ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
KSRTC ಲಗೇಜ್ ಶುಲ್ಕವೂ ದುಪ್ಪಟ್ಟು – ಪ್ರಯಾಣಿಕರು ಹಾಗೂ ಸಣ್ಣ ವ್ಯಾಪಾರಿಗಳ ಜೇಬಿಗೆ ಕತ್ತರಿಇ-ಕೆವೈಸಿ ಗಡುವು ನ.30ರವರೆಗೆ ವಿಸ್ತರಣೆ – ಮೊಬೈಲ್‌ನಲ್ಲೇ ಮಾಡುವುದು ಇನ್ನಷ್ಟು ಸುಲಭಮಾಲಿನ್ಯ ನಿಯಂತ್ರಿಸುವಲ್ಲಿ ಕೇಂದ್ರ ಮೋದಿ ಸರ್ಕಾರ ವಿಫಲ – ಮಲ್ಲಿಕಾರ್ಜುನ ಖರ್ಗೆಶರಣೆ ಸತ್ಯಕ್ಕನ ನೇಮಬೆಂಗಳೂರು ಕೃಷಿ ಮೇಳನಿಗದಿ ನ.16ರಿಂದ 18ವರೆಗೆ – 3 ಹೊಸ ಬೆಳೆ ತಳಿಗಳ ಬಿಡುಗಡೆಹಾಸನಾಂಬೆಯ ಗರ್ಭಗುಡಿಯ ‘ನಂದಾದೀಪ’ ಪವಾಡವೇ? ಶಬರಿಮಲೆ ಮಕರಜ್ಯೋತಿಗೂ ಹಾಸನಾಂಬೆಯ ‘ನಂದಾದೀಪ’ಕ್ಕೂ ಇರುವ ಸಾಮ್ಯತೆಗಳಿವುನ.13ರಂದು ಮೋದಿ ಕರ್ನಾಟಕ ಪ್ರವಾಸ: ಬೆಂಗಳೂರು ಮೆಟ್ರೋ ನಿಲ್ದಾಣ ಉದ್ಘಾಟನೆ, ಮೈಸೂರಿನಲ್ಲಿ ವಿಶ್ವದ ಮೊದಲ ಟಿಲ್ಟೆಡ್ ಎಲ್‌ಇಡಿ ತಾರಾಲಯ ಉದ್ಘಾಟನೆಉತ್ತರ ಪ್ರದೇಶ ಚುನಾವಣೆಗೆ ಬಿಜೆಪಿಯ ಹೊಸ ಲೆಕ್ಕಾಚಾರ: ಹಿರಿಯ ನಾಯಕರಿಗೆ ಅಖಾಡಕ್ಕಿಳಿಯುವ ಸೂಚನೆ; ಹಾಲಿ ಶಾಸಕರಲ್ಲಿ ಹೆಚ್ಚಿದ ಆತಂಕ!ಭಾರತದ ಪ್ರಜಾಪ್ರಭುತ್ವ ಸ್ವಾತಂತ್ರ್ಯದಲ್ಲಿ ಮತ್ತೆ ಒಂದು ಅಂಕ ಕುಸಿತ: “ಫ್ರೀಡಂ ಹೌಸ್” ವರದಿಯಲ್ಲಿ 62 ಅಂಕಶೇಖ್ ಹಸೀನಾ ಪಾಲಿಗೆ ಪಾಸ್‌ಪೋರ್ಟ್ ಬಾಗಿಲು ಬಂದ್! ಮರಣದಂಡನೆ ತೀರ್ಪೇ ಅಂತಿಮ ಎಂದ ಬಾಂಗ್ಲಾದೇಶದ ಅಭಿಯೋಜಕಪೌರತ್ವ ಸಾಬೀತಿಗೆ ಪ್ಯಾನ್, ವೋಟರ್ ಐಡಿ ಸಾಲದು: ಗೌಹಾಟಿ ಹೈಕೋರ್ಟ್ ಆದೇಶಅಸ್ಸಾಂನಲ್ಲಿ ಹಳಿ ತಪ್ಪಿದ ಕೋಲ್ಕತ್ತಾ-ಸೈರಾಂಗ್ ಎಕ್ಸ್‌ಪ್ರೆಸ್: ಅದೃಷ್ಟವಶಾತ್ ತಪ್ಪಿದ ಅನಾಹುತಆ್ಯಪ್‌ಗಳ ಕಪಿಮುಷ್ಠಿಯಲ್ಲಿ ಗಿಗ್ ಕಾರ್ಮಿಕರ ಬದುಕು: ಕಾರ್ಪೊರೇಟ್ ಬೆಳವಣಿಗೆಯ ನಡುವೆ ಅತಂತ್ರವಾದ ಕಾರ್ಮಿಕ ಹಕ್ಕುಗಳುಬಾಬರಿ ಮಸೀದಿ ಧ್ವಂಸದ ಬಗ್ಗೆ ಸೋನಿಯಾ ಗಾಂಧಿ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ: ವಿಎಚ್‌ಪಿ ನಾಯಕ ಸುರೇಂದ್ರ ಜೈನ್2026ರ ಮೊದಲ 9 ತಿಂಗಳಲ್ಲಿ ಮುಸ್ಲಿಮರು, ಕ್ರೈಸ್ತರ ವಿರುದ್ಧ 322 ದ್ವೇಷ ಅಪರಾಧ: 54 ಮಂದಿ ಸಾವು, 83 ದ್ವೇಷ ಭಾಷಣ ದಾಖಲು – ಎಪಿಸಿಆರ್ ವರದಿಶಾ ಬಾನೊ ಪ್ರಕರಣದ ಕುರಿತು ರಾಜೀವ್ ಅವರನ್ನು ಪ್ರಶ್ನಿಸಿದ್ದ ಸೋನಿಯಾ ಗಾಂಧಿ; ಆಗ ಪ್ರಧಾನಿ ಹೇಳಿದ್ದು…ಅಮೆರಿಕದ ಸಮನ್ಸ್‌ಗೆ ಭಾರತದಿಂದ ಬಲವಾದ ವಿರೋಧ: ದೋವಲ್ ಮೇಲಿನ ಆರೋಪ ತಳ್ಳಿಹಾಕಿದ ಹೊಸದೆಹಲಿಪ್ರಿಯಾಂಕ್ ಖರ್ಗೆ ವಿರುದ್ಧ ಬೆಂಗಳೂರಿನಲ್ಲಿ ದೂರು: ಕೋಮು ಸೌಹಾರ್ದತೆಗೆ ಧಕ್ಕೆ ಆರೋಪ, FIR ದಾಖಲಿಸಲು ಮನವಿರೈತರು 3 ತಿಂಗಳು ದುಡಿದು, 9 ತಿಂಗಳು ಇಸ್ಪೀಟ್, ಗುಟ್ಕಾ, ಮದ್ಯದಲ್ಲೇ ಕಳೆಯುತ್ತಾರೆ: ಬಿಜೆಪಿ ಸಂಸದ ಜನಾರ್ದನ್ ಮಿಶ್ರಾ ವಿವಾದಾತ್ಮಕ ಹೇಳಿಕೆ!2024ರ ಚುನಾವಣಾ ಮತ ಎಣಿಕೆಯಲ್ಲಿ ಭಾರೀ ವ್ಯತ್ಯಾಸ: ಬಯಲಾಯ್ತು ಸ್ಫೋಟಕ ಸತ್ಯ

ಶರಣೆ ಸತ್ಯಕ್ಕನ ನೇಮ

PPeepal Media Desk

Peepal Media Desk ಅಂಕಣ

• 4 ನಿಮಿಷದ ಓದು

ಶರಣೆ ಸತ್ಯಕ್ಕನ ನೇಮ

ಮೊದಲು ನಡೆ ನಂತರ ನುಡಿ ಎಂದೇ ನಡೆದಂತೆ ನುಡಿದು ನಡೆನುಡಿಯ ವಚನ ಪಾಲಿಸಿದ ನಿಯಮವನ್ನು ನೇಮವೆಂದು ಬದುಕಿನ ತಿಳಿವಿಗೆ ನೇಮ ತಿಳಿಸಿದ ಸತ್ಯಕ್ಕನದು ಶರಣ ಜೀವನ ಧರ್ಮದ ನೇಮ. 12 ನೇ ಶತಮಾನದ ಶರಣೆ ಸತ್ಯಕ್ಕರ ಬಗ್ಗೆ ಮನಮುಟ್ಟುವಂತೆ ಬರೆದಿದ್ದಾರೆ.. ಲೇಖಕಿ ಡಾ. ಲಲಿತಾ ಕೆ ಹೊಸಪ್ಯಾಟಿ

ಕಾಯಕವೇ ನೇಮ, ದಯವೇ ಧರ್ಮದ ನೇಮ, ಆಚಾರವೇ ಸನ್ನಡತೆಯ ನೇಮ ಜಂಗಮರ ಪ್ರಸಾದ ಸೇವೆಯೇ ನೇಮ, ಗುರುವಿನ ಪದತಲದಲ್ಲಿ ಜ್ಞಾನ ಪಡೆಯುವುದೇ ನೇಮ, ಅರಿವಿನಲ್ಲಿ ಪ್ರಮಾಣವಾಗಿರುವುದೇ ನೇಮವೆಂದು ನೇಮ ಪಾಲಿಸಿದವರು 12ನೇ ಶತಮಾನದ ನಮ್ಮ ಶಿವಶರಣೆಯರು. ಕೇವಲ ಹೊರಗಿನ ಆಚರಣೆಯನ್ನು ನಿಯಮವೆಂದು ಮನ್ನಿಸಿದವರಲ್ಲ. ಅವರದು ಅಂತರಂಗ ಬಹಿರಂಗ ಎರಡೂ ಶುದ್ಧವಾದ, ಸತ್ಯ ಶುದ್ಧಿಯ ನೇಮ, ದಾಸೋಹ, ಕಾಯಕ, ಪ್ರಸಾದ, ಗುರು ಸೇವೆಯನ್ನು ಭಕ್ತಿಯಿಂದ ಕೈಗೊಂಡವರು. ಸಂಸಾರದೊಳಗೆ ಸಾರ ಜೀವನ ನಡೆಸಿ ಅನುಭಾವದಲ್ಲಿ ಸಾಧನೆ ಮಾಡಿದ ನಿಯಮದವರು ನಮ್ಮ ಶಿವಶರಣೆಯರು.

ಮೊದಲು ನಡೆ ನಂತರ ನುಡಿ ಎಂದೇ ನಡೆದಂತೆ ನುಡಿದು ನಡೆನುಡಿಯ ವಚನ ಪಾಲಿಸಿದ ನಿಯಮವನ್ನು ನೇಮವೆಂದು ಬದುಕಿನ ತಿಳಿವಿಗಗೆ ನೇಮ ತಿಳಿಸಿದ ಸತ್ಯಕ್ಕನದು ಶರಣ ಜೀವನ ಧರ್ಮದ ನೇಮ. 12ನೇ ಶತಮಾನದಲ್ಲಿದ್ದ ಶರಣೆ ಕಸಗೂಡಿಸುವ ಕಾಯಕದಲ್ಲಿ ನಿರತಳಾಗಿದ್ದವಳು ಶರಣೆ ಸತ್ಯಕ್ಕ, ಸತ್ಯಕ್ಕ ಹೇಳಿದ ಶುದ್ಧ ನೇಮ ಇಡೀ ಲೋಕವೇ ಒಪ್ಪುವಂತದು. ಆ ನೇಮ ಎಂದರೆ ಸಮರ್ಪಣೆ, ಸದಾಚಾರ, ಸಮಾನತೆ, ಪರಸ್ಪರ ಗೌರವ, ಅರಿವಿನ ನಡೆ, ಇನ್ನೊಬ್ಬರ ವಸ್ತುವನ್ನು ಕದಿಯದಿರುವುದು, ನಿಗರ್ವದಿಂದ ಬಾಳುವುದು, ಸಹನೆಯಲ್ಲಿ ಇರುವುದು ನೇಮವಾಗಿದೆ. ಬಸವಣ್ಣನವರು ಸಹಿತ ನೇಮದ ಕುರಿತು ಒಂದು ವಚನದಲ್ಲಿ ಹೀಗೆ ಹೇಳಿದ್ದಾರೆ.
ಕಳಬೇಡ ಕೊಲಬೇಡ ಕೊಳಬೇಡ
ಹುಸಿಯ ನುಡಿಯಲು ಬೇಡ
ಪುಣ್ಯ ಬೇಡ ಅನ್ಯರಿಗೆ ಅಸಹ್ಯ ಪಡಬೇಡ
ತನ್ನ ಬಣ್ಣಿಸಬೇಡ ಎದಿರು ಹಳಿಯಲು ಬೇಡ
ಇದೆ ಅಂತರಂಗ ಶುದ್ದಿ ಇದೇ ಬಹಿರಂಗ ಶುದ್ಧಿ
ಇದೇ ನಮ್ಮ ಕೂಡಲ ಸಂಗಮದೇವನನೊಲಿಸುವ ಪರಿ

ಎಂದು ಸಪ್ತ ಪಾತಕ ದುರ್ಗುಣಗಳನ್ನು ತೊರೆದು, ನಮ್ಮ ಒಳಹೊರಗು ಶುದ್ಧ ಮಾಡಿಕೊಂಡು ಶುದ್ಧ ಮನಸ್ಸಿನಿಂದ ಮನುಷ್ಯತ್ವವನ್ನು ಪಡೆದು ಪಾಲಿಸಬೇಕೆಂಬುದನ್ನು ತಿಳಿಸುತ್ತಾರೆ.

ಬದುಕಬೇಕೆಂಬುದಕ್ಕೆ ಔಚಿತ್ಯದ ನಿಯಮಗಳನ್ನು ನೈತಿಕವಾಗಿ ಜೀವನ ನಡೆಸುವುದು ಅಷ್ಟು ಸುಲಭದ ಮಾತಲ್ಲ, ಜೀವನ ಸಾರ್ಥಕವಾಗುವುದು ಎಂದರೆ ಸಮಾಜಕ್ಕೂ ಒಳಿತು ಮಾಡುವುದೇ ಆಗಿದೆ, ನೀತಿಯಿಂದ ಬದುಕುವುದೇ ನೇಮ ಹೊರತು ಅರ್ಥವಿಲ್ಲದ ನಿಯಮಗಳನ್ನು ಪಾಲಿಸಿ, ಇತರರಿಗೆ ಕಡುಕಷ್ಟ ನೀಡಿದರೆ ಅದು ನೇಮ ಅಲ್ಲ. ಇಂತಹ ಕಪಟ ನೇಮವನ್ನು ದೇವರು ಸಹಿತ ನಿರಾಕರಿಸುತ್ತಾನೆ, ಸತ್ಯಶುದ್ಧ ನೇಮ ಎಂದರೆ ಏನು ಎಂಬುದನ್ನು ಸತ್ಯಕ್ಕ ಹೀಗೆ ಹೇಳುತ್ತಾಳೆ..
ಅರ್ಚನೆ ಪೂಜನೆ ನೇಮವಲ್ಲ
ಮಂತ್ರ ತಂತ್ರ ನೇಮವಲ್ಲ
ದೀಪಧೂಪದಾರತಿ ನೇಮವಲ್ಲ
ಪರಧನ ಪರಸ್ತ್ರೀ ಪರದೈವಂಗಳಿಗೆರಗದಿಪ್ಪುದೇ ನೇಮ
ಶಂಭುಜಕ್ಕೇಶ್ವರನಲ್ಲಿ ನೀವು ಕಾಣಿರಣ್ಣ ನಿತ್ಯ ನೇಮ
ಎನ್ನುತ್ತಾಳೆ.

ನಾವು ನೇಮ ಪಾಲಿಸುವುದು ನೇಮ ಹಿಡಿಯುವುದು ನಮ್ಮದು ವು ನೇಮಗಳು ಎಂಬಂತ ನೇಮಗಳನ್ನು ನಿಯಮಿತವಾಗಿ ಪಾಲಿಸಿಕೊಂಡು ಬರುತ್ತೇವೆ. ಅವುಗಳೆಲ್ಲವೂ ನಮ್ಮ ವೈಯಕ್ತಿಕ ಜೀವನದ ಸುಖಕ್ಕಾಗಿಯೇ ನಾವೇ ಮಾಡಿಕೊಂಡ ನೇಮಗಳು. ದೇವರನ್ನು ಒಲಿಸುವುದಕ್ಕಾಗಿ ಒಳಗಿನ ದುರ್ಭುದ್ದಿ ಬಿಡದೇ, ಒಳಗೊಂದು ಅಂಧಕಾರವಿಟ್ಟು ಹೊರಗೆ ಹೊರೆ ಹೊರೆ ಧೂಪ ದೀಪ ಬೆಳಗಿಸಿ, ಬೆಳಕು ತೋರೆಂದು ಮಾಡುವುದು ನೇಮವಲ್ಲ. ಒಳಗಿನ ಬೆಳಕು ಮೊದಲು ದೇವರಿಗೆ ಕಾಣುವಂತದ್ದು. ಆಗ ಹೊರಗಿನ ಕತ್ತಲೆ ಕತ್ತಲೆ ಅನಿಸದು. ತಾನೇ ಬೆಳಕಿನತ್ತ ನಮ್ಮನ್ನು ಕರೆದೊಯ್ಯುವುದು. ದೇವರನ್ನು ಒಲಿಸುವುದಕ್ಕಾಗಿಯೇ ಮಡಿ ಮಾಡುವುದು, ಹೊರಗಿನ ಮಡಿಗಿಂತ ಒಳಗಿನ ಮನಶುದ್ದಿಯ ಮಡಿ ಮುಖ್ಯ. ತೋರಿಕೆಗೆ ಮಡಿತೊಟು ಒಳಗೊಂದು ಕಲ್ಮಲ ಉಂಬಿಕೊಂಡಿದ್ದರೆ, ಅದು ಮಡಿ ಹೇಗಾದೀತು? ದೇವರು ಒಲಿವನೆಂದು ಕೆಲವೊಂದು ಮಂತ್ರಗಳನ್ನು ಉಚ್ಚರಿಸಿದರೆ ನೇಮವಲ್ಲ ಇನ್ನೊಬ್ಬರನ್ನು ನೋಯಿಸಿದಂತೆ ಮಾತನಾಡುವ ನುಡಿಗಳೆ ನೇಮ, ದೀಪದ ಧೂಪದಾರತಿಗಳಿಗಿಂತ ಒಳಗಿನ ಭಕುತಿಯ ಆರತಿ ನೇಮ ಪಾಲಿಸಿದರೆ ಹೊರಗಿನ ನೇಮಕ್ಕೆ ಬೆಲೆ ಎಂದು ತಾನೂ ಎಂತಹ ನೇಮದವಳು, ಪ್ರಾಮಾಣಿಕತೆಯ ನೇಮ ಪಾಲಿಸುತ್ತೇನೆ ಎನ್ನುತ್ತಾಳೆ ಸತ್ಯಕ್ಕ.

ಸತ್ಯಕ್ಕನ ನಿಜವಾದ ನಿಯಮವೆಂದರೆ ಪರಧನ ಪರಸ್ತ್ರೀ ಪರದೈವ ಗಳಿಗೆ ಎರಗದಿಪ್ಪದಿರುವುದೇ ನೇಮ ಇದೇ ಸತ್ಯ ಎನ್ನುವುದೇ ಸತ್ಯಕ್ಕನ ನೇಮಮವಾಗಿದೆ. ಪರಧನ ವೆಂದರೆ ಪರರು ಕೂಡಿಟ್ಟ ಹಣಕ್ಕೆ ಆಸೆ ಪಡುವುದು, ತಮ್ಮದಲ್ಲದ ಕಾಯಕ ವಿಲ್ಲದೆ ಸಂಪಾದಿಸಿದ, ಮೋಸ ವಂಚನೆ ಬಲಪ್ರಯೋಗಗಳಿಂದ ಪಡೆದದ್ದು. ಸುಳ್ಳು ಕಪಟ ದುರ್ಮಾರ್ಗದಿಂದ ಗಳಿಸಿಕೊಂಡದ್ದು. ಬೇರೆಯವರು ಕೈಎತ್ತಿ ಕೊಟ್ಟ ಹಣವನ್ನು ತನ್ನದೆಂದು ಪರಿಭಾವಿಸುವುದು. ಇದೂ ಕೂಡಾ ಕಪಟತನದ ನಿಯಮವೇ ಹೊರತು ಗುಣದ ನಿಯಮವಲ್ಲ. ಹೆಣ್ಣುಮಕ್ಕಳನ್ನು ವಿಕೃತ ಅಟ್ಟಹಾಸದಲ್ಲಿ ಕಾಮದೃಷ್ಟಿಯಲ್ಲಿ ಕಾಣುವುದು. ಕೆಟ್ಟ ದೃಷ್ಟಿಯಲ್ಲಿ ವೀಕ್ಷಿಸುವುದು, ಮೋಹದ ನೋಟ ಹರಿಸುವುದು, ಸಲ್ಲದ ನೇಮಗಳು. ಅವಳಲ್ಲಿ ಸಹೋದರತ್ವದ ಭಾವ ಕಾಣದೆ, ತಾಯಿಯ ಮಮತೆ ನೋಡದೆ, ಮಗಳ ವಾತ್ಸಲ್ಯವನ್ನು ತೋರದೆ, ಕಾಮುಕ ದೃಷ್ಟಿಯಿಂದ ಗುಲಾಮಗಿರಿಯ ಸ್ಥಾನದಲ್ಲಿಟ್ಟು ಕಾಣುವುದನ್ನು ನೇಮವಲ್ಲ ಎನ್ನುತ್ತಾಳೆ.

ಪರದೈವಗಳೆಂದರೇನು ನಂಬಿದಂತೆ ತಾನು ನಂಬಿದ ಏಕೈಕ ದೈವ ಶಂಬು ಜಕ್ಕೇಶ್ವರ ಅವನೇ ತನ್ನ ಏಕೈಕ ದೈವ, ತಂದೆ ತಾಯಿ ಬಂಧು ಬಳಗ ಎಲ್ಲಾ ಆ ದೈವವೇ. ನಂಬಿದೊಡೆ ನಡೆಸುವವವನು ಅವನೇ. ಒಮ್ಮೆ ನಂಬಿಕೆಯಿಂದ ಶರಣಾದ ಮೇಲೆ ಆ ಶಂಭು ಜಗವನ್ನೆಲ್ಲಾ ಕಾಯುವನು. ಅವನೇ ಹಾನಿ ಸಂಕಷ್ಟಗಳಿಂದ ನಮ್ಮನ್ನು ಪಾರು ಮಾಡುವನು. ಅದು ಬಿಟ್ಟು ನೀನಲ್ಲವೆಂದು ಪದೇಪದೇ ಮನಸ್ಸನ್ನು ಬದಲಿಸಿ ದೈವಗಳನ್ನು ಬದಲಿಸುತ್ತಾ ಹೋದರೆ ಚಂಚಲ ಮನಸ್ಸು ಯಾವ ದೈವದ ನಂಬಿಕೆಯನ್ನು ಉಳಿಸಿಕೊಳ್ಳುವುದಿಲ್ಲ. ನಂಬಿದ ದೈವವೇ ನಮ್ಮನ್ನು ಕೈ ಹಿಡಿಯುವುದು, ಅದರಿಂದಲೇ ಮುಕ್ತಿ ಕಾಣಬೇಕೆ ಹೊರತು ಕಂಡ ಕಂಡ ದೈವವನ್ನು ಬೇಡುತ್ತಾ, ಮನದ ಭಕುತಿಯನ್ನು ಭಾಗಮಾಡುತ್ತಾ ಹೋದಲ್ಲಿ, ಕರೆದೊಡನೆ ಯಾವ ದೈವ ಕರ ಹಿಡಿಯಲು ಬರಬೇಕು? ಹೇಳಿ ಮನ ಕರಗದ ಭಕ್ತಿ ಕರಗುತ್ತಾ ಹೋಗುತ್ತದೇ ಹೊರತು ಗಟ್ಟಿಯಾಗುವುದಿಲ್ಲ. ಈ ತೆರನಾಗಿ ಕಾಯಕದಿಂದ ವಂಚಿತರಾಗಿ ನೇಮ ಪಾಲಿಸುವುದು ಅಲ್ಲ ಕಾಯಕವೇ ಹಿರಿದಾದ ನಿಯಮವೆಂದು ಪಾಲಿಸಿದರೆ ಅದು ಪೂಜೆ ಅರ್ಚನೆ ಗಳಿಗಿಂತ ಮಿಗಿಲಾದದ್ದು ಎನ್ನುತ್ತಾಳೆ.

ಅದಕ್ಕಾಗಿಯೇ ಸದ್ಭಕ್ತರ ಮನೆಯಂಗಳದ ಕಸಗುಡಿಸುವ ಕಾಯಕದಲ್ಲಿ ನಿರತಳಾದಳು. ಸತ್ಯಕ್ಕ ನೇಮಕ್ಕೆ ಭಂಗ ಬಾರದಂತೆ ತನ್ನ ಕಾಯಕವನ್ನು ಪಾಲಿಸಿದ ರೀತಿ ಅನನ್ಯ.ಆಕೆಯದು ಸತ್ಯಶುದ್ಧ ಕಾಯಕ. ಕಸಗೂಡಿಸುವ ಕಾಯಕದಲ್ಲಿ ಪಾಲಿಸಿದ ನೇಮ, ಮತ್ತಿನ್ನಾವುದೇ ಕಾಯಕದಲ್ಲೂ ಪಾಲಿಸಬೇಕಾದ ನೇಮ ಮಾಡಿದ ಹಿರಿಮೆ ಸತ್ಯಕ್ಕನದು. ಕಸಗುಡಿಸುವ ಕಾಯಕದಲ್ಲಿಯ ಹಿರಿಮೆಯನ್ನು ಎತ್ತಿ ಹಿಡಿದಳು, ಬದುಕೊಂದು ಭವದಲ್ಲಿ ಬದುಕಲು ಅನುಭಾವವೂ ಬೇಕು. ಆ ಅನುಭೂತಿಯನ್ನು ಕಾಯಕ ತತ್ತ್ವದಿಂದಲೇ ಪಡೆಯುವ ನೇಮವನ್ನು ಈ ಕೆಳಗಿನ ವಚನ ಸಾಕ್ಷೀಕರಿಸಿದ್ದಾಳೆ.
ಶಿವಶರಣೆಂದು ಪೂರ್ವಾರ್ಜಿತವ ಉಂಡೊಡೆ ಭಂಗ
ಪುಣ್ಯ ಪುಣ್ಯಂಗಳ ಎಣಿಸಬಾರದ ಭಾಷೆ
ಲಂಚ ವಂಚನಕ್ಕೆ ಕೈಯಾನದ ಭಾಷೆ
ಬಟ್ಟೆಯಲ್ಲಿ ಹೊನ್ನು ವಸ್ತ್ರ ಬಿದ್ದಿದ್ದಡೆ
ಕೈಮುಟ್ಟಿ ಎತ್ತಿದೆ ನಾದೊಡೆ ನಿಮ್ಮಾಣೆ
ನೀವಿಕ್ಕಿದ ಅಕ್ಷಯ ದೊಳಗಿಪ್ಪೆನಯ್ಯ ಶಂಭುಜಕ್ಕೇಶ್ವರ

ಎನ್ನುತ್ತಲೇ ಕಾಯಕದಿಂದಲೇ ಬಂದ ಪ್ರಸಾದವನ್ನು ಸೇವಿಸಿ ಆ ನೇಮದಲ್ಲಿ ಇದ್ದ ಹಿಂದೆ ಯಾರೇ ಕೊಟ್ಟಿದ್ದನ್ನು ನಿನ್ನೆ ಉಳಿದಿದ್ದನ್ನು ಕೂಡಿಟ್ಟುಕೊಂಡು ಉಣ್ಣಲು ತಾನು ಮುಂದಾದರೆ ಅದು ತನ್ನ ನೇಮಕ್ಕೆ ಭಂಗ ಎನ್ನುತ್ತಾಳೆ. ಈ ಜನ್ಮ ಹುಟ್ಟಿ ಬಂದ ಮೇಲೆ ಜನಕ್ಕಿಂತ ಮನಕ್ಕೆ ನಿಷ್ಠವಾಗಿರಬೇಕು. ಹೊರತು ಪುಣ್ಯ ಪಾಪಗಳು ಕಾಡುವುದು ಎಂದು ಒಡೆದ ಮನಸ್ಸು ಇಟ್ಟುಕೊಂಡು ಬದುಕಬಾರದು ಎನ್ನುತ್ತಾ ಚಂಚಲ ಮನಸ್ಸಿನಿಂದ ಕಾಯಕ ಮಾಡುವುದರಿಂದ ಅಕಳಂಕ ಗುರುವಿಗೆ ಸಲ್ಲದು, ನೇಮ ಎನ್ನುತ್ತಾ ನೇಮದ ತತ್ವವನ್ನು ಹೇಳುತ್ತಾಳೆ. ಕಸಗೂಡಿಸುವ ಕಾಯಕದಲ್ಲಿ ನಿರತಲಾಗಿರುವಾಗ, ಭಂಗ ತರಲು ಹೊಂಚು ಹಾಕಿದರೆ ತಾನು ಅದನ್ನು ಖಂಡಿತ ಹೇಗೆ ವಿರೋಧಿಸುತ್ತೇನೆ ಎಂಬುದಕ್ಕೆ ಅವರ ವಚನವೇ ಸಾಕ್ಷ. ಯಾರಾದರೂ ಲಂಚವನ್ನು ವಂಚನೆ ಮಾಡುವುದಕ್ಕಾಗಿಯೇ ಕೊಟ್ಟರೆ ನಿರಾಕರಿಸುವ ಅನುಭಾವದ ಹಿರಿಮೆ ಬೇಕು, ಒಬ್ಬರ ಸಂಪತ್ತಿಗೆ ಆಸೆ ಪಡದಿರುವುದೇ ನೇಮ. ಕಸಗುಡಿಸುವ ಸಮಯದಲ್ಲಿ ಅಂಗಳದಲ್ಲಿ ವಸ್ತ್ರ ಬಿದ್ದಿದ್ದರು ಕೈಮುಟ್ಟಿ ಎತ್ತಿ ಕೊಳ್ಳಲಾರೆ ಇದೆ ನನಗೆ ನೇಮ ಎನ್ನುವ ಸತ್ಯಕ್ಕನ ನುಡಿ ಜಗಕ್ಕೇ ಆದರ್ಶ.

ಇನ್ನೊಬ್ಬರನ್ನು ಚುಚ್ಚಿ, ಸುಲಿದು, ಹಿಂಸಿಸಿ, ಕೊಂದು ಬದುಕುವುದೇ ಬದುಕೆಂದು ಭಾವಿಸಿ ಬದುಕುತ್ತಿರುವವರ ದುಷ್ಟತನಕ್ಕೆ ಸತ್ಯಕ್ಕನ ಪ್ರಸಾದ ವಾಣಿಯೇ ಅಕ್ಷಯದ ನುಡಿ. ಇಂತಹ ನೇಮ ಪಾಲಿಸಿದರೆ ಸಮಾಜವು ಸದಾಚಾರ ಸಂಪನ್ನವಾಗಿರುತ್ತದೆ. ಸರ್ವರ ಲೇಸ ಬಯಸುವಲ್ಲಿಯೇ ನಮ್ಮ ಹಿತವು ಅಡಗಿರುತ್ತದೆ. ಇಂತಹ ನೇಮ ನಮ್ಮದಾಗಿರಬೇಕು.

PPeepal Media Desk

Peepal Media Desk

Peepal Media · ಅಂಕಣ ವಿಭಾಗ

ಸಂಬಂಧಿತ ಸುದ್ದಿಗಳು