ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಕೋಮುವಾದ ಮತ್ತು ಏಕಸ್ವಾಮ್ಯ ಬಂಡವಾಳಶಾಹಿ ನಡುವಿನ ಅಪವಿತ್ರ ಮೈತ್ರಿಯೇ ಫ್ಯಾಸಿಸಂ ಬೆಳವಣಿಗೆಗೆ ಕಾರಣ: ಟಿ.ಎಲ್. ಕೃಷ್ಣೇಗೌಡಬಂಡವಾಳಶಾಹಿ-ರಾಜಕೀಯ ಅಧಿಕಾರದ ಮೈತ್ರಿಗೆ ಕೋಮುವಾದವೇ ರಕ್ಷಾಕವಚ: ಎ. ನಾರಾಯಣ್ರಾಷ್ಟ್ರೀಯತೆ ಧರ್ಮದ ಆಧಾರದಲ್ಲಿ ಸೀಮಿತವಾಗಬಾರದು; ಸಾಮಾಜಿಕ ಸಮಾನತೆಯೇ ರಾಷ್ಟ್ರ ನಿರ್ಮಾಣದ ಅಡಿಪಾಯ: ವಸಂತ್ ಕಲಾಲ್ಅಲ್ಗಾರಿದಮ್‌ಗಳ ಮೂಲಕ ಜನರ ಆಲೋಚನೆಗಳ ಮೇಲೆಯೇ ಹಿಡಿತ ಸಾಧಿಸುವ ಪ್ರಯತ್ನ: ಡಿಜಿಟಲ್ ರಾಜಕಾರಣದ ಕುರಿತು ಜಿ. ವಿಷ್ಣು ಆತಂಕಶಿಕ್ಷಣದ ಖಾಸಗೀಕರಣ ಸಾಮಾಜಿಕ ನ್ಯಾಯಕ್ಕೆ ದೊಡ್ಡ ಅಪಾಯ: ಬಿ. ಸುರೇಶ್ಶಿಕ್ಷಣದಲ್ಲಿ ಸಾಮಾಜಿಕ ನ್ಯಾಯಕ್ಕೆ ಜಾತಿ ವ್ಯವಸ್ಥೆ, ಖಾಸಗೀಕರಣವೇ ಅಡ್ಡಿ: ಶ್ರೀಪಾದ್ ಭಟ್12 ದಿನಗಳ ಅಹೋರಾತ್ರಿ ಹೋರಾಟಕ್ಕೆ ಮಣಿದ ಸರ್ಕಾರ: ಆಶಾ ಕಾರ್ಯಕರ್ತೆಯರ ಗೌರವಧನ ₹2 ಸಾವಿರ ಹೆಚ್ಚಳಕನ್ನಡದ ಅಸ್ಮಿತೆ ಮತ್ತು ಪ್ರಜಾಪ್ರಭುತ್ವದ ಉಳಿವಿಗಾಗಿ ಜನರು ಹೋರಾಟಕ್ಕೆ ಮುನ್ನುಗ್ಗಬೇಕಿದೆ – ರಮೇಶ್ ಬೆಲ್ಲಂಕೊಂಡಫ್ಯಾಸಿಸಂ ಯಾವತ್ತೂ ನಮ್ಮ ಆಯ್ಕೆ ಆಗಬಾರದು – ಶಿವಸುಂದರ್ಜೆನ್‌-ಝಿ ಯುವಜನರು ದಾರಿ ತಪ್ಪಿಲ್ಲ, ಅಸಮಾನತೆಯ ವಿರುದ್ಧ ಹೋರಾಡುತ್ತಿರುವ ತಲೆಮಾರು: ಅಶ್ಫಕ್ ಕೊಪ್ಪಳಸಾರ್ವಜನಿಕ ಶಿಕ್ಷಣ, ರಾಷ್ಟ್ರೀಕೃತ ಆರೋಗ್ಯ ಸೇವೆ ಮತ್ತು ಸಾರಿಗೆ ಬಲವಾಗಬೇಕಿದೆ – ಡಾ. ಸಬಿತಾ ಬನ್ನಾಡಿಪ್ರತಿರೋಧದ ಧ್ವನಿ ಇಂದಿಗೂ ಜೀವಂತವಾಗಿದೆ – ಪ್ರೊ. ನರೇಂದ್ರ ನಾಯಕ್ಚುನಾವಣೆಯೊಂದೇ ಬದಲಾವಣೆಯ ಮಾರ್ಗವಲ್ಲ, ಜನಪರ ಪರ್ಯಾಯ ರಾಜಕಾರಣ ರೂಪಿಸಬೇಕು: ನಂದಕುಮಾರ್ ಕುಂಬ್ರಿಉಬ್ಬುಫ್ಯಾಸಿಸಂ ವಿರೋಧವೆಂದರೆ ಕೇವಲ ಬಿಜೆಪಿ ವಿರೋಧವಲ್ಲ; ಬ್ರಾಹ್ಮಣವಾದ ಮತ್ತು ಬಂಡವಾಳಶಾಹಿ ವಿರುದ್ಧದ ಹೋರಾಟವೂ ಆಗಬೇಕು: ಚಿಂತಕ ಶಿವಸುಂದರ್ಪ್ರಜಾಪ್ರಭುತ್ವದ ಕೊನೆಯ ರಕ್ಷಣಾ ಶಕ್ತಿ ಜನರೇ; ಹಿಂದಿ ಹೇರಿಕೆ ವಿರುದ್ಧವೂ ಹೋರಾಟ ಅಗತ್ಯ: ಡಾ.ರಮೇಶ್ ಬೆಲ್ಲಂಕೊಂಡಕೈಗಾರಿಕೆ, ಮಾಧ್ಯಮದ ಬಳಿಕ ರಾಜಕೀಯ ವ್ಯವಸ್ಥೆಯ ಮೇಲೂ ಕಾರ್ಪೊರೇಟ್ ಹಿಡಿತದ ಆತಂಕ: ಎ.ಬಿ. ಇಬ್ರಾಹಿಂ, ನಿವೃತ್ತ ಐಎಎಸ್ ಅಧಿಕಾರಿಚಳಿ, ಮಳೆ ಎನ್ನದೆ ಕುಳಿತಿರುವ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಪರವಾಗಿ ನನ್ನ ಈ ಉದ್ಘಾಟನಾ ಭಾಷಣವನ್ನು ಅರ್ಪಿಸುತ್ತೇನೆ – ರಹಮತ್ ತರೀಕೆರೆಸಂವಾದ ಕಳೆದುಕೊಳ್ಳುತ್ತಿರುವ ಭಾರತಕ್ಕೆ Gen Z ಹೊಸ ರಾಜಕೀಯ ಭಾಷೆ ಕಲಿಸುತ್ತಿದೆ: ರಹಮತ್ ತರೀಕೆರೆಪುಸ್ತಕ ಸಂತೆ ಹೆಸರಿನಲ್ಲಿ ಬಂಡವಾಳ ಕೆಲಸ ಮಾಡುತ್ತಿದೆ, ಜನನುಡಿ ಪುಸ್ತಕ ಮೇಳದಲ್ಲಿ – ಲಡಾಯಿ ಬಸೂ ಬೇಸರಜಿಪಿಎಸ್ ಮೂಲಕ ಬಾಡಿಗೆ ಕಾರಿನ ಎಂಜಿನ್ ಸ್ಥಗಿತಗೊಳಿಸಿ ನಾಲ್ವರು ಅಪಹರಣಕಾರರನ್ನು ಬಂಧಿಸಿದ ಪೊಲೀಸರು

ಬಂಡವಾಳಶಾಹಿ-ರಾಜಕೀಯ ಅಧಿಕಾರದ ಮೈತ್ರಿಗೆ ಕೋಮುವಾದವೇ ರಕ್ಷಾಕವಚ: ಎ. ನಾರಾಯಣ್

PPeepal Media Desk

Peepal Media Desk ರಾಜಕೀಯ, ರಾಜ್ಯ, ವಿಶೇಷ

• 3 ನಿಮಿಷದ ಓದು

ಬಂಡವಾಳಶಾಹಿ-ರಾಜಕೀಯ ಅಧಿಕಾರದ ಮೈತ್ರಿಗೆ ಕೋಮುವಾದವೇ ರಕ್ಷಾಕವಚ: ಎ. ನಾರಾಯಣ್

ಚುನಾವಣಾ ವ್ಯವಸ್ಥೆಯ ಸುಧಾರಣೆ ಮತ್ತು ಆರ್ಥಿಕ ಅಸಮಾನತೆ ನಿವಾರಣೆಗೆ ಪರ್ಯಾಯ ಚಿಂತನೆ ಅಗತ್ಯ; ಜನನುಡಿಯಂತಹ ವೇದಿಕೆಗಳು ಹೊಸ ರಾಜಕೀಯ ಆಲೋಚನೆಗಳಿಗೆ ದಾರಿಯಾಗಲಿ

ಮಂಗಳೂರು: ಬಂಡವಾಳಶಾಹಿಗಳು ಮತ್ತು ರಾಜಕೀಯ ಅಧಿಕಾರದ ನಡುವಿನ ನಂಟು ಪ್ರಜಾಪ್ರಭುತ್ವದ ಸ್ವರೂಪವನ್ನೇ ಬದಲಾಯಿಸುತ್ತಿದ್ದು, ಈ ಮೈತ್ರಿಯನ್ನು ಉಳಿಸಿಕೊಳ್ಳಲು ಕೋಮುವಾದವನ್ನು ರಾಜಕೀಯ ಅಸ್ತ್ರವಾಗಿ ಬಳಸಲಾಗುತ್ತಿದೆ ಎಂದು ಎ. ನಾರಾಯಣ್ ಆತಂಕ ವ್ಯಕ್ತಪಡಿಸಿದರು.

ನಗರದಲ್ಲಿ ನಡೆಯುತ್ತಿರುವ ಜನನುಡಿ–2026ರ ಯುವಜನ ರಾಜಕಾರಣ ಕುರಿತ ಸಂವಾದ ಕಾರ್ಯಕ್ರಮದಲ್ಲಿ ‘ಅಪವಿತ್ರ ಮೈತ್ರಿಗಳು – ಬಂಡವಾಳಶಾಹಿ, ರಾಜಕೀಯ ಅಧಿಕಾರ ಮತ್ತು ಕೋಮುವಾದದ ನಂಟು’ ವಿಷಯದ ಕುರಿತು ಮಾತನಾಡಿದ ಅವರು, ಚುನಾವಣಾ ರಾಜಕೀಯದಲ್ಲಿ ಹಣದ ಪ್ರಭಾವ ಹೆಚ್ಚುತ್ತಿರುವುದರಿಂದ ಜನತಂತ್ರ ಕ್ರಮೇಣ ಹಣತಂತ್ರವಾಗಿ ಪರಿವರ್ತನೆಯಾಗುತ್ತಿದೆ ಎಂದು ವಿಶ್ಲೇಷಿಸಿದರು.

ಭಾರತದ ಸಂವಿಧಾನದ ಮುನ್ನುಡಿಯಲ್ಲಿರುವ ಸಾರ್ವಭೌಮ, ಸಮಾಜವಾದಿ, ಜಾತ್ಯತೀತ ಮತ್ತು ಪ್ರಜಾಸತ್ತಾತ್ಮಕ ಗಣರಾಜ್ಯದ ಆಶಯಗಳನ್ನು ಪ್ರಸ್ತಾಪಿಸಿದ ಅವರು, ಅಂತಿಮ ಅಧಿಕಾರ ಜನರ ಕೈಯಲ್ಲಿರಬೇಕಾದ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂದು ಹಣದ ಪ್ರಭಾವ ನಿರ್ಣಾಯಕವಾಗುತ್ತಿದೆ ಎಂದರು.

1991ರ ಆರ್ಥಿಕ ಉದಾರೀಕರಣದ ನಂತರ ಲೈಸೆನ್ಸ್ ಮತ್ತು ಪರ್ಮಿಟ್ ವ್ಯವಸ್ಥೆ ಬದಲಾದರೂ ಉದ್ಯಮಿಗಳು ಹಾಗೂ ರಾಜಕೀಯ ಅಧಿಕಾರದ ನಡುವಿನ ಪರಸ್ಪರ ಅವಲಂಬನೆ ಕೊನೆಗೊಂಡಿಲ್ಲ. ಬದಲಾಗಿ ಭೂಮಿ ಹಂಚಿಕೆ, ಸರ್ಕಾರಿ ಗುತ್ತಿಗೆಗಳು, ತೆರಿಗೆ ರಿಯಾಯಿತಿಗಳು ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಈ ಸಂಬಂಧ ಹೊಸ ಸ್ವರೂಪ ಪಡೆದುಕೊಂಡಿದೆ. 2ಜಿ ಸ್ಪೆಕ್ಟ್ರಮ್, ಬಳ್ಳಾರಿ ಗಣಿಗಾರಿಕೆ, ಕಲ್ಲಿದ್ದಲು ಹಂಚಿಕೆ ಮತ್ತು ಚುನಾವಣಾ ಬಾಂಡ್‌ಗಳಂತಹ ವಿವಾದಗಳನ್ನು ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಪರಿಶೀಲಿಸಬೇಕಿದೆ ಎಂದು ಅಭಿಪ್ರಾಯಪಟ್ಟರು.

ಚುನಾವಣೆ ಎದುರಿಸಲು ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳಿಗೆ ಅಪಾರ ಪ್ರಮಾಣದ ಹಣದ ಅಗತ್ಯವಿರುವುದು ಉದ್ಯಮಿಗಳು ಹಾಗೂ ರಾಜಕಾರಣಿಗಳ ನಡುವಿನ ಮೈತ್ರಿಗೆ ಪ್ರಮುಖ ಕಾರಣವಾಗಿದೆ. ಅಭ್ಯರ್ಥಿಗಳು ಚುನಾವಣೆಗೆ ಮುನ್ನವೇ ತಮ್ಮ ರಾಜಕೀಯ ಪ್ರಭಾವ ಬೆಳೆಸಿಕೊಳ್ಳಲು ಪ್ರತಿದಿನ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬುದನ್ನು ಉಲ್ಲೇಖಿಸಿದ ಅವರು, ಇಂತಹ ಹಣಕೇಂದ್ರಿತ ರಾಜಕೀಯ ವ್ಯವಸ್ಥೆಯಲ್ಲಿ ಸಾಮಾನ್ಯ ಜನರ ಹಿತಾಸಕ್ತಿಗಳಿಗೆ ಆದ್ಯತೆ ಸಿಗುವುದು ಕಷ್ಟ ಎಂದರು.

ಬಂಡವಾಳಶಾಹಿ ಮತ್ತು ರಾಜಕೀಯ ಅಧಿಕಾರದ ಈ ಹೊಂದಾಣಿಕೆಯ ಪರಿಣಾಮವಾಗಿ ಸಂಪತ್ತು ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ. ದೇಶದ ಶೇ.1ರಷ್ಟು ಶ್ರೀಮಂತರ ಬಳಿ ಶೇ.62ರಷ್ಟು ಸಂಪತ್ತು ಕೇಂದ್ರೀಕೃತವಾಗಿದೆ ಎಂಬ ಅಂಕಿಅಂಶವನ್ನು ಉಲ್ಲೇಖಿಸಿದ ಅವರು, ಈ ಬೆಳವಣಿಗೆಯನ್ನು ಕೇವಲ ಆರ್ಥಿಕ ಸಮಸ್ಯೆಯಾಗಿ ನೋಡದೆ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಎದುರಾಗಿರುವ ಸವಾಲಾಗಿ ಪರಿಗಣಿಸಬೇಕು ಎಂದು ಹೇಳಿದರು.

ಜೆಎನ್‌ಯು ಅರ್ಥಶಾಸ್ತ್ರಜ್ಞೆ ಜಯತಿ ಘೋಷ್ ಅವರು ಬಳಸಿರುವ ‘ಇನಿಕ್ವಾಲಿಟಿ ಎಮರ್ಜೆನ್ಸಿ’ (ಅಸಮಾನತೆಯ ತುರ್ತು ಪರಿಸ್ಥಿತಿ) ಪರಿಕಲ್ಪನೆಯನ್ನು ಪ್ರಸ್ತಾಪಿಸಿದ ಅವರು, ಸಂಪತ್ತಿನ ಅಸಮಾನ ಹಂಚಿಕೆ ಜನರಲ್ಲಿ ಸಾಂವಿಧಾನಿಕ ಸಂಸ್ಥೆಗಳು ಮತ್ತು ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲಿನ ವಿಶ್ವಾಸವನ್ನು ಕುಂದಿಸಬಹುದು ಎಂದು ಎಚ್ಚರಿಸಿದರು.

ಕೋಮುವಾದ ರಾಜಕೀಯ ಸ್ಥಿರತೆಯ ಸಾಧನವಾಗುತ್ತಿದೆ

ಬಂಡವಾಳಶಾಹಿ ಮತ್ತು ರಾಜಕೀಯ ಅಧಿಕಾರದ ನಡುವಿನ ಮೈತ್ರಿಗೆ ಕೋಮುವಾದ ಹೇಗೆ ಪೂರಕವಾಗುತ್ತಿದೆ ಎಂಬುದನ್ನು ವಿವರಿಸಿದ ಅವರು, ಆರ್ಥಿಕ ಅಸಮಾನತೆ, ನಿರುದ್ಯೋಗ, ಬೆಲೆ ಏರಿಕೆ ಮತ್ತು ಸಂಪತ್ತಿನ ಕೇಂದ್ರೀಕರಣದಂತಹ ಸಮಸ್ಯೆಗಳ ಕುರಿತು ಜನರು ಪ್ರಶ್ನಿಸದಂತೆ ಮಾಡಲು ಧಾರ್ಮಿಕ ಮತ್ತು ಕೋಮು ಆಧಾರಿತ ರಾಜಕೀಯವನ್ನು ಬಳಸಿಕೊಳ್ಳಲಾಗುತ್ತಿದೆ ಎಂದು ವಿಶ್ಲೇಷಿಸಿದರು.

ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನ ಸಭೆಯಲ್ಲಿ ಪ್ರಸ್ತಾಪಿಸಿದ್ದ ರಾಜಕೀಯ ಬಹುಮತ ಮತ್ತು ಕೋಮು ಬಹುಮತದ ನಡುವಿನ ವ್ಯತ್ಯಾಸವನ್ನು ವಿವರಿಸಿದ ಅವರು, ಆಡಳಿತದ ಸಾಧನೆ ಮತ್ತು ವೈಫಲ್ಯಗಳನ್ನು ಆಧರಿಸಿ ಜನರು ಸರ್ಕಾರವನ್ನು ಆಯ್ಕೆ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣ. ಆದರೆ ಆಡಳಿತದ ಕಾರ್ಯಕ್ಷಮತೆಯನ್ನು ಪರಿಗಣಿಸದೆ ಧಾರ್ಮಿಕ ಗುರುತಿನ ಆಧಾರದಲ್ಲಿ ನಿರಂತರವಾಗಿ ಬೆಂಬಲಿಸುವ ಮನೋಭಾವ ಅಪಾಯಕಾರಿ ಎಂದರು.

ಕೋಮು ಧ್ರುವೀಕರಣದಿಂದ ಒಂದು ಕಡೆ ಆಡಳಿತ ಬದಲಾವಣೆಯ ಸಾಧ್ಯತೆ ಕುಗ್ಗಿದರೆ, ಮತ್ತೊಂದೆಡೆ ಜನರ ನೈಜ ಬದುಕಿನ ಸಮಸ್ಯೆಗಳು ರಾಜಕೀಯ ಚರ್ಚೆಯ ಕೇಂದ್ರಕ್ಕೆ ಬಾರದಂತೆ ತಡೆಯಬಹುದು. ಈ ಮೂಲಕ ಸಂಪತ್ತಿನ ಕೇಂದ್ರೀಕರಣ ಮತ್ತು ಅಧಿಕಾರದ ದುರುಪಯೋಗದ ವಿರುದ್ಧ ಜನರು ಪ್ರಶ್ನಿಸುವ ಸಾಮರ್ಥ್ಯ ದುರ್ಬಲಗೊಳ್ಳುತ್ತದೆ ಎಂದು ಅಭಿಪ್ರಾಯಪಟ್ಟರು.

2024ರ ಲೋಕಸಭಾ ಚುನಾವಣೆಯಲ್ಲಿ 400 ಸ್ಥಾನಗಳ ಗುರಿಯೊಂದಿಗೆ ನಡೆದ ರಾಜಕೀಯ ಪ್ರಯತ್ನಕ್ಕೆ ಜನರು ತಕ್ಕಮಟ್ಟಿನ ತಡೆ ಒಡ್ಡಿದ್ದಾರೆ ಎಂದು ಹೇಳಿದ ಅವರು, ಚುನಾವಣಾ ಆಯೋಗ, ನ್ಯಾಯಾಂಗ ಮತ್ತು ಮಾಧ್ಯಮಗಳಂತಹ ಸಾಂವಿಧಾನಿಕ ಸಂಸ್ಥೆಗಳ ಪಾತ್ರದ ಬಗ್ಗೆಯೂ ಸಾರ್ವಜನಿಕ ಚರ್ಚೆ ಅಗತ್ಯವಿದೆ ಎಂದರು. ಕ್ಷೇತ್ರ ಪುನರ್ವಿಂಗಡಣೆಯಂತಹ ಪ್ರಕ್ರಿಯೆಗಳನ್ನೂ ಇದೇ ಪ್ರಜಾಸತ್ತಾತ್ಮಕ ದೃಷ್ಟಿಕೋನದಿಂದ ಪರಿಶೀಲಿಸಬೇಕಿದೆ ಎಂದು ಹೇಳಿದರು.

ಚುನಾವಣಾ ವ್ಯವಸ್ಥೆಯಲ್ಲಿ ಮೂಲಭೂತ ಸುಧಾರಣೆ ಅಗತ್ಯ

ಈ ಸಮಸ್ಯೆಗಳಿಗೆ ಕೇವಲ ಸರ್ಕಾರ ಅಥವಾ ರಾಜಕೀಯ ಪಕ್ಷಗಳ ಬದಲಾವಣೆ ಪರಿಹಾರವಾಗುವುದಿಲ್ಲ. ಚುನಾವಣಾ ರಾಜಕೀಯದಲ್ಲಿ ಹಣದ ಪ್ರಭಾವವನ್ನು ನಿಯಂತ್ರಿಸುವ ಆಮೂಲಾಗ್ರ ಸುಧಾರಣೆಗಳು ಜಾರಿಯಾಗಬೇಕು. ಚುನಾವಣೆ ಗೆಲ್ಲಲು ಕೋಟ್ಯಂತರ ರೂಪಾಯಿ ಖರ್ಚು ಮಾಡಬೇಕಾದ ವ್ಯವಸ್ಥೆ ಮುಂದುವರಿದರೆ ಬಂಡವಾಳಶಾಹಿ ಮತ್ತು ರಾಜಕೀಯ ಅಧಿಕಾರದ ನಡುವಿನ ಅವಲಂಬನೆಯೂ ಮುಂದುವರಿಯಲಿದೆ ಎಂದು ಎಚ್ಚರಿಸಿದರು.

ಅಭಿವೃದ್ಧಿ ಮತ್ತು ರಾಷ್ಟ್ರೀಯತೆಯ ಪರಿಕಲ್ಪನೆಗಳನ್ನೂ ಮರುಪರಿಶೀಲಿಸುವ ಅಗತ್ಯವಿದೆ. ಅಭಿವೃದ್ಧಿಯ ಹೆಸರಿನಲ್ಲಿ ಪ್ರಕೃತಿ ಸಂಪನ್ಮೂಲಗಳ ಶೋಷಣೆ, ಜನರ ಒಕ್ಕಲೆಬ್ಬಿಸುವಿಕೆ ಮತ್ತು ಸಂಪತ್ತಿನ ಕೇಂದ್ರೀಕರಣಕ್ಕೆ ಅವಕಾಶ ನೀಡಬಾರದು. ಮಾನವ ಮತ್ತು ಪ್ರಕೃತಿಯನ್ನು ಕೇಂದ್ರವಾಗಿಟ್ಟುಕೊಂಡ ಪರ್ಯಾಯ ಆರ್ಥಿಕ ಮಾದರಿಗಳನ್ನು ರೂಪಿಸುವ ಕುರಿತು ಗಂಭೀರ ಚಿಂತನೆ ನಡೆಯಬೇಕು ಎಂದು ಕರೆ ನೀಡಿದರು.

ಜನಸಾಮಾನ್ಯರ ಪರವಾಗಿ ಹೊಸ ರಾಜಕೀಯ ಆಲೋಚನೆಗಳು ರೂಪುಗೊಳ್ಳಲು ಯುವಜನರ ಪಾಲ್ಗೊಳ್ಳುವಿಕೆ ನಿರ್ಣಾಯಕವಾಗಿದೆ. ಎರಡು-ಮೂರು ವರ್ಷಗಳ ವಿರಾಮದ ಬಳಿಕ ಮತ್ತೆ ಆರಂಭವಾಗಿರುವ ಜನನುಡಿಯಂತಹ ಮುಕ್ತ ವೇದಿಕೆಗಳು ಹೊಸ ಚಿಂತನೆಗಳಿಗೆ ಅವಕಾಶ ಕಲ್ಪಿಸಬೇಕು. ಇಂತಹ ಸಂವಾದಗಳಲ್ಲಿ ಹುಟ್ಟುವ ಸಣ್ಣ ಆಲೋಚನೆಗಳು ಮುಂದಿನ ದಿನಗಳಲ್ಲಿ ದೊಡ್ಡ ಜನಚಳವಳಿಗಳಾಗಿ ರೂಪುಗೊಳ್ಳುವ ಸಾಧ್ಯತೆಯಿದೆ ಎಂದು ಆಶಿಸಿದರು.

ಸಮಸ್ಯೆಗಳ ಅಗಾಧತೆಯನ್ನು ಕಂಡು ನಿರಾಶರಾಗುವ ಬದಲು ಬದಲಾವಣೆಯ ಮೊದಲ ಹೆಜ್ಜೆ ಇಡುವ ಧೈರ್ಯ ಬೆಳೆಸಿಕೊಳ್ಳಬೇಕು. ಜನರ ನುಡಿ ಮತ್ತು ಪ್ರಜಾಸತ್ತಾತ್ಮಕ ಸಂವಾದಗಳೇ ಅಧಿಕಾರ ಕೇಂದ್ರಿತ ರಾಜಕಾರಣ ಹಾಗೂ ಕೋಮುವಾದವನ್ನು ಪ್ರಶ್ನಿಸುವ ಪ್ರಮುಖ ಅಸ್ತ್ರಗಳಾಗಬೇಕು ಎಂದು ಎ. ನಾರಾಯಣ್ ಹೇಳಿದರು.

PPeepal Media Desk

Peepal Media Desk

Peepal Media · ರಾಜಕೀಯ ವಿಭಾಗ

ಸಂಬಂಧಿತ ಸುದ್ದಿಗಳು