆರೆಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರಜಿಪಿಎಸ್ ಮೂಲಕ ಬಾಡಿಗೆ ಕಾರಿನ ಎಂಜಿನ್ ಸ್ಥಗಿತಗೊಳಿಸಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೊಲೀಸರುಹಳೆಯ ತಪ್ಪುಗಳನ್ನು ಮತ್ತೆ ಮಾಡಬೇಡಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವಂತೆ ಚಂದ್ರಬಾಬು ನಾಯ್ಡು ಮನವಿಚಮತ್ಕಾರ ತೋರಿಸದಿದ್ದರೆ ನಮಸ್ಕಾರ ಮಾಡಬೇಕಿಲ್ಲ ಎನ್ನುವ ಧೋರಣೆ ಜನರಲ್ಲಿದೆ: ಮೋಹನ್ ಭಾಗವತ್ಡಿಲಿಮಿಟೇಶನ್‌ ವಿಚಾರದಲ್ಲಿ ರಾಜಿ ಇಲ್ಲ: ಕೇಂದ್ರದ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಆಕ್ಷೇಪ, ವಿಶೇಷ ಅಧಿವೇಶನಕ್ಕೂ ಮುನ್ನ ರಾಜಕೀಯ ಚರ್ಚೆ ತೀವ್ರಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಅಸ್ತು: 2029ರ ಚುನಾವಣೆಗೆ ಮಹಿಳಾ ಮೀಸಲಾತಿ ಜಾರಿ ಗುರಿಛತ್ತೀಸ್‌ಗಢದ ನಾರಾಯಣಪುರದಲ್ಲಿ ಮದರ್ ಮೇರಿ ಪ್ರತಿಮೆಗೆ ಬೆಂಕಿ ಹಚ್ಚಲು ಯತ್ನ: ಕ್ರಿಸ್‌ಮಸ್‌ಗೂ ಮುನ್ನ ಚರ್ಚ್‌ಗಳಿಗೆ ಭದ್ರತೆ ಕೋರಿದ ಕ್ರೈಸ್ತ ಸಮುದಾಯಬಿಹಾರ | ಕಬ್ಬು ಕಿತ್ತ ಆರೋಪ: ಹಲ್ಲೆಗೊಳಗಾದ ಇಬ್ಬರು ಮದರಸಾ ವಿದ್ಯಾರ್ಥಿಗಳು ಕೆರೆಯಲ್ಲಿ ಶವವಾಗಿ ಪತ್ತೆ

ಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್

ಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್

ಮಂಗಳೂರು : ವೈಜ್ಞಾನಿಕ ಮನೋಭಾವದ ಕುರಿತು ವಿದ್ಯಾರ್ಥಿಗಳ ಆಹ್ವಾನದ ಮೇರೆಗೆ ನೀಡಬೇಕಿದ್ದ ಸಂವಾದದ ಆಹ್ವಾನವನ್ನು ಹಿಂಪಡೆದ ಘಟನೆಯನ್ನು ಹಿರಿಯ ವಿಚಾರವಾದಿ ಪ್ರೊ. ನರೇಂದ್ರ ನಾಯಕ್ ಪ್ರಸ್ತಾಪಿಸಿದ್ದು, ಧ್ವನಿ ಹತ್ತಿಕ್ಕುವ ಪ್ರಯತ್ನ ನಡೆದರೂ ಪ್ರತಿರೋಧದ ವಿಚಾರ ಸಾಯುವುದಿಲ್ಲ ಎಂದು ಹೇಳಿದ್ದಾರೆ.

ಉದ್ಘಾಟನಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಇನ್‌ಸ್ಟಿಟ್ಯೂಟ್ ಆಫ್ ಮೈಕ್ರೋಬಯಾಲಜಿ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಸೈನ್ಸ್ ಹಾಗೂ ಐಐಟಿ ಸೇರಿದಂತೆ ಹಲವು ಪ್ರತಿಷ್ಠಿತ ಸಂಸ್ಥೆಗಳಲ್ಲಿ ವೈಜ್ಞಾನಿಕ ಮನೋಭಾವದ ಕುರಿತು ಮಾತನಾಡಿದ ಅನುಭವವನ್ನು ಹಂಚಿಕೊಂಡರು. 2013ರಲ್ಲಿ ಐಐಟಿ ಮದ್ರಾಸ್‌ನಲ್ಲಿ ನೀಡಿದ ‘My Scientific Temper’ ಭಾಷಣವನ್ನು ಉಲ್ಲೇಖಿಸಿದ ಅವರು, ಕಳೆದ ಜುಲೈ 6ರಂದು ಅಲ್ಲಿಂದ ‘ಶಾಸ್ತ್ರ’ (Shastra) ಕಾರ್ಯಕ್ರಮದ ‘ಫೈರ್‌ಸೈಡ್ ಚಾಟ್’ (Fireside Chat) ಸಂವಾದಕ್ಕೆ ಆಹ್ವಾನ ಬಂದಿತ್ತು ಎಂದು ತಿಳಿಸಿದರು.

ಆಡಳಿತ ವರ್ಗಕ್ಕಿಂತ ಹೆಚ್ಚಾಗಿ ವಿದ್ಯಾರ್ಥಿಗಳಿಂದ, ಅದರಲ್ಲೂ ಹೊಸ ತಲೆಮಾರಿನ ಜೆನ್-ಜಿ ಯುವಜನರಿಂದ ಬಂದ ಆಹ್ವಾನವು ತಮಗೆ ಸಂತೋಷ ನೀಡಿತ್ತು ಎಂದ ಅವರು, ಕಳೆದ 50 ವರ್ಷಗಳಿಂದ ಯುವಜನರ ನಡುವೆಯೇ ತಾವು ಕಾರ್ಯನಿರ್ವಹಿಸುತ್ತಿರುವುದಾಗಿ ಹೇಳಿದರು. ಸುಮಾರು ಒಂದು ಲಕ್ಷ ಜನರು ಪಾಲ್ಗೊಳ್ಳುವ ನಿರೀಕ್ಷೆಯಿದ್ದ ಆ ಕಾರ್ಯಕ್ರಮದ ದಿನಾಂಕವನ್ನು ನವೆಂಬರ್ 11ಕ್ಕೆ ಮುಂದೂಡಲಾಗಿದೆ ಎಂಬ ಮಾಹಿತಿ ಬಂದ ಬಳಿಕ ದಿನಾಂಕ ವಿಚಾರಿಸಿದ್ದಕ್ಕೆ, “ಹತ್ತು ಜನ ಭಾಷಣಕಾರರ ಕಾರಣದಿಂದಾಗಿ ನಿಮ್ಮ ಆಹ್ವಾನವನ್ನು ಹಿಂಪಡೆಯಲಾಗಿದೆ” ಎಂಬ ಉತ್ತರ ಬಂದಿತು ಎಂದು ವಿವರಿಸಿದರು.

ಆಹ್ವಾನ ನೀಡಿ ನಂತರ ಹಿಂಪಡೆದ ಈ ಕ್ರಮವನ್ನು ಏನೆಂದು ಕರೆಯಬೇಕೆಂದು ತಿಳಿಯದಿದ್ದರೂ, ಇದು ಉದ್ದೇಶಪೂರ್ವಕ ಮತ್ತು ಮೇಲಿನಿಂದ ಬಂದ ನಿರ್ಧಾರ ಎಂಬುದು ಸ್ಪಷ್ಟವಾಗಿದೆ ಎಂದು ಪ್ರೊ. ನರೇಂದ್ರ ನಾಯಕ್ ಅಭಿಪ್ರಾಯಪಟ್ಟರು. ಇದೇ ಸಂದರ್ಭದಲ್ಲಿ, 2027ರ ಜನವರಿ 5ರಂದು ಸಂಗಾತಿಗಳು ಇದೇ ವಿಷಯದ ಕುರಿತು ಮತ್ತೊಂದು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದಾರೆ ಎಂದು ತಿಳಿಸಿದ ಅವರು, ಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ ಎಂದು ಹೇಳಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು