ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
12 ದಿನಗಳ ಅಹೋರಾತ್ರಿ ಹೋರಾಟಕ್ಕೆ ಮಣಿದ ಸರ್ಕಾರ: ಆಶಾ ಕಾರ್ಯಕರ್ತೆಯರ ಗೌರವಧನ ₹2 ಸಾವಿರ ಹೆಚ್ಚಳಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್ಜೆನ್‌-ಝಿ ಯುವಜನರು ದಾರಿ ತಪ್ಪಿಲ್ಲ, ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ತಲೆಮಾರು: ಅಶ್ಫಕ್ ಕೊಪ್ಪಳಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್ಚುನಾವಣೆಯೊಂದೇ ಬದಲಾವಣೆಯ ಮಾರ್ಗವಲ್ಲ, ಜನಪರ ಪರ್ಯಾಯ ರಾಜಕಾರಣ ರೂಪಿಸಬೇಕು: ನಂದಕುಮಾರ್ ಕುಂಬ್ರಿಉಬ್ಬುಫ್ಯಾಸಿಸಂ ವಿರೋಧವೆಂದರೆ ಕೇವಲ ಬಿಜೆಪಿ ವಿರೋಧವಲ್ಲ; ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟವೂ ಆಗಬೇಕು: ಚಿಂತಕ ಶಿವಸುಂದರ್ಪ್ರಜಾಪ್ರಭುತ್ವದ ಕೊನೆಯ ರಕ್ಷಣಾ ಶಕ್ತಿ ಜನರೇ; ಹಿಂದಿ ಹೇರಿಕೆ ವಿರುದ್ಧವೂ ಹೋರಾಟ ಅಗತ್ಯ: ಡಾ.ರಮೇಶ್ ಬೆಲ್ಲಂಕೊಂಡಕೈಗಾರಿಕೆ, ಮಾಧ್ಯಮದ ಬಳಿಕ ರಾಜಕೀಯ ವ್ಯವಸ್ಥೆಯ ಮೇಲೂ ಕಾರ್ಪೊರೇಟ್ ಹಿಡಿತದ ಆತಂಕ: ಎ.ಬಿ. ಇಬ್ರಾಹಿಂ, ನಿವೃತ್ತ ಐಎಎಸ್ ಅಧಿಕಾರಿಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆಸಂವಾದ ಕಳೆದುಕೊಳ್ಳುತ್ತಿರುವ ಭಾರತಕ್ಕೆ Gen Z ಹೊಸ ರಾಜಕೀಯ ಭಾಷೆ ಕಲಿಸುತ್ತಿದೆ: ರಹಮತ್ ತರೀಕೆರೆಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರಜಿಪಿಎಸ್ ಮೂಲಕ ಬಾಡಿಗೆ ಕಾರಿನ ಎಂಜಿನ್ ಸ್ಥಗಿತಗೊಳಿಸಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೊಲೀಸರುಹಳೆಯ ತಪ್ಪುಗಳನ್ನು ಮತ್ತೆ ಮಾಡಬೇಡಿ: ಕ್ಷೇತ್ರ ಪುನರ್ವಿಂಗಡಣೆ ಮಸೂದೆಗೆ ಬೆಂಬಲ ನೀಡುವಂತೆ ಚಂದ್ರಬಾಬು ನಾಯ್ಡು ಮನವಿಚಮತ್ಕಾರ ತೋರಿಸದಿದ್ದರೆ ನಮಸ್ಕಾರ ಮಾಡಬೇಕಿಲ್ಲ ಎನ್ನುವ ಧೋರಣೆ ಜನರಲ್ಲಿದೆ: ಮೋಹನ್ ಭಾಗವತ್ಡಿಲಿಮಿಟೇಶನ್‌ ವಿಚಾರದಲ್ಲಿ ರಾಜಿ ಇಲ್ಲ: ಕೇಂದ್ರದ ಪ್ರಸ್ತಾವನೆಗೆ ವಿರೋಧ ಪಕ್ಷಗಳ ಆಕ್ಷೇಪ, ವಿಶೇಷ ಅಧಿವೇಶನಕ್ಕೂ ಮುನ್ನ ರಾಜಕೀಯ ಚರ್ಚೆ ತೀವ್ರಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳ ಸ್ಥಾನಗಳನ್ನು ಶೇ.50ರಷ್ಟು ಹೆಚ್ಚಿಸಲು ಕೇಂದ್ರ ಸಂಪುಟ ಅಸ್ತು: 2029ರ ಚುನಾವಣೆಗೆ ಮಹಿಳಾ ಮೀಸಲಾತಿ ಜಾರಿ ಗುರಿಛತ್ತೀಸ್‌ಗಢದ ನಾರಾಯಣಪುರದಲ್ಲಿ ಮದರ್ ಮೇರಿ ಪ್ರತಿಮೆಗೆ ಬೆಂಕಿ ಹಚ್ಚಲು ಯತ್ನ: ಕ್ರಿಸ್‌ಮಸ್‌ಗೂ ಮುನ್ನ ಚರ್ಚ್‌ಗಳಿಗೆ ಭದ್ರತೆ ಕೋರಿದ ಕ್ರೈಸ್ತ ಸಮುದಾಯಬಿಹಾರ | ಕಬ್ಬು ಕಿತ್ತ ಆರೋಪ: ಹಲ್ಲೆಗೊಳಗಾದ ಇಬ್ಬರು ಮದರಸಾ ವಿದ್ಯಾರ್ಥಿಗಳು ಕೆರೆಯಲ್ಲಿ ಶವವಾಗಿ ಪತ್ತೆ

ಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿ

ಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು   ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿ

ಮಂಗಳೂರು : ಭವಿಷ್ಯದ ಭಾರತದ ಆರ್ಥಿಕತೆ ಮತ್ತು ಜೀವನೋಪಾಯವನ್ನು ಕೇವಲ ಅಂಕಿಅಂಶಗಳು ಅಥವಾ ಕಾರ್ಪೊರೇಟ್ ಲಾಭದ ಕಣ್ಣಿನಿಂದ ನೋಡದೆ, ಅದಕ್ಕೆ ಪ್ರೀತಿ, ಕಳಕಳಿ ಮತ್ತು ಸಾಮಾಜಿಕತೆಯಿಂದ ನೋಡಬೇಕಿದೆನೀಡುವ ಡಾ. ಸಬಿತಾ ಬನ್ನಾಡಿ.

ಕೋವಿಡ್ ಕಾಲದ ವಲಸೆ ಕಾರ್ಮಿಕರ ಸಂಕಷ್ಟವನ್ನು ದಾಖಲಿಸಿದ ವಿನೋದ್ ಕಾಪ್ರಿ ಅವರ ‘1232 ಕಿಲೋಮೀಟರ್ಸ್’ ಪುಸ್ತಕದ ಘಟನೆಗಳನ್ನು ಉಲ್ಲೇಖಿಸಿದ ಅವರು, ಹಸಿವಿನಿಂದ ಬಳಲುತ್ತಿದ್ದವರಿಗೆ ದಾರಿ ತೋರಿಸಿ, ತಾವೂ ಕಷ್ಟದಲ್ಲಿದ್ದರೂ ಏಳು ಸೈಕಲ್‌ಗಳ ಪಂಕ್ಚರ್ ಸರಿಪಡಿಸಿ ಹಣ ಪಡೆಯಲು ನಿರಾಕರಿಸಿದ ಇರ್ಷಾದ್ ಎಂಬ ಪಂಕ್ಚರ್‌ ಹಾಕುವವರನ್ನು ನೆನಪಿಸಿಕೊಂಡರು. ಸಾಮಾನ್ಯ ಮನುಷ್ಯನಲ್ಲಿರುವ ಈ ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿ ಆರ್ಥಿಕತೆಯ ಅಡಿಪಾಯವಾಗಬೇಕು ಎಂದರು.

ಹೊರಗಿನ ಬಂಡವಾಳವನ್ನೇ ನೆಚ್ಚಿಕೊಳ್ಳುವ ಬದಲು, ನಮ್ಮದೇ ಸಂಪನ್ಮೂಲ ಮತ್ತು ಶ್ರಮದಿಂದ ಸ್ವಾಭಿಮಾನದ ಆರ್ಥಿಕತೆಯನ್ನು ಕಟ್ಟಲು ಸಾಧ್ಯವಿದೆ ಎಂದು ಹೇಳಿದ ಡಾ. ಸಬಿತಾ ಬನ್ನಾಡಿ, ಗ್ರಾಮ ಪಂಚಾಯತ್ ಮಟ್ಟದಲ್ಲೇ ಕೃಷಿ ಉತ್ಪನ್ನಗಳ ಸಂಸ್ಕರಣೆ, ಸಂಗ್ರಹಣೆ ಮತ್ತು ಮಾರುಕಟ್ಟೆ ಘಟಕಗಳನ್ನು ರೂಪಿಸಿ ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸಬಹುದೆಂದು ಸಲಹೆ ನೀಡಿದರು. ಪೌರಕಾರ್ಮಿಕರ ದುಡಿಮೆಯನ್ನು ಯಂತ್ರ ಮತ್ತು ತಂತ್ರಜ್ಞಾನದ ಸಮನ್ವಯದೊಂದಿಗೆ ಮೇಲ್ದರ್ಜೆಗೇರಿಸಿ, ಘನತೆ ಹಾಗೂ ಸೂಕ್ತ ವೇತನ ನೀಡಬೇಕೆಂದು ಒತ್ತಾಯಿಸಿದರು.

ಇಂದಿನ ಉದ್ಯೋಗ ಕ್ಷೇತ್ರದ ವಾಸ್ತವವನ್ನು ಬಿಚ್ಚಿಟ್ಟ ಅವರು, ಬಹುರಾಷ್ಟ್ರೀಯ ಕಂಪನಿಗಳು ಮತ್ತು ‘ಗಿಗ್ ಎಕಾನಮಿ’ ಹೆಸರಿನಲ್ಲಿ 12 ಗಂಟೆಗಳ ದುಡಿಮೆ, ಕೂರಲು ಅವಕಾಶವಿಲ್ಲದ ಸ್ಥಿತಿ ಮತ್ತು ಕಣ್ಗಾವಲಿನ ಮೂಲಕ ಮನುಷ್ಯರನ್ನು ನವ-ಗುಲಾಮರನ್ನಾಗಿ ನಡೆಸಿಕೊಳ್ಳುತ್ತಿವೆ ಎಂದು ಕಳವಳ ವ್ಯಕ್ತಪಡಿಸಿದರು. ಹಾಗೆಯೇ ಸಿನಿಮಾ, ಮಾಧ್ಯಮ, ಫ್ಯಾಷನ್ ಸೇರಿದಂತೆ ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಮೇಲಿನ ಶೋಷಣೆಯನ್ನು ಸಹಜಗೊಳಿಸುತ್ತಿರುವುದನ್ನು ವಿರೋಧಿಸಿದರು.

ಬಡತನವನ್ನು ಉಳಿಸಿಕೊಂಡು, ಮಧ್ಯಮ ವರ್ಗವನ್ನು ಮತದಾರರನ್ನಾಗಿ ಮಾತ್ರ ಬಳಸಿಕೊಳ್ಳುವ ಮತ್ತು ಅತಿ ಶ್ರೀಮಂತರನ್ನು ಪೋಷಿಸುವ ವ್ಯವಸ್ಥೆಯ ವಿರುದ್ಧ ಸಾಂಸ್ಕೃತಿಕ ರಾಜಕಾರಣ ಮತ್ತು ಜನಪರ ಪ್ರಜ್ಞೆ ಬೆಳೆಯಬೇಕೆಂದರು. ಆಶಾ ಕಾರ್ಯಕರ್ತೆಯರು, ಬಿಸಿಯೂಟ ನೌಕರರು ಹೋರಾಟಕ್ಕಿಳಿಯುವ ಸ್ಥಿತಿ ಮತ್ತು ಸರ್ಕಾರಿ ಶಾಲೆಗಳ ಮುಚ್ಚುವಿಕೆಯಿಂದ ಕನ್ನಡ ಹಾಗೂ ಜನರ ಘನತೆಗೆ ಧಕ್ಕೆಯಾಗುತ್ತಿದೆ ಎಂದು ಎಚ್ಚರಿಸಿದರು.

ಸರ್ಕಾರಗಳು ಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಬಲವಾದ ಸಾರ್ವಜನಿಕ ಸಾರಿಗೆ—ಈ ಮೂರು ಮೂಲಭೂತ ಸೇವೆಗಳನ್ನು ಗಟ್ಟಿಯಾಗಿ ಒದಗಿಸಿದರೆ, ಕುಟುಂಬಗಳು ಆಸ್ಪತ್ರೆ ಮತ್ತು ಖಾಸಗಿ ಶಾಲೆಗಳ ಹೊರೆಯನ್ನು ತಪ್ಪಿಸಿಕೊಂಡು ನೆಮ್ಮದಿಯಿಂದ ಬದುಕಬಹುದು ಎಂದರು. ಕರಾವಳಿಯ ಮನೆಗಳಲ್ಲಿ ಒಂದು ಮೊಟ್ಟೆಯಲ್ಲೇ ಎಲ್ಲರಿಗೂ ಹಂಚಿ ತಿನ್ನುವ ‘ಊಟದ ತಟ್ಟೆಯ ಆರ್ಥಿಕತೆ’ ಮತ್ತು ಹಿಂದಿನ ಸಮುದಾಯಸ್ನೇಹಿ ಕೈಗಾರಿಕಾ ವಸಾಹತುಗಳ ಮಾದರಿಗಳನ್ನು ಉದಾಹರಿಸಿದರು.

ಕೋವಿಡ್ ಸಂದರ್ಭದಲ್ಲಿ ಕೇರಳದ ಅಂದಿನ ಆರೋಗ್ಯ ಸಚಿವೆ ಶೈಲಜಾ ಟೀಚರ್ ಅವರ ಮುನ್ನೆಚ್ಚರಿಕೆ ಮತ್ತು ಧೈರ್ಯ ತುಂಬುವ ಕಾರ್ಯವೈಖರಿಯನ್ನು ಶ್ಲಾಘಿಸಿದ ಅವರು, ತಾರತಮ್ಯವಿಲ್ಲದ, ಸಮಾನ ಹಂಚಿಕೆ ಮತ್ತು ಸಂವೇದನಾಶೀಲತೆಯುಳ್ಳ ಸಮೃದ್ಧ ಭಾರತವನ್ನು ಒಟ್ಟಾಗಿ ಕಟ್ಟೋಣ ಎಂದರು.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು