ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
KSRTC ಲಗೇಜ್ ಶುಲ್ಕವೂ ದುಪ್ಪಟ್ಟು – ಪ್ರಯಾಣಿಕರು ಹಾಗೂ ಸಣ್ಣ ವ್ಯಾಪಾರಿಗಳ ಜೇಬಿಗೆ ಕತ್ತರಿಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ – ಮೊಬೈಲ್‌ನಲ್ಲೇ ಮಾಡುವುದು ಇನ್ನಷ್ಟು ಸುಲಭಮಾಲಿನ್ಯ ನಿಯಂತ್ರಿಸುವಲ್ಲಿ ಕೇಂದ್ರ ಮೋದಿ ಸರ್ಕಾರ ವಿಫಲ – ಮಲ್ಲಿಕಾರ್ಜುನ ಖರ್ಗೆಶರಣೆ ಸತ್ಯಕ್ಕನ ನೇಮಬೆಂಗಳೂರು ಕೃಷಿ ಮೇಳನಿಗದಿ ನ.16ರಿಂದ 18ವರೆಗೆ – 3 ಹೊಸ ಬೆಳೆ ತಳಿಗಳ ಬಿಡುಗಡೆಹಾಸನಾಂಬೆಯ ಗರ್ಭಗುಡಿಯ ‘ನಂದಾದೀಪ’ ಪವಾಡವೇ? ಶಬರಿಮಲೆ ಮಕರಜ್ಯೋತಿಗೂ ಹಾಸನಾಂಬೆಯ ‘ನಂದಾದೀಪ’ಕ್ಕೂ ಇರುವ ಸಾಮ್ಯತೆಗಳಿವುನ.13ರಂದು ಮೋದಿ ಕರ್ನಾಟಕ ಪ್ರವಾಸ: ಬೆಂಗಳೂರು ಮೆಟ್ರೋ ನಿಲ್ದಾಣ ಉದ್ಘಾಟನೆ, ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯ ಉದ್ಘಾಟನೆಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿಯ ಹೊಸ ಲೆಕ್ಕಾಚಾರ: ಹಿರಿಯ ನಾಯಕರಿಗೆ ಅಖಾಡಕ್ಕಿಳಿಯುವ ಸೂಚನೆ; ಹಾಲಿ ಶಾಸಕರಲ್ಲಿ ಹೆಚ್ಚಿದ ಆತಂಕ!ಭಾರತದ ಪ್ರಜಾಪ್ರಭುತ್ವ ಸ್ವಾತಂತ್ರ್ಯದಲ್ಲಿ ಮತ್ತೆ ಒಂದು ಅಂಕ ಕುಸಿತ: “ಫ್ರೀಡಂ ಹೌಸ್” ವರದಿಯಲ್ಲಿ 62 ಅಂಕಶೇಖ್ ಹಸೀನಾ ಪಾಲಿಗೆ ಪಾಸ್‌ಪೋರ್ಟ್ ಬಾಗಿಲು ಬಂದ್! ಮರಣದಂಡನೆ ತೀರ್ಪೇ ಅಂತಿಮ ಎಂದ ಬಾಂಗ್ಲಾದೇಶದ ಅಭಿಯೋಜಕಪೌರತ್ವ ಸಾಬೀತಿಗೆ ಪ್ಯಾನ್, ವೋಟರ್ ಐಡಿ ಸಾಲದು: ಗೌಹಾಟಿ ಹೈಕೋರ್ಟ್ ಆದೇಶಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್: ಅದೃಷ್ಟವಶಾತ್ ತಪ್ಪಿದ ಅನಾಹುತಆ್ಯಪ್‌ಗಳ ಕಪಿಮುಷ್ಠಿಯಲ್ಲಿ ಗಿಗ್ ಕಾರ್ಮಿಕರ ಬದುಕು: ಕಾರ್ಪೊರೇಟ್ ಬೆಳವಣಿಗೆಯ ನಡುವೆ ಅತಂತ್ರವಾದ ಕಾರ್ಮಿಕ ಹಕ್ಕುಗಳುಬಾಬರಿ ಮಸೀದಿ ಧ್ವಂಸದ ಬಗ್ಗೆ ಸೋನಿಯಾ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ: ವಿಎಚ್‌ಪಿ ನಾಯಕ ಸುರೇಂದ್ರ ಜೈನ್2026ರ ಮೊದಲ 9 ತಿಂಗಳಲ್ಲಿ ಮುಸ್ಲಿಮರು, ಕ್ರೈಸ್ತರ ವಿರುದ್ಧ 322 ದ್ವೇಷ ಅಪರಾಧ: 54 ಮಂದಿ ಸಾವು, 83 ದ್ವೇಷ ಭಾಷಣ ದಾಖಲು – ಎಪಿಸಿಆರ್ ವರದಿಶಾ ಬಾನೊ ಪ್ರಕರಣದ ಕುರಿತು ರಾಜೀವ್ ಅವರನ್ನು ಪ್ರಶ್ನಿಸಿದ್ದ ಸೋನಿಯಾ ಗಾಂಧಿ; ಆಗ ಪ್ರಧಾನಿ ಹೇಳಿದ್ದು…ಅಮೆರಿಕದ ಸಮನ್ಸ್‌ಗೆ ಭಾರತದಿಂದ ಬಲವಾದ ವಿರೋಧ: ದೋವಲ್ ಮೇಲಿನ ಆರೋಪ ತಳ್ಳಿಹಾಕಿದ ಹೊಸದೆಹಲಿಪ್ರಿಯಾಂಕ್ ಖರ್ಗೆ ವಿರುದ್ಧ ಬೆಂಗಳೂರಿನಲ್ಲಿ ದೂರು: ಕೋಮು ಸೌಹಾರ್ದತೆಗೆ ಧಕ್ಕೆ ಆರೋಪ, FIR ದಾಖಲಿಸಲು ಮನವಿರೈತರು 3 ತಿಂಗಳು ದುಡಿದು, 9 ತಿಂಗಳು ಇಸ್ಪೀಟ್, ಗುಟ್ಕಾ, ಮದ್ಯದಲ್ಲೇ ಕಳೆಯುತ್ತಾರೆ: ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿವಾದಾತ್ಮಕ ಹೇಳಿಕೆ!2024ರ ಚುನಾವಣಾ ಮತ ಎಣಿಕೆಯಲ್ಲಿ ಭಾರೀ ವ್ಯತ್ಯಾಸ: ಬಯಲಾಯ್ತು ಸ್ಫೋಟಕ ಸತ್ಯ

ಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ – ಮೊಬೈಲ್‌ನಲ್ಲೇ ಮಾಡುವುದು ಇನ್ನಷ್ಟು ಸುಲಭ

ಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ – ಮೊಬೈಲ್‌ನಲ್ಲೇ ಮಾಡುವುದು ಇನ್ನಷ್ಟು ಸುಲಭ

ಬೆಂಗಳೂರು: ಪಡಿತರ ಚೀಟಿದಾರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿಯೊಂದನ್ನು ನೀಡಿದ್ದು, ಇ-ಕೆವೈಸಿ (e-KYC) ಮಾಡಿಸಲು ನೀಡಲಾಗಿದ್ದ ಗಡುವನ್ನು ನವೆಂಬರ್ 30ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿದೆ.

ಈ ಹಿಂದೆ ನವೆಂಬರ್ 10 ಕೊನೆಯ ದಿನವಾಗಿತ್ತು. ಫಲಾನುಭವಿಗಳಿಗೆ ಅನುಕೂಲ ಕಲ್ಪಿಸುವ ಉದ್ದೇಶದಿಂದ ಗಡುವು ವಿಸ್ತರಿಸಲಾಗಿದೆ ಎಂದು ಇಲಾಖೆ ತಿಳಿಸಿದೆ.

ಇ-ಕೆವೈಸಿ ಮಾಡಿಸಲು ಫಲಾನುಭವಿಗಳಿಗೆ ಎರಡು ಆಯ್ಕೆಗಳಿವೆ. ಮನೆಯಲ್ಲೇ ಕುಳಿತು ಅನ್ನಸೇವೆ ಆ್ಯಪ್ ಮೂಲಕ ಮೊಬೈಲ್‌ನಲ್ಲೇ ಈ ಪ್ರಕ್ರಿಯೆ ಪೂರ್ಣಗೊಳಿಸಬಹುದು. ಇಲ್ಲವೇ ಸಮೀಪದ ನ್ಯಾಯಬೆಲೆ ಅಂಗಡಿಗೆ ಭೇಟಿ ನೀಡಿ ಇ-ಕೆವೈಸಿ ಮಾಡಿಸಿಕೊಳ್ಳಬಹುದು. ನಿಗದಿತ ಗಡುವಿನೊಳಗೆ ಎಲ್ಲರೂ ಪ್ರಕ್ರಿಯೆ ಪೂರ್ಣಗೊಳಿಸುವಂತೆ ಇಲಾಖೆ ಮನವಿ ಮಾಡಿದೆ.

ನ್ಯಾಯಬೆಲೆ ಅಂಗಡಿಗಳ ಮುಂದೆ ಸರದಿಯಲ್ಲಿ ನಿಲ್ಲುವುದನ್ನು ತಪ್ಪಿಸುವ ಉದ್ದೇಶದಿಂದ ಆಹಾರ ಇಲಾಖೆ ಅನ್ನಸೇವೆ ಆ್ಯಪ್ ಸೌಲಭ್ಯವನ್ನು ರಾಜ್ಯದ ಎಲ್ಲ 31 ಜಿಲ್ಲೆಗಳಿಗೂ ವಿಸ್ತರಿಸಿದೆ. ಕೇಂದ್ರ ಸರ್ಕಾರದ ನಿಯಮದಂತೆ ಪ್ರತಿ ಐದು ವರ್ಷಕ್ಕೊಮ್ಮೆ ಇ-ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ.

ಹಿರಿಯ ನಾಗರಿಕರು ಮತ್ತು ಮಕ್ಕಳ ಅನುಕೂಲಕ್ಕಾಗಿ ಮುಖ ಗುರುತಿಸುವಿಕೆ ಮೂಲಕ ದೃಢೀಕರಣ ಮಾಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ. ಉದ್ಯೋಗ ಸೇರಿದಂತೆ ವಿವಿಧ ಕಾರಣಗಳಿಗಾಗಿ ನಗರ ಪ್ರದೇಶಗಳಿಗೆ ವಲಸೆ ಹೋಗಿರುವವರು ಇ-ಕೆವೈಸಿಗಾಗಿ ತಮ್ಮ ಊರಿಗೆ ಹಿಂದಿರುಗುವ ಅನಿವಾರ್ಯತೆಯನ್ನೂ ಈ ಸೌಲಭ್ಯ ತಪ್ಪಿಸಲಿದೆ.

ಆ್ಯಪ್ ಮೂಲಕ ಇ-ಕೆವೈಸಿ ಮಾಡುವುದು ಹೇಗೆ?

  • ಮೊಬೈಲ್‌ನಲ್ಲಿರುವ ಅನ್ನಸೇವೆ ಆ್ಯಪ್ ತೆರೆಯಿರಿ. ಲಾಗಿನ್ ಆಯ್ಕೆಯಲ್ಲಿ ‘ಸ್ವಯಂ/ನಾಗರಿಕ’ ಎಂಬುದನ್ನು ಆರಿಸಿಕೊಳ್ಳಿ.
  • ಬಳಿಕ ಜಿಲ್ಲೆಗಳ ಪಟ್ಟಿಯಿಂದ ನಿಮ್ಮ ಜಿಲ್ಲೆಯನ್ನು ಆಯ್ಕೆ ಮಾಡಿ, ಪಡಿತರ ಚೀಟಿ ಸಂಖ್ಯೆಯನ್ನು ನಮೂದಿಸಿ. ನಂತರ ರೇಷನ್ ಕಾರ್ಡ್‌ಗೆ ಜೋಡಣೆಯಾಗಿರುವ ಮೊಬೈಲ್ ಸಂಖ್ಯೆಯನ್ನು ನಮೂದಿಸಿ, ಅದಕ್ಕೆ ಬರುವ ಒಟಿಪಿ ದಾಖಲಿಸಿ.
  • ಮುಂದಿನ ಪುಟದಲ್ಲಿ ಪಡಿತರ ಚೀಟಿಯಲ್ಲಿರುವ ಕುಟುಂಬ ಸದಸ್ಯರ ವಿವರಗಳು ಕಾಣಿಸಿಕೊಳ್ಳುತ್ತವೆ. ಇ-ಕೆವೈಸಿ ಮಾಡಿಸಬೇಕಾದ ಸದಸ್ಯರನ್ನು ಆಯ್ಕೆ ಮಾಡಿ, ಆ್ಯಪ್ ನೀಡುವ ಸೂಚನೆಗಳನ್ನು ಅನುಸರಿಸಿ ಮುಖ ಗುರುತಿಸುವಿಕೆ ಪ್ರಕ್ರಿಯೆ ಪೂರ್ಣಗೊಳಿಸಿ. ಕೊನೆಯಲ್ಲಿ ‘ಇ-ಕೆವೈಸಿ ಯಶಸ್ವಿ’ ಎಂಬ ಸಂದೇಶ ಬಂದರೆ ನಿಮ್ಮ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದರ್ಥ.

ಸಚಿವ ರಿಜ್ವಾನ್ ಅರ್ಷದ್ ಅವರು ಇ-ಕೆವೈಸಿ ಪ್ರಕ್ರಿಯೆಯನ್ನು ವಿವರಿಸುವ ವಿಡಿಯೋವನ್ನು ಈ ಹಿಂದೆಯೇ ತಮ್ಮ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ.

ರರಮೇಶ್‌ ಹಾಸನ್‌

ರಮೇಶ್‌ ಹಾಸನ್‌

Peepal Media · ಬ್ರೇಕಿಂಗ್ ಸುದ್ದಿ ವಿಭಾಗ

ಸಂಬಂಧಿತ ಸುದ್ದಿಗಳು