ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆಸಂವಾದ ಕಳೆದುಕೊಳ್ಳುತ್ತಿರುವ ಭಾರತಕ್ಕೆ Gen Z ಹೊಸ ರಾಜಕೀಯ ಭಾಷೆ ಕಲಿಸುತ್ತಿದೆ: ರಹಮತ್ ತರೀಕೆರೆಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರಜಿಪಿಎಸ್ ಮೂಲಕ ಬಾಡಿಗೆ ಕಾರಿನ ಎಂಜಿನ್ ಸ್ಥಗಿತಗೊಳಿಸಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೊಲೀಸರುಹಳೆಯ ತಪ್ಪುಗಳನ್ನು ಮತ್ತೆ ಮಾಡಬೇಡಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವಂತೆ ಚಂದ್ರಬಾಬು ನಾಯ್ಡು ಮನವಿಚಮತ್ಕಾರ ತೋರಿಸದಿದ್ದರೆ ನಮಸ್ಕಾರ ಮಾಡಬೇಕಿಲ್ಲ ಎನ್ನುವ ಧೋರಣೆ ಜನರಲ್ಲಿದೆ: ಮೋಹನ್ ಭಾಗವತ್ಡಿಲಿಮಿಟೇಶನ್‌ ವಿಚಾರದಲ್ಲಿ ರಾಜಿ ಇಲ್ಲ: ಕೇಂದ್ರದ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಆಕ್ಷೇಪ, ವಿಶೇಷ ಅಧಿವೇಶನಕ್ಕೂ ಮುನ್ನ ರಾಜಕೀಯ ಚರ್ಚೆ ತೀವ್ರಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಅಸ್ತು: 2029ರ ಚುನಾವಣೆಗೆ ಮಹಿಳಾ ಮೀಸಲಾತಿ ಜಾರಿ ಗುರಿಛತ್ತೀಸ್‌ಗಢದ ನಾರಾಯಣಪುರದಲ್ಲಿ ಮದರ್ ಮೇರಿ ಪ್ರತಿಮೆಗೆ ಬೆಂಕಿ ಹಚ್ಚಲು ಯತ್ನ: ಕ್ರಿಸ್‌ಮಸ್‌ಗೂ ಮುನ್ನ ಚರ್ಚ್‌ಗಳಿಗೆ ಭದ್ರತೆ ಕೋರಿದ ಕ್ರೈಸ್ತ ಸಮುದಾಯಬಿಹಾರ | ಕಬ್ಬು ಕಿತ್ತ ಆರೋಪ: ಹಲ್ಲೆಗೊಳಗಾದ ಇಬ್ಬರು ಮದರಸಾ ವಿದ್ಯಾರ್ಥಿಗಳು ಕೆರೆಯಲ್ಲಿ ಶವವಾಗಿ ಪತ್ತೆಜನನುಡಿ 2026 LIVE: ಮಂಗಳೂರಿನಲ್ಲಿ ಎರಡು ದಿನಗಳ ಚಿಂತನ ಮಂಥನ ಇಂದು ಆರಂಭ; ಪ್ರತಿ ಅಪ್‌ಡೇಟ್‌ಗೆ ‘PEEPAL ‘ ನೋಡಿಬೆಲೆ ಏರಿಕೆಯ ಬಿಸಿ: ಸಾಮಾನ್ಯ ಜನರ ಬದುಕಿಗೆ ಆರ್ಥಿಕ ಸಂಕಷ್ಟದ ಹೊಡೆತ!ಊರ ಬಯಲಿನ ನಡುವೆ : ಈಗ ಅಂಗಳವೂ ಇಲ್ಲ, ಆಡುವವರೂ ಇಲ್ಲ!ಆಶಾ ಕಾರ್ಯಕರ್ತೆಯರ ಹೋರಾಟ: 10 ದಿನ ವಿಧಾನಸೌಧಕ್ಕೆ ರಜೆ ಘೋಷಿಸಿ; ಆಗ್ರಹ!ಸಂಪುಟ ಪುನಾರಚನೆ ಚರ್ಚೆ ಮತ್ತೆ ಮುನ್ನೆಲೆಗೆ: ಸಚಿವ ಸ್ಥಾನದ ಆಕಾಂಕ್ಷಿಗಳಿಂದ ವರಿಷ್ಠರ ಮೇಲೆ ಒತ್ತಡ; ದೆಹಲಿಗೆ ಹೊರಟು ಸಿಎಂ ಡಿಕೆಶಿಕ್ಷೇತ್ರ ಮರುವಿಂಗಡಣೆಗೆ ಡಿಎಂಕೆ ಬೆಂಬಲ!; ರಾಜ್ಯಕ್ಕೆ ರಾಜಕೀಯ ಪ್ರಾತಿನಿಧ್ಯ ಸಿಗುವುದರ ಬಗ್ಗೆ ನಿರೀಕ್ಷೆಸಂವಿಧಾನಾತ್ಮಕ ಪ್ರಜಾಪ್ರಭುತ್ವದಲ್ಲಿ ಭಿನ್ನಾಭಿಪ್ರಾಯ ದೌರ್ಬಲ್ಯವಲ್ಲ: ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ಪತಿ ವಿರುದ್ಧ ಪೊಲೀಸ್ ದೂರು ನೀಡಿಲ್ಲವೆಂಬ ಕಾರಣಕ್ಕೆ ಪತ್ನಿಯ ದೌರ್ಜನ್ಯದ ಆರೋಪ ಸುಳ್ಳಾಗುವುದಿಲ್ಲ: ಕರ್ನಾಟಕ ಹೈಕೋರ್ಟ್ಹೆದ್ದಾರಿ ವಿಸ್ತರಣೆಗೆ 400 ವರ್ಷಗಳ ಪೀರ್ ಬಾಬಾ ದರ್ಗಾ ತೆರವು ವಿರೋಧಿಸಿ ಹಿಂದೂ–ಮುಸ್ಲಿಮರಿಂದ ಒಗ್ಗಟ್ಟು ಪ್ರದರ್ಶನಪತ್ರಕರ್ತರೆಂದು ಗುರುತಿಸಿಕೊಳ್ಳಲು ಅರ್ಹತೆಗಳೇನು? ಮಾನ್ಯತೆ ಪಡೆದ ಪತ್ರಕರ್ತರಿಗೆ ಮಾತ್ರ ರಕ್ಷಣೆ ನೀಡಬೇಕೇ? ಸುಪ್ರೀಂ ಕೋರ್ಟ್ ಪ್ರಶ್ನೆ

ಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆ

ಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆ

ಜನನುಡಿ 2026ರ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಹಿರಿಯ ಚಿಂತಕರಾದ ರಹಮತ್ ತರೀಕೆರೆ ಅವರು ಬೆಂಗಳೂರಿನಲ್ಲಿ ಚಳಿ, ಮಳೆಯನ್ನೂ ಲೆಕ್ಕಿಸದೆ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಹೋರಾಟ ನಡೆಸುತ್ತಿರುವ ಆಶಾ ಕಾರ್ಯಕರ್ತೆಯರಿಗೆ ತಮ್ಮ ಭಾಷಣವನ್ನು ಅರ್ಪಿಸಿದ ಅವರು, ಅವರ ಬೇಡಿಕೆಗಳು ಈಡೇರಬೇಕು ಎಂದು ಆಶಿಸಿದರು. ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಆಳುವ ವರ್ಗದ ಸಂವೇದನಾರಹಿತ ನಡೆಗಳ ಬಗ್ಗೆಯೂ ವಿಷಾದ ವ್ಯಕ್ತಪಡಿಸಿದರು.

ವರ್ಷಗಳ ವಿರಾಮದ ನಂತರ ಜನನುಡಿ ಕಾರ್ಯಕ್ರಮ ಮತ್ತೆ ನಡೆಯುತ್ತಿರುವುದು ಸಂತಸದ ಸಂಗತಿ. ಇದು ಕೇವಲ ಸಾಹಿತ್ಯಿಕ ಕಾರ್ಯಕ್ರಮವಲ್ಲ. ಸಾಹಿತ್ಯದ ಜೊತೆಗೆ ರಾಜಕಾರಣ, ಸಮಾಜ, ದೇಶ, ಸಂಘಟನೆಗಳು ಮತ್ತು ಸಮಕಾಲೀನ ಸವಾಲುಗಳ ಕುರಿತು ಚರ್ಚಿಸುವ ಮಹತ್ವದ ವೇದಿಕೆಯಾಗಿದೆ ಎಂದು ಹೇಳಿದರು.

ಕೊರೋನಾ ಕಾಲದ ಸಂಕಷ್ಟಗಳ ನಂತರ ರೈತ ಹೋರಾಟ ಮತ್ತು ದೆಹಲಿಯ ಜಂತರ್ ಮಂತರ್‌ನಲ್ಲಿ ಯುವಜನರು ನಡೆಸಿದ ಹೋರಾಟಗಳು ಹೊಸ ಭರವಸೆಯನ್ನು ಮೂಡಿಸಿವೆ. ಇಂದಿನ ಯುವಜನರಲ್ಲಿ ಕಂಡುಬರುತ್ತಿರುವ ರಾಜಕೀಯ ಪ್ರಜ್ಞೆ ಮತ್ತು ಹೋರಾಟದ ಚೈತನ್ಯವನ್ನು ಹಿರಿಯ ತಲೆಮಾರು ಅರ್ಥಮಾಡಿಕೊಳ್ಳಬೇಕು. ಅವರಿಂದ ಕಲಿಯಬೇಕು ಮತ್ತು ಅವರೊಂದಿಗೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಸಂವಾದವೇ ಪ್ರಜಾಪ್ರಭುತ್ವದ ಆಧಾರ

ವಾದ ಮತ್ತು ವಾಗ್ವಾದಗಳಿಗಿಂತ ಸಂವಾದ ಭಿನ್ನವಾದುದು. ನಮ್ಮದೇ ಅಭಿಪ್ರಾಯ ಶ್ರೇಷ್ಠ ಎಂಬ ಅಹಂಕಾರವನ್ನು ಬದಿಗಿಟ್ಟು, ಪರಸ್ಪರ ಅನುಭವ ಮತ್ತು ತಿಳುವಳಿಕೆಯನ್ನು ಹಂಚಿಕೊಳ್ಳುವುದೇ ನಿಜವಾದ ಸಂವಾದ. ಭಿನ್ನಾಭಿಪ್ರಾಯಗಳನ್ನು ಗೌರವಿಸಿ, ಪರಸ್ಪರರಿಂದ ಕಲಿಯುವ ಮನೋಭಾವ ಸಮಾಜದಲ್ಲಿ ಬೆಳೆಯಬೇಕು.

ಸಂವಾದಗಳು ನಿಂತುಹೋದ ಸಮಾಜದಲ್ಲಿ ಸರ್ವಾಧಿಕಾರ ಮತ್ತು ಶ್ರೇಷ್ಠತೆಯ ವ್ಯಸನ ಬೆಳೆಯುತ್ತವೆ. ಜ್ಞಾನ, ವಿಶ್ವವಿದ್ಯಾಲಯಗಳು, ಧರ್ಮ ಮತ್ತು ಕಲೆಗಳ ಬೆಳವಣಿಗೆಯೂ ಕುಂಠಿತವಾಗುತ್ತದೆ. ಹೀಗಾಗಿ ಪ್ರಜಾಪ್ರಭುತ್ವವನ್ನು ಉಳಿಸಲು ಸಂವಾದ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಅತ್ಯಗತ್ಯ ಎಂದರು.

ಭಾರತದ ಇತಿಹಾಸವನ್ನು ಕೇವಲ ಯುದ್ಧ, ಸಂಘರ್ಷ ಮತ್ತು ರಕ್ತಪಾತಗಳ ಮೂಲಕ ನೋಡಬಾರದು. ವಿವಿಧ ಭಾಷೆಗಳು, ಧರ್ಮಗಳು, ಸಂಸ್ಕೃತಿಗಳು ಮತ್ತು ದರ್ಶನಗಳ ನಡುವಿನ ಕೊಡುಕೊಳ್ಳುವಿಕೆ ಹಾಗೂ ಸಂವಾದಗಳ ಮೂಲಕವೂ ಇತಿಹಾಸವನ್ನು ಅರ್ಥಮಾಡಿಕೊಳ್ಳಬೇಕು. ಹಿಂದೂಸ್ತಾನಿ ಸಂಗೀತ, ಉರ್ದು ಭಾಷೆ, ಸೂಫಿ ಪರಂಪರೆ ಮತ್ತು ಭಾರತೀಯ ಚಿತ್ರಕಲೆ ಇವೆಲ್ಲವೂ ವಿವಿಧ ಸಂಸ್ಕೃತಿಗಳ ಪರಸ್ಪರ ವಿನಿಮಯದ ಫಲಗಳಾಗಿವೆ ಎಂದು ವಿವರಿಸಿದರು.

ಯುವಜನರಿಂದ ಕಲಿಯುವ ವಿನಯ ಬೇಕು

ಕುವೆಂಪು, ಲಂಕೇಶ್ ಮತ್ತು ಗೌರಿ ಲಂಕೇಶ್ ಅವರು ಹೊಸ ತಲೆಮಾರಿನೊಂದಿಗೆ ನಡೆಸಿದ ಒಡನಾಟವನ್ನು ಉದಾಹರಿಸಿದ ರಹಮತ್ ತರೀಕೆರೆ, ಹಿರಿಯರು ಕೇವಲ ಯುವಜನರಿಗೆ ಮಾರ್ಗದರ್ಶನ ನೀಡುವುದಷ್ಟೇ ಅಲ್ಲ, ಅವರಿಂದಲೂ ಕಲಿಯುವ ವಿನಯ ಹೊಂದಿರಬೇಕು ಎಂದರು. ವಿಶೇಷವಾಗಿ ಗೌರಿ ಲಂಕೇಶ್ ಅವರು ಯುವ ಹೋರಾಟಗಾರರೊಂದಿಗೆ ಸಂಗಾತಿಯಂತೆ ಬೆರೆತು ಅವರ ಚೈತನ್ಯವನ್ನು ಗೌರವಿಸಿದ್ದು ಉತ್ತಮ ಮಾದರಿ ಎಂದು ತಿಳಿಸಿದರು.

ಇಂದಿನ ಸಾಮಾಜಿಕ ಜಾಲತಾಣಗಳು ಜನರನ್ನು ಸಂಪರ್ಕಿಸುವ ಅವಕಾಶ ನೀಡಿದ್ದರೂ, ಅದೇ ವೇದಿಕೆಗಳಲ್ಲಿ ದ್ವೇಷ, ಅಸಹನೆ, ಸುಳ್ಳು ಮಾಹಿತಿ ಮತ್ತು ಕೆಟ್ಟ ಭಾಷೆ ಹರಡುತ್ತಿರುವುದು ಆತಂಕಕಾರಿ. ಇಂತಹ ಸಂಧರ್ಭದಲ್ಲಿ ಹಿಂಸೆ ಮುಂದೆ ದೈಹಿಕ ಹಿಂಸೆಯಾಗಿ ಬದಲಾಗಬಹುದು. ಗೌರಿ ಲಂಕೇಶ್ ಮತ್ತು ಎಂ.ಎಂ. ಕಲ್ಬುರ್ಗಿ ಅವರ ಹತ್ಯೆಗಳ ಹಿಂದಿನ ದ್ವೇಷದ ವಾತಾವರಣವನ್ನು ಮರೆಯಬಾರದು ಎಂದು ಎಚ್ಚರಿಸಿದರು.

ಮಹಿಳೆಯರು, ದಲಿತರು ಮತ್ತು ಅಂಚಿನ ಸಮುದಾಯಗಳ ಪರವಾಗಿ ಬೇರೆಯವರು ಮಾತನಾಡುವುದಕ್ಕಿಂತ ಅವರ ಮಾತುಗಳನ್ನು ಅವರಿಂದಲೇ ಕೇಳಿಸಿಕೊಳ್ಳಬೇಕು. ಮಹಿಳೆಯರ ಅಭಿಪ್ರಾಯ ಮತ್ತು ಅನುಭವಗಳಿಗೆ ಅವಕಾಶ ನೀಡಬೇಕು. ಸಮಾಜದ ಎಲ್ಲ ಸಮುದಾಯಗಳಲ್ಲಿಯೂ ಆತ್ಮವಿಮರ್ಶೆ ಮತ್ತು ಪರಸ್ಪರ ಸಂವಾದ ಬೆಳೆಯಬೇಕು ಎಂದು ಪ್ರತಿಪಾದಿಸಿದರು.

ಹೊಸ ಭಾರತದ ನಿರ್ಮಾಣದಲ್ಲಿ ಯುವಜನರ ಪಾತ್ರ

ಇಂದಿನ ಯುವಜನರ ಹೋರಾಟದ ವಿಶೇಷತೆಯೆಂದರೆ, ಅವರು ಕೇವಲ ಪ್ರತಿಭಟನೆಗೆ ಸೀಮಿತವಾಗದೆ ಹಾಡು, ವ್ಯಂಗ್ಯ, ಕಲೆ, ಚರ್ಚೆ ಮತ್ತು ಪರ್ಯಾಯ ಮಾಧ್ಯಮಗಳ ಮೂಲಕವೂ ತಮ್ಮ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ. ಭಯವನ್ನು ಮೀರಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಎತ್ತಿಹಿಡಿಯುತ್ತಿದ್ದಾರೆ. ಗಾಂಧಿ, ಅಂಬೇಡ್ಕರ್ ಮತ್ತು ಮಾರ್ಕ್ಸ್‌ವಾದಿ ಚಿಂತನೆಗಳಲ್ಲಿನ ಅಗತ್ಯ ಅಂಶಗಳನ್ನು ಸಮಕಾಲೀನ ಹೋರಾಟಗಳಿಗೆ ಬಳಸಿಕೊಳ್ಳುವ ವಿವೇಕವನ್ನೂ ಪ್ರದರ್ಶಿಸುತ್ತಿದ್ದಾರೆ.

ಈ ಯುವಜನರ ಚೈತನ್ಯವನ್ನು ಅನುಮಾನದಿಂದ ನೋಡುವ ಬದಲು, ಅವರೊಂದಿಗೆ ಸಂವಾದ ನಡೆಸಿ ಹೊಸ ಸಾಮಾಜಿಕ ಚಳವಳಿಯನ್ನಾಗಿ ಬೆಳೆಸುವ ಜವಾಬ್ದಾರಿ ಹಿರಿಯ ತಲೆಮಾರಿನ ಮೇಲಿದೆ.

ಭಾರತಕ್ಕೆ ಇಂದು ಹೊಸ ಭಾಷೆ, ಹೊಸ ಚಿಂತನೆ, ಹೊಸ ಸಿದ್ಧಾಂತ ಮತ್ತು ಹೊಸ ರಾಜಕೀಯ ವಿವೇಕದ ಅಗತ್ಯವಿದೆ. ಸಂವಾದ, ಸಮಾನತೆ, ಸಹಬಾಳ್ವೆ ಮತ್ತು ಪ್ರಜಾಪ್ರಭುತ್ವದ ಮೌಲ್ಯಗಳ ಆಧಾರದಲ್ಲಿ ಹೊಸ ಭಾರತವನ್ನು ಕಟ್ಟುವ ಪ್ರಯತ್ನಕ್ಕೆ ಜನನುಡಿ ವೇದಿಕೆ ಸಹಕಾರಿಯಾಗಬೇಕು ಎಂದು ರಹಮತ್ ತರೀಕೆರೆ ಆಶಿಸಿದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು