ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
KSRTC ಲಗೇಜ್ ಶುಲ್ಕವೂ ದುಪ್ಪಟ್ಟು – ಪ್ರಯಾಣಿಕರು ಹಾಗೂ ಸಣ್ಣ ವ್ಯಾಪಾರಿಗಳ ಜೇಬಿಗೆ ಕತ್ತರಿಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ – ಮೊಬೈಲ್‌ನಲ್ಲೇ ಮಾಡುವುದು ಇನ್ನಷ್ಟು ಸುಲಭಮಾಲಿನ್ಯ ನಿಯಂತ್ರಿಸುವಲ್ಲಿ ಕೇಂದ್ರ ಮೋದಿ ಸರ್ಕಾರ ವಿಫಲ – ಮಲ್ಲಿಕಾರ್ಜುನ ಖರ್ಗೆಶರಣೆ ಸತ್ಯಕ್ಕನ ನೇಮಬೆಂಗಳೂರು ಕೃಷಿ ಮೇಳನಿಗದಿ ನ.16ರಿಂದ 18ವರೆಗೆ – 3 ಹೊಸ ಬೆಳೆ ತಳಿಗಳ ಬಿಡುಗಡೆಹಾಸನಾಂಬೆಯ ಗರ್ಭಗುಡಿಯ ‘ನಂದಾದೀಪ’ ಪವಾಡವೇ? ಶಬರಿಮಲೆ ಮಕರಜ್ಯೋತಿಗೂ ಹಾಸನಾಂಬೆಯ ‘ನಂದಾದೀಪ’ಕ್ಕೂ ಇರುವ ಸಾಮ್ಯತೆಗಳಿವುನ.13ರಂದು ಮೋದಿ ಕರ್ನಾಟಕ ಪ್ರವಾಸ: ಬೆಂಗಳೂರು ಮೆಟ್ರೋ ನಿಲ್ದಾಣ ಉದ್ಘಾಟನೆ, ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯ ಉದ್ಘಾಟನೆಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿಯ ಹೊಸ ಲೆಕ್ಕಾಚಾರ: ಹಿರಿಯ ನಾಯಕರಿಗೆ ಅಖಾಡಕ್ಕಿಳಿಯುವ ಸೂಚನೆ; ಹಾಲಿ ಶಾಸಕರಲ್ಲಿ ಹೆಚ್ಚಿದ ಆತಂಕ!ಭಾರತದ ಪ್ರಜಾಪ್ರಭುತ್ವ ಸ್ವಾತಂತ್ರ್ಯದಲ್ಲಿ ಮತ್ತೆ ಒಂದು ಅಂಕ ಕುಸಿತ: “ಫ್ರೀಡಂ ಹೌಸ್” ವರದಿಯಲ್ಲಿ 62 ಅಂಕಶೇಖ್ ಹಸೀನಾ ಪಾಲಿಗೆ ಪಾಸ್‌ಪೋರ್ಟ್ ಬಾಗಿಲು ಬಂದ್! ಮರಣದಂಡನೆ ತೀರ್ಪೇ ಅಂತಿಮ ಎಂದ ಬಾಂಗ್ಲಾದೇಶದ ಅಭಿಯೋಜಕಪೌರತ್ವ ಸಾಬೀತಿಗೆ ಪ್ಯಾನ್, ವೋಟರ್ ಐಡಿ ಸಾಲದು: ಗೌಹಾಟಿ ಹೈಕೋರ್ಟ್ ಆದೇಶಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್: ಅದೃಷ್ಟವಶಾತ್ ತಪ್ಪಿದ ಅನಾಹುತಆ್ಯಪ್‌ಗಳ ಕಪಿಮುಷ್ಠಿಯಲ್ಲಿ ಗಿಗ್ ಕಾರ್ಮಿಕರ ಬದುಕು: ಕಾರ್ಪೊರೇಟ್ ಬೆಳವಣಿಗೆಯ ನಡುವೆ ಅತಂತ್ರವಾದ ಕಾರ್ಮಿಕ ಹಕ್ಕುಗಳುಬಾಬರಿ ಮಸೀದಿ ಧ್ವಂಸದ ಬಗ್ಗೆ ಸೋನಿಯಾ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ: ವಿಎಚ್‌ಪಿ ನಾಯಕ ಸುರೇಂದ್ರ ಜೈನ್2026ರ ಮೊದಲ 9 ತಿಂಗಳಲ್ಲಿ ಮುಸ್ಲಿಮರು, ಕ್ರೈಸ್ತರ ವಿರುದ್ಧ 322 ದ್ವೇಷ ಅಪರಾಧ: 54 ಮಂದಿ ಸಾವು, 83 ದ್ವೇಷ ಭಾಷಣ ದಾಖಲು – ಎಪಿಸಿಆರ್ ವರದಿಶಾ ಬಾನೊ ಪ್ರಕರಣದ ಕುರಿತು ರಾಜೀವ್ ಅವರನ್ನು ಪ್ರಶ್ನಿಸಿದ್ದ ಸೋನಿಯಾ ಗಾಂಧಿ; ಆಗ ಪ್ರಧಾನಿ ಹೇಳಿದ್ದು…ಅಮೆರಿಕದ ಸಮನ್ಸ್‌ಗೆ ಭಾರತದಿಂದ ಬಲವಾದ ವಿರೋಧ: ದೋವಲ್ ಮೇಲಿನ ಆರೋಪ ತಳ್ಳಿಹಾಕಿದ ಹೊಸದೆಹಲಿಪ್ರಿಯಾಂಕ್ ಖರ್ಗೆ ವಿರುದ್ಧ ಬೆಂಗಳೂರಿನಲ್ಲಿ ದೂರು: ಕೋಮು ಸೌಹಾರ್ದತೆಗೆ ಧಕ್ಕೆ ಆರೋಪ, FIR ದಾಖಲಿಸಲು ಮನವಿರೈತರು 3 ತಿಂಗಳು ದುಡಿದು, 9 ತಿಂಗಳು ಇಸ್ಪೀಟ್, ಗುಟ್ಕಾ, ಮದ್ಯದಲ್ಲೇ ಕಳೆಯುತ್ತಾರೆ: ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿವಾದಾತ್ಮಕ ಹೇಳಿಕೆ!2024ರ ಚುನಾವಣಾ ಮತ ಎಣಿಕೆಯಲ್ಲಿ ಭಾರೀ ವ್ಯತ್ಯಾಸ: ಬಯಲಾಯ್ತು ಸ್ಫೋಟಕ ಸತ್ಯ

ಪೌರತ್ವ ಸಾಬೀತಿಗೆ ಪ್ಯಾನ್, ವೋಟರ್ ಐಡಿ ಸಾಲದು: ಗೌಹಾಟಿ ಹೈಕೋರ್ಟ್ ಆದೇಶ

PPeepal Media

Peepal Media ದೇಶ

• 1 ನಿಮಿಷದ ಓದು

ಪೌರತ್ವ ಸಾಬೀತಿಗೆ ಪ್ಯಾನ್, ವೋಟರ್ ಐಡಿ ಸಾಲದು: ಗೌಹಾಟಿ ಹೈಕೋರ್ಟ್ ಆದೇಶ

ಸೂಕ್ತ ಪೂರಕ ದಾಖಲೆಗಳ ಬೆಂಬಲವಿಲ್ಲದಿದ್ದರೆ, ಕೇವಲ ಪ್ಯಾನ್ ಕಾರ್ಡ್ (PAN Card) ಮತ್ತು ಮತದಾರರ ಗುರುತಿನ ಚೀಟಿ (Voter ID / EPIC) ಭಾರತೀಯ ಪೌರತ್ವವನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಗೌಹಾಟಿ ಹೈಕೋರ್ಟ್ ಮಹತ್ವದ ತೀರ್ಪು ಪ್ರಕಟಿಸಿದೆ. ಯಾವುದೇ ಔಪಚಾರಿಕ ತನಿಖೆಯಿಲ್ಲದೆ ಕೇವಲ ಸ್ವಯಂ ಘೋಷಣೆಗಳ ಆಧಾರದ ಮೇಲೆ ನೀಡಲಾಗುವ ಇಂತಹ ದಾಖಲೆಗಳು ಪೌರತ್ವಕ್ಕೆ ಅಂತಿಮ ಪುರಾವೆಯಾಗಲಾರವು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ನ್ಯಾಯಮೂರ್ತಿ ಕಲ್ಯಾಣ್ ರೈ ಸುರಾನಾ ಮತ್ತು ನ್ಯಾಯಮೂರ್ತಿ ಸುಸ್ಮಿತಾ ಫುಕನ್ ಖೌಂಡ್ ಅವರನ್ನೊಳಗೊಂಡ ವಿಭಾಗೀಯ ಪೀಠವು, ಅರ್ಜಿದಾರೆಯನ್ನು 1971ರ ಮಾರ್ಚ್ 25ರ ನಂತರ ಭಾರತಕ್ಕೆ ಪ್ರವೇಶಿಸಿದ ‘ವಿದೇಶಿ’ ಎಂದು ಘೋಷಿಸಿದ್ದ ವಿದೇಶಿಯರ ನ್ಯಾಯಾಧಿಕರಣದ (Foreigners Tribunal) ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ರಿಟ್ ಅರ್ಜಿಯನ್ನು ವಜಾಗೊಳಿಸಿ ಈ ಅಭಿಪ್ರಾಯ ವ್ಯಕ್ತಪಡಿಸಿದೆ.

“ಪ್ಯಾನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿಗಳು ಭಾರತೀಯ ಪೌರತ್ವದ ಪುರಾವೆಗಳಲ್ಲ. ಇವುಗಳನ್ನು ಆದಾಯ ತೆರಿಗೆ ಇಲಾಖೆ ಅಥವಾ ಭಾರತೀಯ ಚುನಾವಣಾ ಆಯೋಗವು ಯಾವುದೇ ಆಳವಾದ ಔಪಚಾರಿಕ ತನಿಖೆಯಿಲ್ಲದೆ ಕೇವಲ ಸ್ವಯಂ ಅರ್ಜಿಗಳ (self-application) ಆಧಾರದಲ್ಲಿ ನೀಡುತ್ತದೆ. ಆದ್ದರಿಂದ, ಈ ದಾಖಲೆಗಳನ್ನು ಬೆಂಬಲಿಸುವ ಮೂಲ ದಾಖಲೆಗಳು ಸಾಬೀತಾಗದ ಹೊರತು, ಇವುಗಳನ್ನು ಭಾರತೀಯ ಪೌರತ್ವಕ್ಕೆ ಸಾಕ್ಷಿಯಾಗಿ ಸ್ವೀಕರಿಸಲು ಸಾಧ್ಯವಿಲ್ಲ” ಎಂದು ಕೋರ್ಟ್‌ ಹೇಳಿದೆ.

ಅರ್ಜಿದಾರೆಯು ತಾನು 1977ರ ಏಪ್ರಿಲ್ 25ರಂದು ಅಸ್ಸಾಂನಲ್ಲಿ ಜನಿಸಿದ್ದಾಗಿ ಪ್ರತಿಪಾದಿಸಿದ್ದರು. ತನ್ನ ತಾತ-ಅಜ್ಜಿಯ ಹೆಸರುಗಳಿದ್ದ 1966 ಮತ್ತು 1970ರ ಮತದಾರರ ಪಟ್ಟಿಗಳು, ತಂದೆಯ ಪ್ಯಾನ್ ಕಾರ್ಡ್ ಮತ್ತು ವೋಟರ್ ಐಡಿ, ತನ್ನದೇ ಆದ ವೋಟರ್ ಐಡಿ, ಪಡಿತರ ಚೀಟಿ ಹಾಗೂ ಎನ್‌ಆರ್‌ಸಿ (NRC) ಅರ್ಜಿ ಸ್ವೀಕೃತಿ ರಸೀದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಅಲ್ಲದೆ, ತನ್ನ ತಂದೆ ಚುನಾವಣೆಯಲ್ಲಿ ಸ್ಪರ್ಧಿಸಿ ಗುವಾಹಟಿ ಮುನ್ಸಿಪಲ್ ಕಾರ್ಪೊರೇಷನ್ ಕೌನ್ಸಿಲರ್ ಆಗಿ ಸೇವೆ ಸಲ್ಲಿಸಿದ್ದ ಭಾರತೀಯ ಪ್ರಜೆ ಎಂದು ವಾದಿಸಿದ್ದರು.

ಆದರೆ, ಅರ್ಜಿದಾರೆಯು ತಾನು ಪ್ರತಿಪಾದಿಸುತ್ತಿರುವ ಪೋಷಕರೊಂದಿಗಿನ ರಕ್ತಸಂಬಂಧದ ಕೊಂಡಿಯನ್ನು (linkage) ದೃಢವಾದ ಮತ್ತು ವಿಶ್ವಾಸಾರ್ಹ ಪುರಾವೆಗಳ ಮೂಲಕ ಸಾಬೀತುಪಡಿಸಲು ವಿಫಲರಾಗಿದ್ದಾರೆ ಎಂದು ಹೈಕೋರ್ಟ್ ತೀರ್ಮಾನಿಸಿತು. ತಂದೆ ಎಂಎಲ್ಎ ಅಥವಾ ಕೌನ್ಸಿಲರ್ ಚುನಾವಣೆಯಲ್ಲಿ ಸ್ಪರ್ಧಿಸಿದ್ದರೆಂಬ ಮಾತ್ರಕ್ಕೆ ಅರ್ಜಿದಾರೆಯು ಅವರ ಮಗಳೇ ಎಂದು ಸಾಬೀತಾಗುವುದಿಲ್ಲ ಎಂದ ನ್ಯಾಯಾಲಯ, ಪೌರತ್ವ ಕಾಯ್ದೆ 1955ರ ಸೆಕ್ಷನ್ 6A(2) ರ ಪ್ರಕಾರ 1970 ರಿಂದ 1997ರ ನಡುವೆ ಕುಟುಂಬವು ಅಸ್ಸಾಂನಲ್ಲಿ ನಿರಂತರವಾಗಿ ನೆಲೆಸಿರುವುದಕ್ಕೆ ಯಾವುದೇ ಪುರಾವೆಗಳನ್ನು ನೀಡಿಲ್ಲ ಎಂದು ಗಮನಿಸಿತು.

ಅರ್ಜಿದಾರೆಯ ವಾದಗಳನ್ನು ತಳ್ಳಿಹಾಕಿದ ಹೈಕೋರ್ಟ್, ವಿದೇಶಿಯರ ನ್ಯಾಯಾಧಿಕರಣದ ಆದೇಶವನ್ನು ಎತ್ತಿಹಿಡಿಯಿತಲ್ಲದೆ, 2022ರಲ್ಲಿ ಆಕೆಗೆ ನೀಡಲಾಗಿದ್ದ ಮಧ್ಯಂತರ ಜಾಮೀನನ್ನು ರದ್ದುಗೊಳಿಸಿ ಆದೇಶ ಹೊರಡಿಸಿದೆ.

ಇದನ್ನೂ ಓದಿ:

https://peepalmedia.com/india/assam-sairang-kolkata-express-train-derails-digaru
PPeepal Media

Peepal Media

Peepal Media · ದೇಶ ವಿಭಾಗ

ಸಂಬಂಧಿತ ಸುದ್ದಿಗಳು